IND vs NZ: ಭಾರತ vs ನ್ಯೂಝಿಲೆಂಡ್ ಪಂದ್ಯಕ್ಕೆ ಮಳೆ ಭೀತಿ

India vs New Zealand, 1st Test: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಿದರೆ, ಎರಡನೇ ಪಂದ್ಯವು ಪುಣೆಯಲ್ಲಿ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿದೆ.

IND vs NZ: ಭಾರತ vs ನ್ಯೂಝಿಲೆಂಡ್ ಪಂದ್ಯಕ್ಕೆ ಮಳೆ ಭೀತಿ
IND vs NZ
Follow us
| Updated By: ಝಾಹಿರ್ ಯೂಸುಫ್

Updated on: Oct 15, 2024 | 10:13 AM

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ಅ.16) ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಏಕೆಂದರೆ ಬೆಂಗಳೂರಿನ ಸುತ್ತ ಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ನಾಳೆ ನಿಗದಿತ ಸಮಯಕ್ಕೆ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಏಕೆಂದರೆ ಹವಾಮಾನ ವರದಿ ಪ್ರಕಾರ, ಬುಧವಾರ ಬೆಂಗಳೂರಿನಲ್ಲಿ ಶೇ.100 ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ 41% ಮಳೆಯಾಗಲಿದೆ. ಬೆಳಿಗ್ಗೆಯಿಂದಲೇ ತುಂತುರು ಮಳೆ ಶುರುವಾಗುವುದರಿಂದ ಪಂದ್ಯವು ತಡವಾಗಿ ಆರಂಭಗೊಳ್ಳುವ ಸಾಧ್ಯತೆಯಿದೆ.

ಇನ್ನು ಎರಡನೇ ದಿನದಾಟಕ್ಕೂ ವರುಣ ಅಡ್ಡಿಪಡಿಸಲಿದ್ದಾನೆ. ಗುರುವಾರ ಮಧ್ಯಾಹ್ನಯಿಂದ ಬೆಂಗಳೂರಿನಲ್ಲಿ ಶೇ.40ರಷ್ಟು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಗೆಯೇ ಮೂರನೇ ದಿನದಾಟದ ವೇಳೆ 67% ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ.

ಕೊನೆಯ ಎರಡು ದಿನದಾಟಗಳಲ್ಲಿ ಕ್ರಮವಾಗಿ 25% ಮತ್ತು 24% ರಷ್ಟರ ಮಳೆಯ ಸಂಭವನೀಯತೆ ಇದೆ. ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಪೂರ್ಣ ದಿನದಾಟಗಳು ನಡೆಯುವುದು ಅನುಮಾನ. ಅಲ್ಲದೆ ಪಂದ್ಯ ನಡೆದರೂ ಮಳೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್​ಗೆ ಗೇಟ್​ ಪಾಸ್..!

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ , ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್​ಗೆ ಮಾತ್ರ), ಇಶ್ ಸೋಧಿ (ಮೊದಲ ಪಂದ್ಯಕ್ಕೆ ಅಲಭ್ಯ).

ಭಾರತ vs ನ್ಯೂಝಿಲೆಂಡ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಬುಧವಾರ, 16 ಅಕ್ಟೋಬರ್ 2024 9:30 AM ಬೆಂಗಳೂರು
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಗುರುವಾರ, 24 ಅಕ್ಟೋಬರ್ 2024 9:30 AM ಪುಣೆ
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಶುಕ್ರವಾರ, 1 ನವೆಂಬರ್ 2024 9:30 AM ಮುಂಬೈ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ