IND vs NZ: ಕಾನ್ಪುರದಲ್ಲಿ ಮಿಂಚಿದ ಕಿವೀಸ್ ಲೆಜೆಂಡ್; 5 ವಿಕೆಟ್ ಪಡೆದು ದಾಖಲೆ ಬರೆದ ಟಿಮ್ ಸೌಥಿ!

| Updated By: ಪೃಥ್ವಿಶಂಕರ

Updated on: Nov 26, 2021 | 1:21 PM

IND vs NZ: ಈ ಅವಧಿಯಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿದ್ದು, ಎಲ್ಲರೂ ಟಿಮ್ ಸೌಥಿಗೆ ಬಲಿಯಾದರು. ಈ ಮೂಲಕ ಕಿವೀಸ್ ದಿಗ್ಗಜ ಟೆಸ್ಟ್ ಕ್ರಿಕೆಟ್​ನಲ್ಲಿ 13ನೇ ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಬಳಿಸುವ ಅದ್ಭುತ ಸಾಧನೆ ಮಾಡಿದ್ದಾರೆ.

IND vs NZ: ಕಾನ್ಪುರದಲ್ಲಿ ಮಿಂಚಿದ ಕಿವೀಸ್ ಲೆಜೆಂಡ್; 5 ವಿಕೆಟ್ ಪಡೆದು ದಾಖಲೆ ಬರೆದ ಟಿಮ್ ಸೌಥಿ!
ಕಿವೀಸ್ ಆಟಗಾರರು
Follow us on

ಕಾನ್ಪುರ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸ್ಪಿನ್ನರ್‌ಗಳ ಆಧಾರದ ಮೇಲೆ ಭಾರತದ ವಿರುದ್ಧ ಗೆಲ್ಲಲು ತಂತ್ರ ರೂಪಿಸಿದ್ದರು ಮತ್ತು ಮೂವರು ಸ್ಪಿನ್ನರ್‌ಗಳೊಂದಿಗೆ ಮೈದಾನಕ್ಕಿಳಿದರು. ಆದರೆ ನಾಯಕನ ತಂತ್ರವು ಮೊದಲ ಎರಡು ದಿನ ಮತ್ತು ಎಂದಿನಂತೆ ಒಮ್ಮೆಯೂ ಈ ತಂತ್ರ ಕಾರ್ಯನಿರ್ವಹಿಸಲಿಲ್ಲ. ಮತ್ತೆ ನ್ಯೂಜಿಲೆಂಡ್‌ನ ವೇಗದ ಬೌಲರ್‌ಗಳು ತಂಡಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡಿದರು. ಪಂದ್ಯದ ಮೊದಲ ದಿನದಂದು ಕೈಲ್ ಜೇಮಿಸನ್ ನ್ಯೂಜಿಲೆಂಡ್‌ಗೆ ನೆರವಾಗಿದ್ದು, ನಂತರ ಎರಡನೇ ದಿನ ತಂಡದ ಅತ್ಯಂತ ಅನುಭವಿ ಬೌಲರ್ ಟಿಮ್ ಸೌಥಿ ಭಾರತದ ಇನ್ನಿಂಗ್ಸ್‌ಗೆ ಬ್ರೇಕ್ ಹಾಕಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಜೊತೆಗೆ ಭಾರತದ ಪ್ರಮುಖ 5 ವಿಕೆಟ್​ಗಳನ್ನು ನೆಲಕ್ಕುರಿಳಿಸಿದರು.

ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಭಾರತಕ್ಕೆ ಯಾವಾಗಲೂ ಆಪತ್ತು ನೀಡುತ್ತಿದ್ದ ಟಿಮ್ ಸೌಥಿ ಈ ಬಾರಿ ಭಾರತಕ್ಕೆ ಬರುವ ಮೂಲಕ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದರು. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನದಂದು ಸೌದಿ ಭಾರತದ ಇನ್ನಿಂಗ್ಸ್ ಅನ್ನು ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾವನ್ನು ದೊಡ್ಡ ಸ್ಕೋರ್ ತಲುಪದಂತೆ ಮಾಡಿದರು. ದಿನದ ಮೊದಲ ಸೆಷನ್‌ನಲ್ಲೇ ಸೌದಿ ಹೊಸ ಚೆಂಡಿನ ಮೂಲಕ ತನ್ನ ತೇಜಸ್ಸು ತೋರಿಸಿದರು. ಈ ಅವಧಿಯಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿದ್ದು, ಎಲ್ಲರೂ ಟಿಮ್ ಸೌಥಿಗೆ ಬಲಿಯಾದರು. ಈ ಮೂಲಕ ಕಿವೀಸ್ ದಿಗ್ಗಜ ಟೆಸ್ಟ್ ಕ್ರಿಕೆಟ್​ನಲ್ಲಿ 13ನೇ ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಬಳಿಸುವ ಅದ್ಭುತ ಸಾಧನೆ ಮಾಡಿದ್ದಾರೆ.

ಮೊದಲ ಸೆಷನ್​ನಲ್ಲೇ ಅಬ್ಬರ
ಪಂದ್ಯದ ಮೊದಲ ದಿನ ಅಮೋಘ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ದ ರವೀಂದ್ರ ಜಡೇಜಾ ಇಂದು ಸೌದಿಯ ಮೊದಲ ಬಲಿಯಾದರು. ದಿನದ ಮೂರನೇ ಓವರ್‌ನಲ್ಲಿ ಸೌದಿ ಜಡೇಜಾ ಅವರನ್ನು ಬೌಲ್ಡ್ ಮಾಡಿದರು. ಸ್ವಲ್ಪ ಸಮಯದ ನಂತರ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಸೌದಿಯ ಟ್ರೇಡ್‌ಮಾರ್ಕ್ ಔಟ್‌ಸ್ವಿಂಗರ್‌ನಲ್ಲಿ ವಿಕೆಟ್ ಹಿಂದೆ ಕ್ಯಾಚ್ ನೀಡಿದರು. ಈ ಎರಡು ವಿಕೆಟ್‌ಗಳ ನಡುವೆ, ಚೊಚ್ಚಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಅತ್ಯುತ್ತಮ ಶತಕ ಗಳಿಸಿದರು. ಆದರೆ ಅವರು ಅಂತಿಮವಾಗಿ ಸೌದಿ ಬಾಲ್‌ಗೆ ಕವರ್‌ನಲ್ಲಿ ಸುಲಭ ಕ್ಯಾಚ್ ನೀಡಿದರು. ಒಂದು ಅದ್ಭುತ ಇನ್ನಿಂಗ್ಸ್ ಒಂದು ಸೊಗಸಾದ ಓವರ್​ನೊಂದಿಗೆ ಕೊನೆಗೊಂಡಿತು. ಶೀಘ್ರದಲ್ಲೇ ಸೌದಿ ಅಕ್ಸರ್ ಪಟೇಲ್ ಅವರನ್ನು ಔಟ್ ಮಾಡಿ ಭಾರತಕ್ಕೆ ಎಂಟನೇ ಹೊಡೆತವನ್ನು ನೀಡಿ ಐದನೇ ವಿಕೆಟ್ ಪಡೆದರು.

ಭಾರತದ ವಿರುದ್ಧ ಸೌದಿಯ ಅದ್ಭುತ ದಾಖಲೆ
ಸೌದಿ ಇದೀಗ ಭಾರತದ ವಿರುದ್ಧ 50 ವಿಕೆಟ್‌ಗಳನ್ನು ಪೂರೈಸುವ ಸಮೀಪದಲ್ಲಿದ್ದಾರೆ. ಇದುವರೆಗೆ ಸೌದಿ ಭಾರತದ ವಿರುದ್ಧ 18 ಇನ್ನಿಂಗ್ಸ್‌ಗಳಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಮೂರನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಅದ್ಭುತ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಅವರ ಸರಾಸರಿ 23.16 ಮತ್ತು ಸ್ಟ್ರೈಕ್ ರೇಟ್ 42.8 ಆಗಿದೆ. ಇದು ಅವರ ಸಂಪೂರ್ಣ ವೃತ್ತಿಜೀವನಕ್ಕೆ ಹೋಲಿಸಿದರೆ ಸಾಕಷ್ಟು ಉತ್ತಮವಾಗಿದೆ. ಅದೇ ಹೊತ್ತಿಗೆ ಭಾರತಕ್ಕೆ ಬಂದಿರುವ ಸೌದಿ ಟೀಂ ಇಂಡಿಯಾ ವಿರುದ್ಧ 6 ಇನ್ನಿಂಗ್ಸ್ ಗಳಲ್ಲಿ 17 ವಿಕೆಟ್ ಕಬಳಿಸಿದ್ದು, ಭಾರತದಲ್ಲಿಯೇ 3 ಇನಿಂಗ್ಸ್ ಗಳಲ್ಲಿ ಎರಡು ಇನ್ನಿಂಗ್ಸ್ ಗಳಲ್ಲಿ 5 ವಿಕೆಟ್ ಉರುಳಿಸಿರುವುದು ವಿಶೇಷ.