IND vs NZ 2021: ಈಡನ್ ಗಾರ್ಡನ್ಸ್​ನಲ್ಲಿ ಭಾರತ-ನ್ಯೂಜಿಲೆಂಡ್ 3ನೇ ಟಿ20: ಹೇಗಿದೆ ಪಿಚ್​?

India vs New zealand: ಈ ಪಿಚ್​ನಲ್ಲಿ ಕೊನೆಯ ಬಾರಿ ಆಡಿದ್ದು ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು. 2018 ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಹಂಗಾಮಿ ನಾಯಕನಾಗಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

IND vs NZ 2021: ಈಡನ್ ಗಾರ್ಡನ್ಸ್​ನಲ್ಲಿ ಭಾರತ-ನ್ಯೂಜಿಲೆಂಡ್ 3ನೇ ಟಿ20: ಹೇಗಿದೆ ಪಿಚ್​?
IND vs NZ 2021
Updated By: ಝಾಹಿರ್ ಯೂಸುಫ್

Updated on: Nov 20, 2021 | 8:46 PM

ಭಾರತ-ನ್ಯೂಜಿಲೆಂಡ್ (India vs New zealand 3rd T20) ನಡುವಣ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ (Team India) ಮುನ್ನಡೆ ಸಾಧಿಸಿದೆ. ಇದರೊಂದಿಗೆ ಭಾರತ ತಂಡವು ಸರಣಿಯನ್ನು ವಶಪಡಿಸಿಕೊಂಡಿದೆ. ಇದಾಗ್ಯೂ ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ವೈಟ್​ವಾಶ್ ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ ನ್ಯೂಜಿಲೆಂಡ್. ಇತ್ತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಹೀಗಾಗಿಯೇ ಕೊನೆಯ ಟಿ20 ಪಂದ್ಯ ಕೂಡ ಮಹತ್ವ ಪಡೆದುಕೊಂಡಿದೆ.

ಈಡನ್ ಗಾರ್ಡನ್ಸ್​ ಪಿಚ್ ಬ್ಯಾಟರ್‌ಗಳಿಗೆ ಅತ್ಯುತ್ತಮ ಪಿಚ್​ ಎನಿಸಿಕೊಂಡಿದೆ. ಅದರಲ್ಲೂ ಇಲ್ಲಿ ಆಡಲಾದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2ನೇ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ತಂಡಗಳು ಅತೀ ಹೆಚ್ಚು ಬಾರಿ ಗೆದ್ದಿರುವುದು ವಿಶೇಷ. ಹೀಗಾಗಿ ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದುವರೆಗೆ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಒಟ್ಟು 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಲಾಗಿದೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅಂದರೆ ಚೇಸಿಂಗ್ ತಂಡ 5 ಬಾರಿ ಜಯ ಸಾಧಿಸಿದೆ. ಹಾಗಾಗಿ ಈ ಮೈದಾನದಲ್ಲೂ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ ಎಂದೇ ಹೇಳಬಹುದು. ಹಾಗೆಯೇ ಈ ಪಿಚ್​ನ ಅವರೇಜ್ ಸ್ಕೋರ್ 143. ಹೀಗಾಗಿ ಮೊದಲು ಬ್ಯಾಟ್ ಮಾಡಿದ ತಂಡ ಬೃಹತ್ ಮೊತ್ತ ಪೇರಿಸದಿದ್ದರೆ ಗೆಲುವು ಕಷ್ಟ.

ಇನ್ನು ಈ ಪಿಚ್​ನಲ್ಲಿ ಕೊನೆಯ ಬಾರಿ ಆಡಿದ್ದು ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು. 2018 ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಹಂಗಾಮಿ ನಾಯಕನಾಗಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. ಅಂದು ಟಾಸ್ ಗೆದ್ದಿದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ವೆಸ್ಟ್ ಇಂಡೀಸ್ ತಂಡವನ್ನು ಟೀಮ್ ಇಂಡಿಯಾ ಬೌಲರುಗಳು ಕೇವಲ 109 ರನ್​ಗಳಿಗೆ ಆಲೌಟ್ ಮಾಡಿದ್ದರು.

110 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ 17.5 ಎಸೆತಗಳಲ್ಲಿ 3 ವಿಕೆಟ್​ ನಷ್ಟದೊಂದಿಗೆ ಗುರಿ ಮುಟ್ಟಿತ್ತು. ಅಂದರೆ ಅಂದು ಒಟ್ಟು 13 ವಿಕೆಟ್​ಗಳು ಉರುಳಿದ್ದವು. ಅದರಲ್ಲಿ 5 ವಿಕೆಟ್ ಕಬಳಿಸಿದ್ದು ಸ್ಪಿನ್ನರ್​ಗಳು ಎಂಬುದು ವಿಶೇಷ. ಹೀಗಾಗಿ ಈ ಪಿಚ್​ನಲ್ಲಿ ಸ್ಪಿನ್ನರ್​ಗಳು ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ಟೀಮ್ ಇಂಡಿಯಾ ಕೂಡ ಉತ್ತಮ ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

ಇದೀಗ 3 ವರ್ಷಗಳ ಬಳಿಕ ಮತ್ತೊಮ್ಮೆ ಈಡನ್ ಗಾರ್ಡನ್ಸ್​ ಅಂತಾರಾಷ್ಟ್ರೀಯ ಟಿ20 ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಈ ಬಾರಿ ಕೂಡ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡವನ್ನು ಕ್ಲೀನ್ ಸ್ವೀಪ್​ ಮಾಡುವ ಇರಾದೆಯಲ್ಲಿದ್ದಾರೆ ಹಿಟ್​ಮ್ಯಾನ್​.

ಇದನ್ನೂ ಓದಿ: Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ

ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್