ಟಿ20 ವಿಶ್ವಕಪ್ ಬೆನ್ನಲ್ಲೇ ಇದೀಗ ಭಾರತ-ನ್ಯೂಜಿಲೆಂಡ್ ಟಿ20 ಸರಣಿಗಾಗಿ ಸಜ್ಜಾಗಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ (ನ.17) ರಂದು ಮೊದಲ ಪಂದ್ಯ ನಡೆಯಲಿದೆ. ಈ ಸರಣಿ ಮೂಲಕ ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಈ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಉಭಯ ತಂಡಗಳು ಇದುವರೆಗೆ 17 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 9 ಗೆಲುವು ದಾಖಲಿಸಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಅಂದರೆ ಭಾರತ ನ್ಯೂಜಿಲೆಂಡ್ ವಿರುದ್ದ ಟಿ20 ಕ್ರಿಕೆಟ್ನಲ್ಲಿ 8 ಬಾರಿ ಗೆದ್ದಿದ್ದು, ಈ ಬಾರಿ ಸರಣಿ ಜಯಿಸಿದರೆ, ಭಾರತ ಮೇಲುಗೈ ಹೊಂದಲಿದೆ.
ಭಾರತ ವಿರುದ್ಧದ ಇದುವರೆಗಿನ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡದಲ್ಲಿರುವ ವಿಕೆಟ್ ಟಿಮ್ ಸೀಫರ್ಟ್ ಅತ್ಯಧಿಕ ರನ್ ಗಳಿಸಿದ್ದಾರೆ. ಸೀಫರ್ಟ್ ಟೀಮ್ ಇಂಡಿಯಾ ವಿರುದ್ದ 280 ರನ್‌ಗನ್ನು ಬಾರಿಸಿ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹಿಟ್ಮ್ಯಾನ್ ಈವರೆಗಿನ ನ್ಯೂಜಿಲೆಂಡ್ ವಿರುದ್ದದ ಪಂದ್ಯಗಳಿಂದ ಒಟ್ಟು 352 ರನ್ ಗಳಿಸಿದ್ದಾರೆ.
ಇನ್ನು ಉಭಯ ತಂಡಗಳ ಚುಟುಕ ಕದನದಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಅಗ್ರಸ್ಥಾನದಲ್ಲಿದ್ದಾರೆ. ಸೋಧಿ ಭಾರತದ ವಿರುದ್ದ ಈವರೆಗೆ 19 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ವಿರುದ್ದದ T20 ವಿಶ್ವಕಪ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸೋಧಿ ಪಡೆದಿದ್ದರು. ಹಾಗೆಯೇ ನ್ಯೂಜಿಲೆಂಡ್ ವಿರುದ್ದ ಯಶಸ್ವಿ ಬೌಲರ್ ಎಂದರೆ ಯಜುವೇಂದ್ರ ಚಹಲ್. ಕಿವೀಸ್ ವಿರುದ್ದ ಚಹಲ್ 7 ವಿಕೆಟ್ ಪಡೆದಿದ್ದಾರೆ. ಟಿ20 ವಿಶ್ವಕಪ್ ಸೋಲಿನ ಬಳಿಕ ಉಭಯ ತಂಡಗಳಿಗೂ ಇದು ಮೊದಲ ಪಂದ್ಯವಾಗಿದ್ದು ಹೀಗಾಗಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಉಭಯ ತಂಡಗಳು ಹೀಗಿವೆ:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ಕೆಎಲ್ ರಾಹುಲ್ , ಶ್ರೇಯಸ್ ಅಯ್ಯರ್ , ಸೂರ್ಯಕುಮಾರ್ ಯಾದವ್ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ದೀಪಕ್ ಚಹರ್ , ಭುವನೇಶ್ವರ ಕುಮಾರ್ , ಹರ್ಷಲ್ ಪಟೇಲ್ , ಅವೇಶ್ ಖಾನ್ , ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ , ಇಶಾನ್ ಕಿಶನ್ , ವೆಂಕಟೇಶ್ ಅಯ್ಯರ್ , ರುತುರಾಜ್ ಗಾಯಕ್ವಾಡ್
ನ್ಯೂಜಿಲೆಂಡ್ ತಂಡ: ಟಿಮ್ ಸಿಫರ್ಟ್, ಟಿಮ್ ಸೌಥಿ (ನಾಯಕ) , ಮಾರ್ಟಿನ್ ಗುಪ್ಟಿಲ್ , ಡೆರಿಲ್ ಮಿಚೆಲ್ , ಗ್ಲೆನ್ ಫಿಲಿಪ್ಸ್ , ಮಾರ್ಕ್ ಚಾಪ್ಮನ್ , ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ , ಲಾಕಿ ಫರ್ಗುಸನ್ , ಕೈಲ್ ಜೇಮೀಸನ್ , ಟ್ರೆಂಟ್ ಬೌಲ್ಟ್ , ಇಶ್ ಸೋಧಿ , ಟಾಡ್ ಆಸ್ಟ್ಲೆ , ಆಡಮ್ ಮಿಲ್ನ್
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(IND vs NZ 2021: Head-to-head stats and numbers you need to know before T20I series)