IND vs NZ: ಆಕ್ರಮಣಕಾರಿ ಆಟ, ಕಡಿಮೆ ರನ್..; ಗಂಭೀರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಟೀಂ ಇಂಡಿಯಾ

IND vs NZ: ಅಕ್ಟೋಬರ್ 17 ರಿಂದ ಆರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮೊತ್ತವನ್ನು ತಲುಪಿದರೆ, ಐವರು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಕೇವಲ 2 ದಿನಗಳ ಹಿಂದೆ ತಂಡದ ಮುಖ್ಯ ಕೋಚ್ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ರೋಹಿತ್ ಪಡೆ ಮಾಡಿದೆ.

IND vs NZ: ಆಕ್ರಮಣಕಾರಿ ಆಟ, ಕಡಿಮೆ ರನ್..; ಗಂಭೀರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಟೀಂ ಇಂಡಿಯಾ
ಟೀಂ ಇಂಡಿಯಾ
Follow us
|

Updated on:Oct 17, 2024 | 4:01 PM

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅಕ್ಟೋಬರ್ 16 ರಿಂದ ಆರಂಭವಾಗಬೇಕಿದ್ದ ಈ ಪಂದ್ಯ ಮಳೆಯಿಂದಾಗಿ ಒಂದು ದಿನ ತಡವಾಗಿ ಆರಂಭವಾಗಿದೆ. ಅಂದರೆ ಅಕ್ಟೋಬರ್ 17 ರಿಂದ ಆರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮೊತ್ತವನ್ನು ತಲುಪಿದರೆ, ಐವರು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 2 ದಿನಗಳ ಹಿಂದೆ ತಂಡದ ಮುಖ್ಯ ಕೋಚ್ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ರೋಹಿತ್ ಪಡೆ ಮಾಡಿದೆ.

100 ರನ್​ಗಳಿಗೂ ಆಲೌಟ್ ಆಗಬಹುದು

ವಾಸ್ತವವಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ತಂಡದ ಆಕ್ರಮಣಕಾರಿ ಆಟದ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಗಂಭೀರ್, ಪರಿಸ್ಥಿತಿ ಯಾವುದೇ ಇರಲಿ, ಆಟದ ಶೈಲಿಯಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ ಈ ಆಕ್ರಮಣಕಾರಿ ತಂತ್ರದಿಂದ ಮುಂದೊಂದು ದಿನ ತಂಡವು ಕೇವಲ 100 ರನ್​ಗಳಿಗೆ ಆಲೌಟ್ ಆಗುವ ಸಂದರ್ಭವೂ ಬರಬಹುದು. ಆದರೆ ಅದನ್ನು ನಾವು ಮುಕ್ತ ಮನಸಿನಿಂದ ಒಪ್ಪಿಕೊಳ್ಳಲಿದ್ದೇವೆ ಎಂದು ಗಂಭೀರ್ ಹೇಳಿಕೆ ನೀಡಿದ್ದರು. ಗಂಭೀರ್ ಈ ಹೇಳಿಕೆ ನೀಡಿ ಕೇವಲ 2 ದಿನದೊಳಗೆ ಟೀಂ ಇಂಡಿಯಾ ಆಟಗಾರರು ಮುಖ್ಯ ಕೋಚ್ ಹೇಳಿದ್ದಂತೆ ನಡೆದುಕೊಂಡಿದ್ದಾರೆ. ತವರು ನೆಲದಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗಿ ಹಲವಾರು ಬೇಡದ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಗಂಭೀರ್ ಹೇಳಿಕೆಯಲ್ಲಿ ಏನಿತ್ತು?

ತಂಡದ ಬ್ಯಾಟರ್​ಗಳ ಸಹಜ ಸಾಮರ್ಥ್ಯದ ಬಗ್ಗೆ ಮಾತನಾಡಿದ ಗಂಭೀರ್, ‘ಆಟಗಾರರು ಸ್ವಭಾವತಃ ಆಕ್ರಮಣಕಾರಿಯಾಗಿದ್ದರೆ ಅವರನ್ನು ನಿಯಂತ್ರಿಸಲು ನಾವು ಹೋಗುವುದಿಲ್ಲ ಮತ್ತು ರಕ್ಷಣಾತ್ಮಕವಾಗಿ ಆಡುವಂತೆ ಕೇಳಿಕೊಳ್ಳುವುದಿಲ್ಲ. ಒಂದು ದಿನದಲ್ಲಿ 400-500 ರನ್ ಗಳಿಸುವ ಆಟಗಾರರನ್ನು ನಾವು ಏಕೆ ನಿಯಂತ್ರಿಸಬೇಕು. ಮತ್ತು ಟಿ 20 ಕ್ರಿಕೆಟ್‌ನ ವಿಷಯದಲ್ಲಿ, ನಾನು ಯಾವಾಗಲೂ ಹೇಳುತ್ತೇನೆ. ಹೆಚ್ಚು ರಿಸ್ಕ್ ತೆಗೆದುಕೊಂಡಷ್ಟು ಅದರ ಪ್ರತಿಫಲವೂ ಅಷ್ಟೇ ಇರುತ್ತದೆ. ಹಾಗೆಯೇ ರಿಸ್ಕ್ ಹೆಚ್ಚಾದಷ್ಟೂ ವೈಫಲ್ಯದ ಸಾಧ್ಯತೆಯೂ ಹೆಚ್ಚುತ್ತದೆ. ಈ ಧೋರಣೆಯಿಂದ ನಮ್ಮ ತಂಡ ಮುಂದೊಂದು ದಿನ 100 ರನ್‌ಗಳಿಗೆ ಔಟಾದಗಲು ನಾವು ಅದನ್ನು ಒಪ್ಪಿಕೊಳ್ಳಬೇಕು. ಹೀಗಾಗಿ ರಿಸ್ಕ್ ತೆಗೆದುಕೊಂಡು ಆಡುವ ಆಟಗಾರರಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಗಂಭೀರ್ ಹೇಳಿದ್ದರು.

ಭಾರತದ ಪೆವಿಲಿಯನ್ ಪರೇಡ್

ಇದೀಗ ಗಂಭೀರ್ ಹೇಳಿಕೆಯಂತೆಯೇ ಟೀಂ ಇಂಡಿಯಾದ ಆಟಗಾರರು ಕೇವಲ 46 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ್ದಾರೆ. ಸರಾಗವಾಗಿ ರನ್​ ಕಲೆಹಾಕಲು ಹೆಸರುವಾಸಿಯಾಗಿರುವ ಬೆಂಗಳೂರು ಪಿಚ್​ನಲ್ಲಿ ಟೀಂ ಇಂಡಿಯಾ ಬ್ಯಾಟರ್​ಗಳು ಕ್ರಿಕೆಟ್ ಮರೆತವರಂತೆ ವರ್ತಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್​ಗೆ ಬೆಂಗಳೂರು ಪಿಚ್ ಒಂದರ್ಥದಲ್ಲಿ ತವರು ಮೈದಾನವಿದಂತೆ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ, ಬೆಂಗಳೂರು ಪಿಚ್​ನ ಆಳ ಹಾಗೂ ಅಗಲವನ್ನು ಚೆನ್ನಾಗಿಯೇ ಅರಿತವರು. ಇತ್ತ ಕೆಎಲ್ ರಾಹುಲ್ ಅವರ ಕ್ರಿಕೆಟ್ ಬದುಕು ಶುರುವಾಗಿದ್ದೇ ಈ ಮೈದಾನದಿಂದ. ಆದಾಗ್ಯೂ ರಾಹುಲ್ ಕೂಡ ಪಿಚ್​ ಅನ್ನು ಸರಿಯಾಗಿ ರೀಡ್ ಮಾಡುವಲ್ಲಿ ಎಡವಿ ಖಾತೆ ತೆರೆಯದೆ ಔಟಾದರು. ವಿರಾಟ್ ಕೊಹ್ಲಿ ಕೂಡ ಸೊನ್ನೆ ಸುತ್ತಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Thu, 17 October 24

ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್