IND vs NZ: 20 ವರ್ಷಗಳ ಬರ ಅಂತ್ಯ; ಕೊಹ್ಲಿ- ಶಮಿ ಆಟಕ್ಕೆ ಮಂಡಿಯೂರಿದ ನ್ಯೂಜಿಲೆಂಡ್..!

|

Updated on: Oct 23, 2023 | 6:05 AM

IND vs NZ, ICC World Cup 2023: ವಿಶ್ವಕಪ್-2023ರಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಪಯಣವನ್ನು ಮುಂದುವರಿಸಿದೆ. ಟೂರ್ನಿಯ 21ನೇ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ಐತಿಹಾಸಿಕ ಜಯ ಸಾಧಿಸಿದೆ.

IND vs NZ: 20 ವರ್ಷಗಳ ಬರ ಅಂತ್ಯ; ಕೊಹ್ಲಿ- ಶಮಿ ಆಟಕ್ಕೆ ಮಂಡಿಯೂರಿದ ನ್ಯೂಜಿಲೆಂಡ್..!
ಟೀಂ ಇಂಡಿಯಾ
Follow us on

ವಿಶ್ವಕಪ್-2023ರಲ್ಲಿ (ICC World Cup 2023) ಟೀಂ ಇಂಡಿಯಾ ತನ್ನ ಗೆಲುವಿನ ಪಯಣವನ್ನು ಮುಂದುವರಿಸಿದೆ. ಟೂರ್ನಿಯ 21ನೇ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ (India Vs New Zealand) ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ಐತಿಹಾಸಿಕ ಜಯ ಸಾಧಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್ ತಂಡ 50 ಓವರ್‌ಗಳಲ್ಲಿ 273 ರನ್ ಗಳಿಸಿತು. 274 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 48 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿತು. ಈ ಮೂಲಕ 2003ರ ನಂತರ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಐತಿಹಾಸಿಕ ಸಾಧನೆಯನ್ನು ಟೀಂ ಇಂಡಿಯಾ (Team India) ಮಾಡಿದೆ.

ಶತಕ ವಂಚಿತ ಕೊಹ್ಲಿ

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿನ ಹೀರೋಗಳೆಂದರೆ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಮೊಹಮ್ಮದ್ ಶಮಿ. ಕೊಹ್ಲಿ 95 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ ಶಮಿ 5 ವಿಕೆಟ್‌ಗಳನ್ನು ಕಬಳಿಸಿದರು. ಇವರೊಂದಿಗೆ ರೋಹಿತ್ ಶರ್ಮಾ 48 ರನ್, ಗಿಲ್ 26 ರನ್, ಶ್ರೇಯಸ್ ಅಯ್ಯರ್ 33 ರನ್ ಮತ್ತು ಕೆಎಲ್ ರಾಹುಲ್ 27 ರನ್​ಗಳ ಕೊಡುಗೆ ನೀಡಿದರು. ಸೂರ್ಯಕುಮಾರ್ ಮಾತ್ರ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗದೆ ರನೌಟ್​ಗೆ ಬಲಿಯಾದರು. ನಿರ್ಣಾಯಕ ಹಂತದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ರವೀಂದ್ರ ಜಡೇಜಾ 39 ​​ಮತ್ತು ಶಮಿ 1 ರನ್ ಗಳಿಸಿ ಅಜೇಯರಾಗಿ ಉಳಿದರು.

20 ವರ್ಷಗಳ ನಂತರ ಕಿವೀಸ್ ವಿರುದ್ಧ ಗೆದ್ದ ಭಾರತ..!

ಕಿವೀಸ್ ತಂಡದ ಇನ್ನಿಂಗ್ಸ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಕಿವೀಸ್ ಪರ ಡ್ಯಾರಿಲ್ ಮಿಚೆಲ್ ಅವರ ಶತಕ ಮತ್ತು ರಚಿನ್ ರವೀಂದ್ರ ಶತಕದ ಜೊತೆಯಾಟದ ಆಡಿದರು. ಮಿಚೆಲ್ 127 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 130 ರನ್ ಗಳಿಸಿದರು. ಅಲ್ಲದೆ ರವೀಂದ್ರ (75 ರನ್, 87 ಎಸೆತ, 6 ಬೌಂಡರಿ, ಒಂದು ಸಿಕ್ಸರ್) ಅವರೊಂದಿಗೆ ಮೂರನೇ ವಿಕೆಟ್‌ಗೆ 159 ರನ್​ಗಳ ಜೊತೆಯಾಟ ಕೂಡ ಹಂಚಿಕೊಂಡರು. ಶಮಿ 10 ಓವರ್​ಗಳಲ್ಲಿ 54 ರನ್‌ ನೀಡಿ, ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಇವರೊಂದಿಗೆ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್, 73 ರನ್ ನೀಡಿ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ (45 ರನ್‌ಗಳಿಗೆ ಒಂದು ವಿಕೆಟ್) ಮತ್ತು ಜಸ್ಪ್ರೀತ್ ಬುಮ್ರಾ (45 ರನ್‌ಗಳಿಗೆ ಒಂದು ವಿಕೆಟ್) ಆರ್ಥಿಕವಾಗಿ ಬೌಲಿಂಗ್ ಮಾಡಿ ತಲಾ ಒಂದು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ