AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ 3rd ODI: ಭಾರತ- ನ್ಯೂಜಿಲೆಂಡ್ ಅಂತಿಮ ತೃತೀಯ ಏಕದಿನ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?

India vs New Zealand ODI: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ತೃತೀಯ ಏಕದಿನ ಪಂದ್ಯ ಜನವರಿ 24 ಮಂಗಳವಾರದಂದು ಆಯೋಜಿಸಲಾಗಿದೆ. ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

IND vs NZ 3rd ODI: ಭಾರತ- ನ್ಯೂಜಿಲೆಂಡ್ ಅಂತಿಮ ತೃತೀಯ ಏಕದಿನ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
IND vs NZ ODI
Vinay Bhat
|

Updated on:Jan 22, 2023 | 9:07 AM

Share

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ (India vs New Zealand) ವಶಪಡಿಸಿಕೊಂಡಾಗಿದೆ. ಯಾರೂ ಊಹಿಸದಂತೆ ನಡೆದ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನದಲ್ಲಿ 2-0 ಮುನ್ನಡೆ ಪಡೆದುಕೊಂಡು ಸರಣಿ ಕೈವಶ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ರೋಚಕ ಕಾದಾಟದಲ್ಲಿ ಟೀಮ್ ಇಂಡಿಯಾ (Team India) 12 ರನ್​ಗಳ ಜಯ ಸಾಧಿಸಿತು. ಹೀಗಾಗಿ ದ್ವಿತೀಯ ಏಕದಿನ ಕೂಡ ಹೈಸ್ಕೋರ್ ಪಂದ್ಯ ಆಗಬಹುದು ಎಂದೇ ನಂಬಲಾಗಿತ್ತು. ಆದರೆ, ರಾಯ್​ಪುರದಲ್ಲಿ (Raipur) ನಡೆದಿದ್ದು ಭಾರತೀಯ ಬೌಲರ್​ಗಳ ಬಿರುಗಾಳಿ. ಕಿವೀಸ್ ಬ್ಯಾಟರ್​ಗಳನ್ನು ಪೆವಲಿಯನ್​ಗೆ ಅಟ್ಟಿದ ಟೀಮ್ ಇಂಡಿಯಾ ಬೌಲರ್ಸ್ ಸರಣಿ ವಶಪಡಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಹಿಸಿದರು. ಇದರ ಬೆನ್ನಲ್ಲೇ ಉಭಯ ತಂಡಗಳು ಮೂರನೇ ಏಕದಿನ ಸಜ್ಜಾಗುತ್ತಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ತೃತೀಯ ಏಕದಿನ ಪಂದ್ಯ ಜನವರಿ 24 ಮಂಗಳವಾರದಂದು ಆಯೋಜಿಸಲಾಗಿದೆ. ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಮ್ಯಾಚ್ ಆರಂಭವಾಗಲಿದ್ದು, 1 ಗಂಟೆಗೆ ಟಾಸ್ ಪ್ರಕ್ರಿಯೆ ಏರ್ಪಡಿಸಲಾಗಿದೆ. ರೋಹಿತ್ ಪಡೆ ಈ ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಮಾಡುವ ಗುರಿ ಹೊಂದಿದ್ದರೆ, ಇತ್ತ ಕಿವೀಸ್ ಪಡೆ ಕನಿಷ್ಠ ಒಂದು ಪಂದ್ಯವನ್ನಾದರೂ ಜಯಿಸಿ ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಸರಣಿ ವಶಪಡಿಸಿಕೊಂಡಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೆಲವು ಪ್ರಮುಖ ಬದಲಾವಣೆ ಕೂಡ ನಿರೀಕ್ಷಿಸಲಾಗಿದೆ.

ಮೊದಲ ಏಕದಿನ ಹೇಗಿತ್ತು?:

ಮೊದಲ ಏಕದಿನ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ದೊಡ್ಡ ಮೊತ್ತ ಕಲೆಹಾಕಿದ್ದರೂ ಈ ಸವಾಲನ್ನು ಎದುರಿಸಿದ ನ್ಯೂಜಿಲೆಂಡ್ ಗೆಲುವಿನ ಅಂಚಿಗೆ ಬಂದು ಸೋತಿತು. ಕಿವೀಸ್ ಗೆಲುವಿಗೆ ಮಿಚೆಲ್ ಬ್ರೆಸ್​ವೆಲ್ ಕಠಿಣ ಹೋರಾಟ ನಡೆಸಿದರೆ ಭಾರತ ಬೆಟ್ಟದಂತಹ ಮೊತ್ತ ಗಳಿಸಲು ನೆರವಾಗಿದ್ದು ಶುಭ್​ಮನ್ ಗಿಲ್. ಕೊನೆಯ 50ನೇ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಗಿಲ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಒಟ್ಟಾರೆಯಾಗಿ 149 ಎಸೆತಗಳಲ್ಲಿ 19 ಫೋರ್, 9 ಸಿಕ್ಸರ್​ನೊಂದಿಗೆ 208 ರನ್ ಚಚ್ಚಿದರು. ಇದರೊಂದಿಗೆ ಕೆಲ ದಾಖಲೆ ಕೂಡ ಬರೆದರು. ಗಿಲ್ ಅಬ್ಬರದ ದ್ವಿಶತಕದ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 349 ರನ್‌ ಗಳಿಸಿತು.

ಇದನ್ನೂ ಓದಿ
Image
U19 T20 World Cup: ಶಫಾಲಿ-ರಿಚಾ ವಿಫಲ; ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ಮೊದಲ ಸೋಲು
Image
IND vs NZ 2nd ODI: ಭಾರತೀಯ ಬೌಲರ್​ಗಳ ಬಿರುಗಾಳಿ, ನ್ಯೂಜಿಲೆಂಡ್ ಧೂಳಿಪಟ: ದ್ವಿತೀಯ ಏಕದಿನದ ರೋಚಕ ಫೋಟೋ ನೋಡಿ
Image
IND vs NZ: ಪವರ್‌ಪ್ಲೇ ಕಿಂಗ್; ಒಂದು ವರ್ಷದಲ್ಲಿ ದಾಖಲೆಯ ಮೇಡನ್ ಓವರ್ ಎಸೆದ ಸಿರಾಜ್..!
Image
IND vs NZ Live Streaming: ಕಿವೀಸ್ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ವಿಶ್ವಕಪ್​ನಲ್ಲಿ ಉಳಿಗಾಲ! ಪಂದ್ಯ ಎಷ್ಟು ಗಂಟೆಗೆ ಆರಂಭ?

VIDEO: ಮೈದಾನಕ್ಕೆ ನುಗ್ಗಿದ ಹಿಟ್​ಮ್ಯಾನ್ ಅಭಿಮಾನಿ: ತಬ್ಬಿಬ್ಬಾದ ರೋಹಿತ್ ಶರ್ಮಾ

ಇದಕ್ಕುತ್ತರವಾಗಿ ಕಿವೀಸ್ ಬಳಗವೂ ದಿಟ್ಟ ಆಟವಾಡಿತು. ಮಿಚೆಲ್ ಬ್ರೇಸ್‌ವೆಲ್ 140 ರನ್ ಬಾರಿಸಿ ಅಬ್ಬರದ ಶತಕದಿಂದಾಗಿ ಗೆಲುವಿನ ಸನಿಹ ಸಾಗಿತ್ತು. ಆದರೆ, ಕಿವೀಸ್ ಬಳಗವು 49.2 ಓವರ್‌ಗಳಲ್ಲಿ 337 ರನ್‌ ಗಳಿಸಿ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಸಿರಾಜ್ 10 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತ ಕೇವಲ 46 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು.

ದ್ವಿತೀಯ ಏಕದಿನ ಹೇಗಿತ್ತು?:

ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ವೇಗಿಗಳ ದಾಳಿಗೆ ನ್ಯೂಜಿಲೆಂಡ್ ಆಟಗಾರರು​ ರನ್​ ಗಳಿಸಲು ಹರಸಾಹಸಪಡಬೇಕಾಯಿತು. ಸ್ಟಾರ್ ಬ್ಯಾಟರ್ ಎನಿಸಿಕೊಂಡವರಾರು ಎರಡಂಕಿ ಮೀರಲಿಲ್ಲ. ಗ್ಲೆನ್ ಫಿಲಿಪ್ಸ್ 36 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. 34.2 ಓವರ್‌ಗಳಲ್ಲಿ ಕೇವಲ 108 ರನ್‌ಗಳನ್ನು ನೀಡಿ ಸರ್ವಪತನ ಕಂಡ ಕಿವೀಸ್ ತಂಡ ಹೀನಾಯ ಪ್ರದರ್ಶನ ತೋರಿತು. ಮೊಹಮ್ಮದ್ ಶಮಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡು, ತಮ್ಮ 6 ಓವರ್​ಗಳಲ್ಲಿ ಕೇವಲ 18 ರನ್​ ನೀಡಿ ಮೂರು ವಿಕೆಟ್ ಪಡೆದರು.

ಭಾರತ ತಂಡ ಕೇವಲ 20.1 ಓವರ್​ಗಳಿಗೆ 2 ವಿಕೆಟ್ ಕಳೆದುಕೊಂಡು 111 ರನ್​ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ರೋಹಿತ್ ಶರ್ಮಾ 50 ಎಸೆತದಲ್ಲಿ 7 ಬೌಂಡರಿ ಮತ್ತು​ 2 ಸಿಕ್ಸ್ ಒಳಗೊಂಡಂತೆ 51 ರನ್ ಗಳಿಸಿದರೆ, ಶುಭ್​ಮನ್ ಗಿಲ್​ ಔಟ್​ ಆಗದೇ 40 (53) ರನ್​ ಗಳಿಸುವ ಮೂಲಕ ತಂಡದ ಗೆಲುವನ್ನು ಸಲೀಸಾಗಿ ಡದಕ್ಕೆ ಸೇರಿಸಿದರು. ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಬಾಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 am, Sun, 22 January 23