IND vs NZ: ಕೇವಲ 46 ರನ್​ಗೆ ಆಲೌಟ್: 5 ಅವಮಾನಕರ ದಾಖಲೆ ಬರೆದ ಟೀಮ್ ಇಂಡಿಯಾ

IND vs NZ: ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಅದು ಕೂಡ ಕೇವಲ 46 ರನ್​ಗಳಿಗೆ ಆಲೌಟ್ ಆಗುವ ಮೂಲಕ. ಹೀಗೆ ಎರಡಂಕಿ ಮೊತ್ತಕ್ಕೆ ಸರ್ವಪತನ ಕಾಣುವ ಮೂಲಕ ಟೀಮ್ ಇಂಡಿಯಾ ಹಲವು ಅನಗತ್ಯ ದಾಖಲೆಗಳನ್ನು ಬರೆದಿದೆ.

IND vs NZ: ಕೇವಲ 46 ರನ್​ಗೆ ಆಲೌಟ್: 5 ಅವಮಾನಕರ ದಾಖಲೆ ಬರೆದ ಟೀಮ್ ಇಂಡಿಯಾ
Team India
Follow us
|

Updated on: Oct 17, 2024 | 2:36 PM

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಭಾರತ ತಂಡವು ಕೇವಲ 46 ರನ್​ಗಳಿಗೆ ಆಲೌಟ್ ಆಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ನಿರ್ಧಾರ ತಪ್ಪು ಎಂಬುದನ್ನು ನ್ಯೂಝಿಲೆಂಡ್ ವೇಗಿಗಳು ಕೇವಲ 31.2 ಓವರ್​ಗಳಲ್ಲಿ ನಿರೂಪಿಸಿದ್ದರು. ಅಂದರೆ 188 ಎಸೆತಗಳಲ್ಲಿ ಭಾರತ ತಂಡವು ಕೇವಲ 46 ರನ್ ಗಳಿಸಿ ಆಲೌಟ್ ಆಯಿತು. ಈ ಅತ್ಯಲ್ಪ ಮೊತ್ತದೊಂದಿಗೆ ಟೀಮ್ ಇಂಡಿಯಾ 5 ಅವಮಾನಕರ ದಾಖಲೆಗಳನ್ನು ಮೈಮೇಲೆ ಎಳೆದುಕೊಂಡಿದೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಭಾರತ ತಂಡದ ಅತ್ಯಲ್ಪ ಮೊತ್ತ: ಇದು ಭಾರತದಲ್ಲಿ ಟೀಮ್ ಇಂಡಿಯಾದ ಅತ್ಯಲ್ಪ ಮೊತ್ತ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್​ಗೆ ಆಲೌಟ್ ಆಗಿದ್ದು ಕಳಪೆ ದಾಖಲೆಯಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಟೀಮ್ ಇಂಡಿಯಾ ಬ್ಯಾಟರ್​ಗಳು ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
  2. ಉಪಖಂಡದ ಕಡಿಮೆ ಸ್ಕೋರ್: ಭಾರತೀಯ ಉಪಖಂಡದಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ಹೀನಾಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ 53 ರನ್ ಕಲೆಹಾಕಿದ್ದು ಅತ್ಯಲ್ಪ ಮೊತ್ತವಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ.
  3. ಭಾರತದಲ್ಲಿನ ಅತೀ ಕಡಿಮೆ ಮೊತ್ತ: ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಅನಗತ್ಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಝಿಲೆಂಡ್ ತಂಡವು 62 ರನ್​ಗೆ ಆಲೌಟ್ ಆಗಿದ್ದು ಕಳಪೆ ಪ್ರದರ್ಶನವಾಗಿತ್ತು. ಇದೀಗ 46 ರನ್​ಗಳಿಗೆ ಸರ್ವಪತನ ಕಂಡು ಟೀಮ್ ಇಂಡಿಯಾ ಭಾರೀ ಮುಖಭಂಗಕ್ಕೆ ಒಳಗಾಗಿದೆ.
  4. 78 ವರ್ಷಗಳ ಬಳಿಕ ಅತ್ಯಲ್ಪ ಸ್ಕೋರ್: 78 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. 1946 ರಲ್ಲಿ ನ್ಯೂಝಿಲೆಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದ್ದರು.
  5. ಶೂನ್ಯ ಶೂರರು: 25 ವರ್ಷಗಳ ನಂತರ ಭಾರತ ತಂಡದ ಐವರು ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದಕ್ಕೂ ಮುನ್ನ 1999 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಐವರು ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಇದನ್ನೂ ಓದಿ: IPL 2025: ಮೂವರು ಆಟಗಾರರಿಗೆ 55 ಕೋಟಿ ರೂ. ನೀಡಿದ SRH

ಟೀಮ್ ಇಂಡಿಯಾ ಪರ ಸೊನ್ನೆಗೆ ಔಟಾದ ಬ್ಯಾಟರ್​ಗಳು:

  • ವಿರಾಟ್ ಕೊಹ್ಲಿ (0)
  • ಸರ್ಫರಾಝ್ ಖಾನ್ (0)
  • ಕೆಎಲ್ ರಾಹುಲ್ (0)
  • ರವೀಂದ್ರ ಜಡೇಜಾ (0)
  • ರವಿಚಂದ್ರನ್ ಅಶ್ವಿನ್ (0)
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ