IND vs NZ: 46 ರನ್‌ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಮೇಲೆ ಮೀಮ್ಸ್ಗಳ ಸುರಿಮಳೆ; ನೀವು ನೋಡಿ ನಕ್ಕುಬಿಡಿ
IND vs NZ: ಟೀಂ ಇಂಡಿಯಾದ ಈ ಕಳಪೆ ದಾಖಲೆ ಒಂದೆಡೆ ನೆಟ್ಟಿಗರಿಗೆ ಭರ್ಜರಿ ಆಹಾರವಾಗಿದ್ದರೆ, ಇನ್ನೊಂದೆಡೆ ತಂಡದ ಮಾಜಿ ಆಟಗಾರರು ಕೂಡ ತಂಡದ ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಆಟಗಾರರ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನ ಟಾಸ್ ಕೂಡ ನಡೆಯಲಿಲ್ಲ. ಆದರೆ ಮರುದಿನವೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ ವೇಗಿಗಳ ದಾಳಿಗೆ ಸಿಲುಕಿ ಅಕ್ಷರಶಃ ತತ್ತರಿಸಿ ಹೋಗಿದೆ. ಕಿವೀಸ್ ವೇಗಿಗಳ ಎದುರು ರನ್ ಕಲೆಹಾಕಲು ಪರದಾಡಿದ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತರಹೆವಾರಿ ಮೀಮ್ಸ್ಗಳನ್ನು ಹರಿಬಿಡುವ ಮೂಲಕ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಅಸಮಾಧಾನ ಹೊರಹಾಕಿದ್ದಾರೆ
ಕಾಲೆಳೆದ ವಾಸಿಂ ಜಾಫರ್
ಟೀಂ ಇಂಡಿಯಾದ ಈ ಕಳಪೆ ದಾಖಲೆ ಒಂದೆಡೆ ನೆಟ್ಟಿಗರಿಗೆ ಭರ್ಜರಿ ಆಹಾರವಾಗಿದ್ದರೆ, ಇನ್ನೊಂದೆಡೆ ತಂಡದ ಮಾಜಿ ಆಟಗಾರರು ಕೂಡ ತಂಡದ ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಆಟಗಾರರ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದ ಈ ಕಳಪೆ ಪ್ರದರ್ಶನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದಿಷ್ಟು ಮೀಮ್ಸ್ಗಳು ಇಲ್ಲಿವೆ.
View this post on Instagram
View this post on Instagram
View this post on Instagram
View this post on Instagram
Indian batting line up whenever a captain announces paternity leavepic.twitter.com/IqDBvFXeua
— Pushkar (@musafir_hu_yar) October 17, 2024
View this post on Instagram
Scenes from Bengaluru right now.#INDvNZ pic.twitter.com/IkrKWLvwFU
— Rajabets 🇮🇳👑 (@smileagainraja) October 17, 2024
Dono bhai Dono tabahi ❤️😭 pic.twitter.com/uNnhsFtzSV
— Ctrl C Ctrl Memes (@Ctrlmemes_) October 17, 2024
Boys 💪🏻#INDvNZ pic.twitter.com/DTY0bCMgWD
— Desi Bhayo (@desi_bhayo88) October 17, 2024
#INDvNZ RCB player and fans after India all oy on 45 against newzealand in test 🌚 pic.twitter.com/6Q7UrqTQA5
— theboysthing_ (@Theboysthing) October 17, 2024
ಮೊದಲ ಇನ್ನಿಂಗ್ಸ್ ಹೀಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ತಂಡದ ಐವರು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಡೇಜಾ, ಅಶ್ವಿನ್ ಮತ್ತು ಸರ್ಫರಾಜ್ ಖಾನ್ಗೆ ಖಾತೆ ತೆರೆಯಲಾಗಿಲ್ಲ. ತಂಡದ ಪರ ರಿಷಬ್ ಪಂತ್ ಗರಿಷ್ಠ 20 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 13 ರನ್ ಬಾರಿಸಿದರು. ಉಳಿದವರು ಒಂದಂಕಿಗೆ ಸುಸ್ತಾದರು. ನ್ಯೂಜಿಲೆಂಡ್ ಪರ ಭಾರತದಲ್ಲಿ ಮೊದಲ ಟೆಸ್ಟ್ ಆಡುತ್ತಿರುವ ಓ’ರೂರ್ಕ್ 4 ವಿಕೆಟ್ ಪಡೆದರೆ ಮ್ಯಾಟ್ ಹೆನ್ರಿ 5 ವಿಕೆಟ್ಗಳ ಗೊಂಚಲು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Thu, 17 October 24