“ಎಜಾಜ್ ಪಟೇಲ್” (Ajaz Patel) ಇಂದು ಕ್ರಿಕೆಟ್ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಬೌಲರ್. ಭಾರತೀಯ ನೆಲದಲ್ಲಿ ಹುಟ್ಟಿ ನ್ಯೂಜಿಲೆಂಡ್ ತಂಡದ ಪರ ಆಡಿ ಭಾರತದಲ್ಲೇ ಭಾರತದ ವಿರುದ್ಧ 10 ವಿಕೆಟ್ (Ajaz Patel 20 Wicket) ಕಿತ್ತ ಸಾಧನೆ ಇವರದ್ದು. ಹೌದು, ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಎಜಾಜ್ ಪಟೇಲ್ ಭಾಜನರಾಗಿದ್ದು, ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಹೊಸ ಇತಿಹಾಸ ಬರೆದಿದ್ದಾರೆ. ಜಿಮ್ ಲೇಕರ್ (Jim Laker) ಮತ್ತು ಅನಿಲ್ ಕುಂಬ್ಳೆ (Anil Kumble) ಬಳಿಕ ವಿಶ್ವದ ಮೂರನೇ ಆಟಗಾರನಾಗಿ ಅಜಾಜ್ ಪಟೇಲ್ ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾದ್ರೆ ಈ ಎಜಾಜ್ ಪಟೇಲ್ ಯಾರು?, ಇವರ ಕ್ರಿಕೆಟ್ ಸಾಧನೆ ಏನು?.
ಈಗಾಗಲೇ ತಿಳಿದಿರುವಂತೆ ಎಜಾಜ್ ಪಟೇಲ್ ಮೂಲತಃ ಭಾರತದವರು. ಇವರ ಜನನ ಆಗಿದ್ದು ಮುಂಬೈನಲ್ಲಿ. ಎಜಾಜ್ಗೆ 8 ವರ್ಷವಿರುವಾಗ ಇವರ ಕುಟುಂಬ ಭಾರತದಿಂದ ನ್ಯೂಜಿಲೆಂಡ್ಗೆ ತೆರಳಿತು. ಮುಂದೆ ಇವರು ನ್ಯೂಜಿಲೆಂಡ್ನ ದೇಶೀಯ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ಪರವಾಗಿ ಮೊದಲು ಆಡಲು ಶುರು ಮಾಡಿದರು. ನ್ಯೂಜಿಲೆಂಡ್ ಕ್ರಿಕೆಟ್ ಇವರಿಗೆ 2018 ರಲ್ಲಿ ಡೊಮೆಸ್ಟಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ದೇಶೀಯ ಕ್ರಿಕೆಟ್ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ 30ನೇ ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಎಜಾಜ್ ಅಕ್ಟೋಬರ್ 31, 2018 ರಲ್ಲಿ ನ್ಯೂಜಿಲೆಂಡ್ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಇಲ್ಲಿ ಪಾಕಿಸ್ತಾನ ವಿರುದ್ಧ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 1 ವಿಕೆಟ್ ಕಿತ್ತರು. ಬಳಿಕ 2018ರ ನವೆಂಬರ್ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೂ ಕಾಲಿಟ್ಟರು. ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಎದುರಾಳಿಯ ಹುಟ್ಟಡಗಿಸಿದ ಎಜಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಮೂಲಕ ಪದಾರ್ಪಣೆಯ ಟೆಸ್ಟ್ನಲ್ಲೇ 7 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.
ಈವರೆಗೆ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಎಜಾಜ್ ಪಟೇಲ್ 18 ಇನ್ನಿಂಗ್ಸ್ಗಳಲ್ಲಿ 39 ವಿಕೆಟ್ ಪಡೆದಿದ್ದಾರೆ. ಭಾರತ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 119 ರನ್ಗೆ 10 ವಿಕೆಟ್ ಕಿತ್ತಿರುವುದೇ ಇವರ ಜೀವನ ಶ್ರೇಷ್ಠ ಸಾಧನೆಯಾಗಿದೆ. ಟಿ 20 ಕ್ರಿಕೆಟ್ನಲ್ಲಿ ಇವರು ಆಡಿದ್ದು ಏಳು ಪಂದ್ಯಗಳನ್ನು ಮಾತ್ರ. ಇದರಲ್ಲೂ 11 ವಿಕೆಟ್ ಕಬಳಿಸಿದ್ದಾರೆ. ಕೇವಲ 16 ರನ್ ನೀಡಿ 4 ವಿಕೆಟ್ ಪಡೆದಿರುವುದು ಅತ್ಯುತ್ತಮ ಸಾಧನೆ. ಇನ್ನು ದೇಶೀಯ ಕ್ರಿಕೆಟ್ನಲ್ಲಿ ಆಡಿದ 68 ಪಂದ್ಯಗಳಲ್ಲಿ ಬರೋಬ್ಬರಿ 251 ವಿಕೆಟ್ ಕಿತ್ತಿದ್ದಾರೆ.
ಇಂಡೋ- ಕಿವೀಸ್ ಎರಡನೇ ಟೆಸ್ಟ್ ವಿಚಾರಕ್ಕೆ ಬರುವುದಾದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 109.5 ಓವರ್‌ಗಳಲ್ಲಿ 325 ರನ್ಗಳಿಗೆ ಆಲೌಟ್ ಆಗಿದೆ. ಮಯಾಂಕ್ ಅಗರ್ವಾಲ್ (150 ರನ್) ಏಕಾಂಗಿ ನಿರ್ವಹಣೆ ಫಲವಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರಾಯಿತು. ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್ ಕಲೆಹಾಕಿತ್ತು.
Ajaz Patel: ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆದು ಕುಂಬ್ಳೆ ದಾಖಲೆ ಸರಿಗಟ್ಟಿದ ಭಾರತ ಸಂಜಾತ ಎಜಾಜ್ ಪಟೇಲ್
MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್ವುಡ್ ನಟಿಯ ವಿಡಿಯೋ ವೈರಲ್
(IND vs NZ Who is Ajaz Patel Here is New Zealand Cricketer Biography Records and Cricket history)