T20 World Cup: ಭಾರತ ವಿರುದ್ಧ ಐತಿಹಾಸಿಕ ಸಾಧನೆ; ಮೈದಾನದಲ್ಲೇ ಕಣ್ಣೀರಿಟ್ಟ ಪಾಕ್ ನಾಯಕ ಬಾಬರ್ ಅಜಮ್ ತಂದೆ
T20 World Cup: ಬಾಬರ್ ಅಜಮ್ ವಿಶ್ವಕಪ್ ವೇದಿಕೆಯಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಮೊದಲ ನಾಯಕರಾದರು. ಪಂದ್ಯದ ನಂತರ ಬಾಬರ್ ತಂದೆಗೆ ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕಷ್ಟವಾಯಿತು.
ಮಗ ಅದ್ಭುತ ಸಾಧನೆ ಮಾಡಿದರೆ ತಂದೆಗೆ ಇದಕ್ಕಿಂತ ದೊಡ್ಡ ವಿಷಯ ಏನಿದೆ. ಮಗನ ಏಳಿಗೆಯನ್ನ ಕಣ್ತುಂಬಿಕೊಂಡು ಸಂತೋಷಪಡಲು ಪ್ರತಿಯೊಬ್ಬ ತಂದೆಯೂ ಕಾಯುತ್ತಿರುತ್ತಾರೆ. ಅಂತಹದ್ದೆ ಘಟನೆ ನೆನೆಯ ಪಂದ್ಯದಲ್ಲಿ ನಡೆದಿದೆ. ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವಿಗೆ ಬಾಬರ್ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅವರ ನಾಯಕತ್ವದಿಂದ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಬಾಬರ್ ಅಜಮ್ ವಿಶ್ವಕಪ್ ವೇದಿಕೆಯಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಮೊದಲ ನಾಯಕರಾದರು. ಪಂದ್ಯದ ನಂತರ ಬಾಬರ್ ತಂದೆಗೆ ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕಷ್ಟವಾಯಿತು.
ಭಾರತದ ವಿರುದ್ಧ ಪಾಕಿಸ್ತಾನದ ವಿಜಯದ ನಂತರ, ಸ್ಟೇಡಿಯಂನ ವೀಡಿಯೊ ಒಂದು ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೋ ಬಾಬರ್ ಆಜಂ ತಂದೆಯದ್ದು. ಈ ವಿಡಿಯೋದಲ್ಲಿ ಪಾಕ್ ನಾಯಕನ ತಂದೆ ಗೆಲುವಿನ ನಂತರ ಅಳುತ್ತಿರುವುದನ್ನು ಕಾಣಬಹುದು.
ಬಾಬರ್ ಅಜಮ್ ತಂದೆ ಭಾವುಕರಾದರು ಆಜಮ್ ತಂದೆಯನ್ನು ಬಾಬರ್ ಅಭಿನಂದಿಸುತ್ತಿರುವುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಅಭಿಮಾನಿಗಳು ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಅವರ ಮಗ ದೇಶಕ್ಕಾಗಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಪ್ರಶಂಸಿಸುತ್ತಿದ್ದಾರೆ. ಇದು ತಂದೆಗೆ ಖಂಡಿತ ಹೆಮ್ಮೆಯ ಕ್ಷಣವಾಗಿದೆ.
ಈ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿತ್ತು 2021 ರ ಟಿ 20 ವಿಶ್ವಕಪ್‌ನಲ್ಲಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರರ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಿದವು. ಮೊದಲು ಆಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 151 ರನ್ ಗಳಿಸಿತು. ಭಾರತದಿಂದ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಆದಾಗ್ಯೂ, ವಿರಾಟ್ ಕೊಹ್ಲಿ 57 ರನ್ಗಳ ನಾಯಕತ್ವದ ಇನ್ನಿಂಗ್ಸ್ ಆಡಿ ತಂಡವು 151 ರನ್ ಗಡಿ ತಲುಪಲು ಸಹಾಯ ಮಾಡಿದರು. ಆದಾಗ್ಯೂ, ಪಾಕಿಸ್ತಾನ ಚೇಸ್ ಆರಂಭಿಸಿದ ಮನಸ್ಥಿತಿ ಮತ್ತು ಶೈಲಿ. ಅವರು ಭಾರತೀಯ ಬೌಲರ್‌ಗಳ ಮೇಲೆ ದಾಳಿ ಮಾಡಿದ ಯೋಜನೆ. ಎಲ್ಲವೂ ಭಾರತವನ್ನು ಸೋಲಿನ ದವಡೆಗೆ ತಳಿತು. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ ಎಲ್ಲಿಯೂ ಕಾಣಿಸಲಿಲ್ಲ, ಮತ್ತು ಪಂದ್ಯವನ್ನು 10 ವಿಕೆಟ್‌ಗಳಿಂದ ಕಳೆದುಕೊಂಡಿತು. ಪಾಕಿಸ್ತಾನದ ಪರವಾಗಿ ಬಾಬರ್ ಅಜಮ್ 68 ರನ್ ಮತ್ತು ಮೊಹಮ್ಮದ್ ರಿಜ್ವಾನ್ 79 ರನ್ ಗಳಿಸಿ ಅಜೇಯರಾಗಿ ಮರಳಿದರು. ಪಂದ್ಯದಲ್ಲಿ ರೋಹಿತ್, ರಾಹುಲ್ ಮತ್ತು ವಿರಾಟ್ ಅವರ ವಿಕೆಟ್ ಕಬಳಿಸಿದ ಶಾಹೀನ್ ಅಫ್ರಿದಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.