IND vs PAK: ಸಂಡೆ ಹೇಗಿತ್ತು? ಪಾಕಿಗಳ ಕಾಲೆಳೆದ ಇರ್ಫಾನ್ ಪಠಾಣ್
India vs Pakistan: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 12 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ 6 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಇನ್ನು ಮೂರು ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾಗಿವೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಎಲ್ಲರ ಗಮನ ಸೆಳೆಯುವುದು ಇರ್ಫಾನ್ ಪಠಾಣ್ ಅವರ ಟ್ವೀಟ್. 2022 ರಿಂದ ಶುರುವಾದ ಈ ಟ್ವೀಟ್ ಸಮರ ಈಗಲೂ ಮುಂದುವರೆದಿದೆ. ಈ ಬಾರಿ ಸಂಡೆ ಹೇಗಿತ್ತು ಎಂದು ಕೇಳುವ ಮೂಲಕ ಇರ್ಫಾನ್ ಪಠಾಣ್ ಪಾಕಿಸ್ತಾನಿಗಳ ಕಾಲೆಳೆದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಪಾಕಿಗಳ ಕಾಲೆಳೆಯಲು ಆರಂಭಿಸಿದ್ದು 2022 ರಲ್ಲಿ. 2022ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದ ಬೆನ್ನಲ್ಲೇ ಇರ್ಫಾನ್ ಪಠಾಣ್, ನೆರೆಹೊರೆಯವರೇ (ಪಾಕಿಸ್ತಾನ್) ಭಾನುವಾರ ಹೇಗಿತ್ತು? ಎಂದು ಟ್ವೀಟಿಸಿ ಕಾಲೆಳೆದಿದ್ದರು.
ಈ ಟ್ವೀಟ್ ಭಾರೀ ವೈರಲ್ ಆದ ಬೆನ್ನಲ್ಲೇ ಪಾಕಿಸ್ತಾನಿಗಳು ಇರ್ಫಾನ್ ಪಠಾಣ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮುಗಿ ಬಿದ್ದಿದ್ದರು. ಇದಾದ ಬಳಿಕ ಪ್ರತಿ ಬಾರಿ ಪಾಕ್ ವಿರುದ್ಧ ಭಾರತ ತಂಡ ಗೆದ್ದಾಗ ಪಾಕಿಸ್ತಾನಿಗಳ ಕಾಲೆಳೆಯುವ ಕಾಯಕ ಮುಂದುವರೆಸಿದ್ದಾರೆ.
2023 ರ ಏಕದಿನ ವಿಶ್ವಕಪ್ ಪಂದ್ಯದ ಸೋಲಿನ ಬೆನ್ನಲ್ಲೇ. ಇವತ್ತು ಸಾಕಷ್ಟು ಮೌನ ಆವರಿಸಿದೆ… ಈ ಬಾರಿ ನೆರೆಹೊರೆಯವರು ಟಿವಿ ಜೊತೆಗೆ ಮೊಬೈಲ್ ಫೋನ್‌ಗಳನ್ನು ಒಡೆದಿದ್ದಾರೆ ಅನಿಸುತ್ತೆ ಎಂದು ಪಾಕ್ ಅಭಿಮಾನಿಗಳ ಕಾಲೆಳೆದಿದ್ದರು.
ಇದೀಗ ಏಷ್ಯಾಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್ ತಂಡವನ್ನು ಸೋಲಿಸುತ್ತಿದ್ದಂತೆ ಇರ್ಫಾನ್ ಪಠಾಣ್ ಮತ್ತೆ ಸಂಡೆ ಟ್ವೀಟ್ನೊಂದಿಗೆ ಹಿಂತಿರುಗಿದ್ದಾರೆ. ಈ ಬಾರಿ ಕೂಡ ಸಂಡೆ ಹೇಗಿತ್ತು ಎಂದು ಟ್ವೀಟಿಸಿ ಪಾಕಿಸ್ತಾನಿಗಳ ಕಾಲೆಳೆದಿದ್ದಾರೆ. ಇದೀಗ ಇರ್ಫಾನ್ ಪಠಾಣ್ ಅವರ ಟ್ವೀಟ್ ಭಾರೀ ವೈರಲ್ ಆಗಿದೆ.
Hanji, kesa raha sunday?
— Irfan Pathan (@IrfanPathan) September 21, 2025
ಬಗ್ಗು ಬಡಿದ ಭಾರತ:
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 14ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಸಿಡಿಸಿದರು.
ಇದನ್ನೂ ಓದಿ: VIDEO: ಕೈ ಸನ್ನೆಯೊಂದಿಗೆ ಭಾರತೀಯ ಸೈನಿಕರನ್ನು ಹೀಯಾಳಿಸಿದ ಹಾರಿಸ್ ರೌಫ್
ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಬಾರಿಯ ಏಷ್ಯಾಕಪ್ನಲ್ಲೂ ಭಾರತ ತಂಡ ಪಾಕಿಸ್ತಾನ್ ವಿರುದ್ಧ ಪಾರುಪತ್ಯ ಮೆರೆದಿದೆ. ಈ ಪಾರುಪತ್ಯದ ಗೆಲುವಿನ ಬೆನ್ನಲ್ಲೇ ಪಾಕಿಗಳ ಕಾಲೆಳೆಯುವ ಮೂಲಕ ಇರ್ಫಾನ್ ಪಠಾಣ್ ಗಮನ ಸೆಳೆದಿದ್ದಾರೆ.
Published On - 8:35 am, Mon, 22 September 25
