IND vs PAK: ಭಾರತ vs ಪಾಕ್ ಪಂದ್ಯಕ್ಕೆ 34 ಸಾವಿರ ಮಂದಿಗೆ ಮಾತ್ರ ಅವಕಾಶ..!

India vs Pakistan: ಭಾರತ ಮತ್ತು ಪಾಕಿಸ್ತಾನ್ ತಂಡಗಳು ಟಿ20 ಕ್ರಿಕೆಟ್​ನಲ್ಲಿ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅತ್ತ ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ. ಇದಾಗ್ಯೂ ಟಿ20 ವಿಶ್ವಕಪ್​ 2021 ರಲ್ಲಿ ಭಾರತ ತಂಡಕ್ಕೆ ಸೋಲುಣಿಸುವಲ್ಲಿ ಪಾಕಿಸ್ತಾನ್ ಯಶಸ್ವಿಯಾಗಿತ್ತು. ಹೀಗಾಗಿ ಈ ಬಾರಿ ಕೂಡ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

IND vs PAK: ಭಾರತ vs ಪಾಕ್ ಪಂದ್ಯಕ್ಕೆ 34 ಸಾವಿರ ಮಂದಿಗೆ ಮಾತ್ರ ಅವಕಾಶ..!
IND vs PAK
Follow us
ಝಾಹಿರ್ ಯೂಸುಫ್
|

Updated on:May 16, 2024 | 8:59 AM

ಟಿ20 ವಿಶ್ವಕಪ್​ಗೆ (T20 World Cup 2024) ದಿನಗಣನೆ ಶುರುವಾಗಿದೆ. ಜೂನ್ 2 ರಿಂದ ಶುರುವಾಗಲಿರುವ ಈ ಬಾರಿಯ ಟಿ20 ವಿಶ್ವಕಪ್​ಗೆ ಯುಎಸ್​ಎ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸಲಿದೆ. ಇನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೆಜ್ ಪಂದ್ಯವು ಜೂನ್ 9 ರಂದು ನಡೆಯಲಿದೆ.

ಇಂಡೊ-ಪಾಕ್​ ನಡುವಣ ಈ ರಣರೋಚಕ ಪಂದ್ಯಕ್ಕಾಗಿ ಈಗಾಗಲೇ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಆದರೆ ಈ ಸ್ಟೇಡಿಯಂನಲ್ಲಿ ಕೇವಲ 34 ಸಾವಿರ ಆಸನ ವ್ಯವಸ್ಥೆಗಳಿವೆ. ಹೀಗಾಗಿ ಹೆಚ್ಚಿನ ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸಲು ಅವಕಾಶವಿರುವುದಿಲ್ಲ.

ಇತ್ತ ಕಡಿಮೆ ಸೀಟ್​ಗಳಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ಟಿಕೆಟ್ ರೀ ಸೇಲ್ ಫ್ಲಾಟ್​ಫಾರ್ಮ್​ಗಳು ಇದೀಗ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಟಿಕೆಟ್​ ದರಗಳನ್ನು ಹೆಚ್ಚಿಸಿದೆ. ಅಂದರೆ ಐಸಿಸಿಯ ಅಧಿಕೃತ ವೆಬ್​ಸೈಟ್​ನಲ್ಲಿ 400 ಡಾಲರ್​ ಇದ್ದ (INR 33000) ವಿಐಪಿ ಟಿಕೆಟ್ ದರಗಳನ್ನು ಇದೀಗ, ರೀ ಸೇಲ್ ವೇದಿಕೆಗಳಲ್ಲಿ ಬರೋಬ್ಬರಿ 33 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.​

ಅಲ್ಲದೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಕನಿಷ್ಠ ಬೆಲೆಯ ಟಿಕೆಟ್​ಗಳು 1 ಲಕ್ಷ ರೂ.ಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿದೆ. ಈ ಮೊತ್ತವು ಪಂದ್ಯದ ದಿನಕ್ಕೂ ಮುಂಚಿತವಾಗಿ ಮತ್ತಷ್ಟು ಏರುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ 34 ಸಾವಿರ ಆಸನಗಳಿರುವ ಹೊಸ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವುದು ಭಾರತ ಮತ್ತು ಪಾಕಿಸ್ತಾನ್ ಅಭಿಮಾನಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಇದಾಗ್ಯೂ ಸಾಂಪ್ರದಾಯಿಕ ಎದುರಾಳಿಗಳ ರಣರೋಚಕ ಕಾದಾಟವನ್ನು ವೀಕ್ಷಿಸಲು ಉಭಯ ತಂಡಗಳ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಕ್ಕೆ ಟಿಕೆಟ್​ ದರಗಳ ಏರಿಕೆಯೇ ಸಾಕ್ಷಿ.

 ನಸ್ಸೌ ಕೌಂಟಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ವಿಡಿಯೋ:

ಭಾರತ ಟಿ20 ವಿಶ್ವಕಪ್​ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: IPL 2024: ಹೀಗಾದ್ರೆ RCB ಮತ್ತು CSK, ಎರಡೂ ತಂಡಗಳು ಪ್ಲೇಆಫ್​ಗೆ..!

ಪಾಕಿಸ್ತಾನ್ ಟಿ20 ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಗಾ, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ ಮತ್ತು ಉಸ್ಮಾನ್ ಖಾನ್. (ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬಳಿಕ 15 ಸದಸ್ಯರ ತಂಡವನ್ನು ಪ್ರಕಟಿಸಲಾಗುತ್ತದೆ).

Published On - 8:59 am, Thu, 16 May 24

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ