AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 30 ರನ್, 42 ಎಸೆತಗಳಲ್ಲಿ 6 ವಿಕೆಟ್ ಪತನ! ಇಸ್ಪೀಟೆಲೆಗಳಂತೆ ಚದುರಿದ ಭಾರತದ ಬ್ಯಾಟಿಂಗ್

IND vs SA: ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಉತ್ತಮ ಆರಂಭದ ಹೊರತಾಗಿಯೂ 327 ರನ್‌ಗಳಿಗೆ ಕುಸಿಯಿತು. ಮೂರನೇ ದಿನದಾಟದ ಮೊದಲ ಗಂಟೆಯಲ್ಲಿ 42 ಎಸೆತಗಳಲ್ಲಿ ಆರು ವಿಕೆಟ್ ಕಳೆದುಕೊಂಡಿತು.

IND vs SA: 30 ರನ್, 42 ಎಸೆತಗಳಲ್ಲಿ 6 ವಿಕೆಟ್ ಪತನ! ಇಸ್ಪೀಟೆಲೆಗಳಂತೆ ಚದುರಿದ ಭಾರತದ ಬ್ಯಾಟಿಂಗ್
ಆಫ್ರಿಕಾ ತಂಡ
TV9 Web
| Updated By: ಪೃಥ್ವಿಶಂಕರ|

Updated on: Dec 28, 2021 | 3:09 PM

Share

ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಉತ್ತಮ ಆರಂಭದ ಹೊರತಾಗಿಯೂ 327 ರನ್‌ಗಳಿಗೆ ಕುಸಿಯಿತು. ಮೂರನೇ ದಿನದಾಟದ ಮೊದಲ ಗಂಟೆಯಲ್ಲಿ 42 ಎಸೆತಗಳಲ್ಲಿ ಆರು ವಿಕೆಟ್ ಕಳೆದುಕೊಂಡಿತು. ಮೂರನೇ ದಿನ ಬೆಳಗ್ಗೆ ಭಾರತ 55 ರನ್‌ಗಳಾಗುವಷ್ಟರಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಟೀಂ ಇಂಡಿಯಾ ಮೂರು ವಿಕೆಟ್‌ಗೆ 272 ರನ್‌ಗಳೊಂದಿಗೆ ಮೂರನೇ ದಿನದ ಆಟವನ್ನು ಪ್ರಾರಂಭಿಸಿತು. ಆದರೆ ಅವರ ಮಧ್ಯಮ ಕ್ರಮಾಂಕವು ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ಅವರ ಮುಂದೆ ಮಂಡಿಯೂರಿತು. ಇದಕ್ಕೂ ಮುನ್ನ ದೊಡ್ಡ ಮೊತ್ತದ ನಿರೀಕ್ಷೆ ಹುಸಿಯಾಯಿತು. ಈ ಟೆಸ್ಟ್ ಪಂದ್ಯದ ಎರಡನೇ ದಿನ ಮಳೆಯಿಂದಾಗಿ ವಾಶ್ ಔಟ್ ಆಗಿದ್ದು, ಒಂದೇ ಒಂದು ಎಸೆತವನ್ನು ಎಸೆಯಲಾಗಲಿಲ್ಲ.

ಶತಕವೀರ ಕೆಎಲ್ ರಾಹುಲ್ ರೂಪದಲ್ಲಿ ಭಾರತ ಮೂರನೇ ದಿನ ಮೊದಲ ವಿಕೆಟ್ ಕಳೆದುಕೊಂಡಿತು. 123 ರನ್ ಗಳಿಸಿ ನಾಲ್ಕನೇ ವಿಕೆಟ್‌ಗೆ ರಬಾಡಗೆ ಬಲಿಯಾದರು. ಅವರು ತಮ್ಮ ಮೊದಲ ದಿನದ ಸ್ಕೋರ್‌ಗೆ ಒಂದೇ ಒಂದು ರನ್ ಸೇರಿಸಲು ಸಾಧ್ಯವಾಗಲಿಲ್ಲ. ಅವರ ನಿರ್ಗಮನದ ನಂತರ, ವಿಕೆಟ್‌ಗಳ ಸಾಲು ಕಂಡುಬಂದಿತು. ನಂತರ ಅಜಿಂಕ್ಯ ರಹಾನೆ ಕೂಡ ಮರಳಿದರು. 48 ರನ್ ಗಳಿಸಿದ್ದಾಗ ರಹಾನೆ ಲುಂಗಿ ಎನ್‌ಗಿಡಿ ಎಸೆತಕ್ಕೆ ಕ್ಯಾಚ್ ನೀಡಿದರು. ರಿಷಬ್ ಪಂತ್ (8), ರವಿಚಂದ್ರನ್ ಅಶ್ವಿನ್ (4), ಶಾರ್ದೂಲ್ ಠಾಕೂರ್ (4), ಮೊಹಮ್ಮದ್ ಶಮಿ (8) ರನ್ ಗಳಿಸಿದ ನಂತರ ಅಗ್ಗವಾಗಿ ಮರಳಿದರು. ಇದರಿಂದಾಗಿ ಸ್ಕೋರ್ 9 ವಿಕೆಟ್​ಗೆ 308 ರನ್ ಆಯಿತು.

ಎನ್‌ಗಿಡಿ ಮಾರಕ ಲುಂಗಿ ಎನ್‌ಗಿಡಿ ರಹಾನೆ, ಪಂತ್ ಮತ್ತು ಶಮಿಯನ್ನು ಔಟ್​ ಮಾಡಿದರು. ರಾಹುಲ್, ಅಶ್ವಿನ್ ಮತ್ತು ಠಾಕೂರ್ ಅವರ ವಿಕೆಟ್‌ಗಳನ್ನು ರಬಾಡ ಪಡೆದರು. ಮೂರನೇ ದಿನ ಬಿದ್ದ ಆರು ವಿಕೆಟ್‌ಗಳಲ್ಲಿ ನಾಲ್ಕು ಸ್ಟಂಪ್‌ಗಳ ಹಿಂದೆ ಕ್ಯಾಚ್‌ಗಳ ಮೂಲಕ ಬಿದ್ದವು. ಈ ಎಲ್ಲಾ ಕ್ಯಾಚ್‌ಗಳನ್ನು ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ಹಿಡಿದಿದ್ದರು. ಲುಂಗಿ ಎನ್‌ಗಿಡಿ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಪಡೆದರು. ಅವರು ಎರಡನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದರು. ಈ ಹಿಂದೆ 2018ರಲ್ಲಿ ಭಾರತದ ವಿರುದ್ಧವೇ ಈ ಸಾಧನೆ ಮಾಡಿದ್ದರು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?