IND vs SA: 2ನೇ ಟೆಸ್ಟ್​ಗೆ​ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ

IND vs SA 2nd Test: ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

IND vs SA: 2ನೇ ಟೆಸ್ಟ್​ಗೆ​ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
IND vs SA 2nd Test
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 03, 2024 | 7:30 AM

ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ 2ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಸರಣಿ ನಿರ್ಣಾಯ. ಎರಡು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವನ್ನು ಸೌತ್ ಆಫ್ರಿಕಾ ತಂಡ ಗೆದ್ದುಕೊಂಡಿದೆ. ಇದೀಗ 2ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿಯನ್ನು ಡ್ರಾನಲ್ಲಿ ಕೊನೆಗೊಳಿಸಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶವಿದೆ.

ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಇರಾದೆಯಲ್ಲಿರುವ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ.

ಇನ್ನು ಬೆನ್ನು ನೋವಿನ ಕಾರಣ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದ ರವೀಂದ್ರ ಜಡೇಜಾ ಅಶ್ವಿನ್ ಸ್ಥಾನದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು. ಮತ್ತೊಂದೆಡೆ ಶಾರ್ದೂಲ್ ಠಾಕೂರ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಹೀಗಾಗಿ ಅವರ ಬದಲಿಗೆ ಮುಕೇಶ್ ಕುಮಾರ್​ಗೆ ಚಾನ್ಸ್​ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಅದರಂತೆ ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದರೆ, 6 ಮತ್ತು 7ನೇ ಕ್ರಮಾಂಕಗಳಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಬ್ಯಾಟ್ ಬೀಸಬಹುದು.

ಇನ್ನು ಸೌತ್ ಆಫ್ರಿಕಾ ಪಿಚ್​ಗಳು ವೇಗದ ಬೌಲಿಂಗ್​ಗೆ ಸಹಕಾರಿಯಾಗಿರುವ ಕಾರಣ ಟೀಮ್ ಇಂಡಿಯಾ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಮುಕೇಶ್ ಕುಮಾರ್​ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…

  1. ರೋಹಿತ್ ಶರ್ಮಾ (ನಾಯಕ)
  2. ಯಶಸ್ವಿ ಜೈಸ್ವಾಲ್
  3. ಶುಭ್​ಮನ್ ಗಿಲ್
  4. ವಿರಾಟ್ ಕೊಹ್ಲಿ
  5. ಶ್ರೇಯಸ್ ಅಯ್ಯರ್
  6. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  7. ರವೀಂದ್ರ ಜಡೇಜಾ
  8. ಮುಕೇಶ್ ಕುಮಾರ್
  9. ಜಸ್​ಪ್ರೀತ್ ಬುಮ್ರಾ
  10. ಮೊಹಮ್ಮದ್ ಸಿರಾಜ್
  11. ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

ಭಾರತ ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್  ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್, ಅವೇಶ್ ಖಾನ್.

ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ