ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನ ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಒಂದೆಡೆ ರಸ್ಸಿ ವಂಡೆರ್ ಡುಸ್ಸೆನ್ ರಿಷಭ್ ಪಂತ್ ಅವರನ್ನು ಕೆಣಕಿ ಮುನ್ನುಗ್ಗಿ ಹೊಡೆಯಲು ಪ್ರೇರೇಪಿಸಿ ವಿಕೆಟ್ ಪಡೆದರೆ, ಔಟಾದ ಬಳಿಕ ಪಂತ್ ತಪ್ಪಿ ದಕ್ಷಿಣ ಆಫ್ರಿಕಾ ಡ್ರೆಸಿಂಗ್ ರೂಮ್ಗೆ ತೆರಳಿದ್ದರು. ಹಾಗೆಯೇ ಮಾರ್ಕೊ ಜಾನ್ಸೆನ್ ಹಾಗೂ ಜಸ್ಪ್ರೀತ್ ಬುಮ್ರಾ ನಡುವೆ ಮೈದಾನದಲ್ಲೇ ವಾಗ್ವಾದ ಕೂಡ ನಡೆಯಿತು. ಇನ್ನೊಂದೆಡೆ 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ 240 ರನ್ಗಳ ಟಾರ್ಗೆಟ್ ನೀಡಿ ವಿಕೆಟ್ಗಾಗಿ ಹರಸಾಹಸ ನಡೆಸಿದರು. ಈ ವೇಳೆ ಟೀಮ್ ಇಂಡಿಯಾ ಬೌಲರುಗಳ ಸತತ ಪ್ರಯತ್ನದಿಂದ ಇಕ್ಕಟಿಗೆ ಸಿಲುಕಿದ್ದು ಫೀಲ್ಡ್ ಅಂಪೈರ್ ಎಂಬುದು ವಿಶೇಷ.
ಏಕೆಂದರೆ ಮೈದಾನದಲ್ಲಿ ಆಟಗಾರರ ಸ್ಲೆಡ್ಜಿಂಗ್ ಹಾಗೂ ಕಾಲೆಳೆಯುವಿಕೆಯನ್ನು ನಿಯಂತ್ರಿಸುವುದು ಅಂಪೈರ್ಗೆ ಹೊಸ ಸವಾಲಾಗಿ ಮಾರ್ಪಟ್ಟಿತ್ತು. ಅದರಲ್ಲೂ ಕೆಲವೊಮ್ಮೆ ಬೌಲರ್‌ಗಳು ಅಂಪೈರ್ ಮೇಲೆ ಒತ್ತಡ ಹೇರುತ್ತಿರುವುದು ಕೂಡ ಕಂಡು ಬಂತು. ನಿರಂತರವಾಗಿ ಅಪೀಲ್ ಸಲ್ಲಿಸುವ ಮೂಲಕ ವಿಕೆಟ್ಗಾಗಿ ಟೀಮ್ ಇಂಡಿಯಾ ಬೌಲರುಗಳು ಮನವಿ ಮಾಡಿದ್ದರು. ಒಂದಷ್ಟು ಹೊತ್ತು ಸಹಿಸಿಕೊಂಡ ಅಂಪೈರ್ ಮರಿಯಾಸ್ ಎರಾಸ್ಮಸ್ ಆ ಬಳಿಕ ಅಸಮಾಧಾನ ಹೊರಹಾಕಿದರು.
ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಒಂದೇ ಓವರ್‌ನಲ್ಲಿ ಎರಡು ಬಾರಿ ಸತತವಾಗಿ ಮನವಿ ಮಾಡಿದರು. ಓವರ್‌ನ ನಂತರ, ಆಟಗಾರರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವಾಗ, ಎರಾಸ್ಮಸ್ ಸ್ಟಂಪ್ ಮೈಕ್‌ನಲ್ಲಿ, ‘ನೀವು ಪ್ರತಿ ಓವರ್‌ನಲ್ಲೂ ನನಗೆ ಹೃದಯಾಘಾತವನ್ನು ನೀಡುತ್ತಿದ್ದೀರಿ’ ಎಂದು ಹೇಳಿದ್ದಾರೆ. ಅಂಪೈರ್ ಹೇಳಿದ ಈ ಮಾತು ಸ್ಟಂಪ್ ಮೈಕ್‌ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 202 ರನ್ಗಳಿಸಿದರೆ, 2ನೇ ಇನಿಂಗ್ಸ್ನಲ್ಲಿ 266 ರನ್ ಕಲೆಹಾಕಿತು. ಇತ್ತ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 229 ರನ್ ಬಾರಿಸಿ ಮುನ್ನಡೆ ಸಾಧಿಸಿತ್ತು. ಇದೀಗ 240 ರನ್ಗಳ ಟಾರ್ಗೆಟ್ನೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್ಗಳಿಸಿದೆ. ದಕ್ಷಿಣ ಆಫ್ರಿಕಾಗೆ ಗೆಲ್ಲಲು ಇನ್ನೂ 122 ರನ್ಗಳ ಅವಶ್ಯಕತೆಯಿದೆ. ಅತ್ತ ಟೀಮ್ ಇಂಡಿಯಾ 8 ವಿಕೆಟ್ ಕಬಳಿಸಿದರೆ ಜಯ ತನ್ನದಾಗಿಸಿಕೊಳ್ಳಬಹುದು.
Marais Erasmus ? pic.twitter.com/xAC0yT8Uef
— Benaam Baadshah (@BenaamBaadshah4) January 5, 2022
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IND vs SA: Marais Erasmus said ‘you guys are giving me a bloody heart-attack’)