IND vs SA: ಭಾರತಕ್ಕೆ ವಿಶ್ವ ದಾಖಲೆ ಮಾಡಲು ಬಿಡುವುದಿಲ್ಲ ಎನ್ನುತ್ತಾ ದೆಹಲಿಗೆ ಬಂದಿಳಿದ ಆಫ್ರಿಕಾ ಪಡೆ..!
IND vs SA: ಭಾರತದ ನೆಲಕ್ಕೆ ಕಾಲಿಟ್ಟ ತಕ್ಷಣ ಮಾತನಾಡಿದ ತೆಂಬಾ ಬಾವುಮಾ, 'ಈ ವರ್ಷ ವಿಶ್ವಕಪ್ ಮತ್ತು ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯು ನಮಗೆ ತಯಾರಿ ನಡೆಸಲು ಉತ್ತಮ ಅವಕಾಶವಾಗಿದೆ. ನಾವು ಟೀಮ್ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವುದನ್ನು ತಪ್ಪಿಸುತ್ತೇವೆ ಎಂದಿದ್ದಾರೆ.
ಐಪಿಎಲ್ 2022 (IPL 2022) ಮುಗಿದಿದೆ ಮತ್ತು ಈಗ ಅಭಿಮಾನಿಗಳು ಟೀಂ ಇಂಡಿಯಾ (Team India) ಮೈದಾನಕ್ಕಿಳಿಯುವುದನ್ನು ಕಾಣಲು ಕಾಯುತ್ತಿದ್ದಾರೆ. ಜೂನ್ 9 ರಂದು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು (India vs South Africa T20i Series) T20 ಸರಣಿಯಲ್ಲಿ ಎದುರಿಸುತ್ತಿದೆ. ಐದು ಪಂದ್ಯಗಳ ಟಿ20 ಸರಣಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ( Arun Jaitley Stadium)ದಲ್ಲಿ ಆರಂಭವಾಗಲಿದ್ದು, ಎದುರಾಳಿ ದಕ್ಷಿಣ ಆಫ್ರಿಕಾ ತಂಡ ಭಾರತದ ನೆಲಕ್ಕೆ ಕಾಲಿಟ್ಟಿದೆ. ಗುರುವಾರ ಬೆಳಗ್ಗೆ ದಕ್ಷಿಣ ಆಫ್ರಿಕಾ ತಂಡ ದೆಹಲಿ ತಲುಪಿದ್ದು, ಇದೀಗ ಟೀಂ ಇಂಡಿಯಾವನ್ನು ಅವರದೇ ಮನೆಯಲ್ಲಿ ಸೋಲಿಸುವುದು ಈ ತಂಡದ ಗುರಿಯಾಗಿದೆ. ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದ್ದು ತನ್ನ ಬಲಿಷ್ಠ ತಂಡದೊಂದಿಗೆ ಭಾರತಕ್ಕೆ ಬಂದಿಳಿದಿದೆ. ಮತ್ತೊಂದೆಡೆ ಟೀಂ ಇಂಡಿಯಾದ ಅನುಭವಿ ಆಟಗಾರರು ವಿಶ್ರಾಂತಿ ಪಡೆಯುತ್ತಿರುವುದು ಟೀಂ ಇಂಡಿಯಾಕ್ಕೆ ಕೊಂಚ ಹಿನ್ನಡೆ ತಂದಿದೆ. ದಕ್ಷಿಣ ಆಫ್ರಿಕಾದ 16 ಆಟಗಾರರಲ್ಲಿ 16 ಆಟಗಾರರು ಅತ್ಯಂತ ಪ್ರತಿಭಾವಂತರಾಗಿದ್ದು, ಅವರಿಗೆ ಭಾರತ ತಂಡವನ್ನು ಸೋಲಿಸುವ ಶಕ್ತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಎಚ್ಚರಿಕೆ ವಹಿಸಬೇಕಿದೆ.
ಟೀಮ್ ಇಂಡಿಯಾ ವಿಶ್ವ ದಾಖಲೆ ಮಾಡಲು ಅವಕಾಶ ನೀಡುವುದಿಲ್ಲ- ಬಾವುಮಾ
ಟೀಂ ಇಂಡಿಯಾ ವಿಶ್ವ ದಾಖಲೆ ಮಾಡುವುದನ್ನು ತಡೆಯುವುದು ದಕ್ಷಿಣ ಆಫ್ರಿಕಾದ ಗುರಿಯಾಗಿದೆ ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾ ಸತತ 12 ಪಂದ್ಯಗಳನ್ನು ಗೆದ್ದಿದ್ದು, ಇನ್ನೊಂದು ಪಂದ್ಯವನ್ನು ಗೆದ್ದ ನಂತರ ಸತತ 13 ಪಂದ್ಯಗಳನ್ನು ಗೆದ್ದ ಏಕೈಕ ತಂಡವಾಗಲಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡದ ಉದ್ದೇಶವೇ ಬೇರೆ. ಭಾರತದ ನೆಲಕ್ಕೆ ಕಾಲಿಟ್ಟ ತಕ್ಷಣ ಮಾತನಾಡಿದ ತೆಂಬಾ ಬಾವುಮಾ, ‘ಈ ವರ್ಷ ವಿಶ್ವಕಪ್ ಮತ್ತು ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯು ನಮಗೆ ತಯಾರಿ ನಡೆಸಲು ಉತ್ತಮ ಅವಕಾಶವಾಗಿದೆ. ನಾವು ಟೀಮ್ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವುದನ್ನು ತಪ್ಪಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: IND vs SA: ರಾಹುಲ್ ಪಡೆಗೆ ಸಿಹಿ ಸುದ್ದಿ; ಬಯೋ ಬಬಲ್ ನಿಯಮಗಳಿಂದ ಟೀಂ ಇಂಡಿಯಾ ಆಟಗಾರರು ಮುಕ್ತ!
ದಕ್ಷಿಣ ಆಫ್ರಿಕಾದ ಉತ್ಸಾಹ ಹೆಚ್ಚಿದೆ!
ದಕ್ಷಿಣ ಆಫ್ರಿಕಾ ತಂಡ ಅತ್ಯಂತ ಉತ್ಸಾಹದಿಂದ ಕಾಣುತ್ತಿದೆ. ವಾಸ್ತವವಾಗಿ ಈ ತಂಡವು ಭಾರತ ತಂಡವನ್ನು ಅವರ ಸ್ವಂತ ಮನೆಯಲ್ಲಿ ODI ಸರಣಿಯಲ್ಲಿ 3-0 ಅಂತರದಲ್ಲಿ ಸೋಲಿಸಿತು. ಐಪಿಎಲ್ 2022 ರಲ್ಲಿ ತಂಡದ ಮೂವರು ಸ್ಟಾರ್ ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದರು. ಲಕ್ನೋ ಸೂಪರ್‌ಜೈಂಟ್ಸ್ ಪರ ಆಡಿದ ಕ್ವಿಂಟನ್ ಡಿ ಕಾಕ್ ಐಪಿಎಲ್‌ನಲ್ಲಿ 508 ರನ್ ಗಳಿಸಿದರು. ಕೋಲ್ಕತ್ತಾ ವಿರುದ್ಧ ಅಜೇಯ 140 ರನ್ ಕೂಡ ಗಳಿಸಿದರು. ಡೇವಿಡ್ ಮಿಲ್ಲರ್ ಸುಮಾರು 70 ರ ಸರಾಸರಿಯಲ್ಲಿ 481 ರನ್ ಗಳಿಸಿದರು. ಮಿಲ್ಲರ್ ಫಿನಿಶರ್ ಆಗಿ ಗುಜರಾತ್ ಟೈಟಾನ್ಸ್‌ಗಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಐಪಿಎಲ್ ಫೈನಲ್‌ನಲ್ಲೂ ಮಿಲ್ಲರ್ 19 ಎಸೆತಗಳಲ್ಲಿ ಔಟಾಗದೆ 32 ರನ್ ಗಳಿಸಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿದರು. ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ಮಾರ್ಕ್ರಾಮ್ 12 ಪಂದ್ಯಗಳಲ್ಲಿ 47ಕ್ಕೂ ಅಧಿಕ ಸರಾಸರಿಯಲ್ಲಿ 381 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾದ ಮೂವರು ಪ್ರಮುಖ ಬ್ಯಾಟ್ಸ್ಮನ್ಗಳು ಭಾರತದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡುತ್ತಿರುವುದು ಟೀಂ ಇಂಡಿಯಾಕ್ಕೆ ಅಪಾಯದ ಸಂಗತಿಯಾಗಿದೆ. ಈ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ ಕೂಡ ಫಾರ್ಮ್ನಲ್ಲಿದ್ದು ಟೀಮ್ ಇಂಡಿಯಾಕ್ಕೆ ಹಾನಿ ಮಾಡಬಹುದು. ಇದಲ್ಲದೇ ತಬ್ರೇಜ್ ಶಮ್ಸಿ, ಕೇಶವ್ ಮಹಾರಾಜ್ ಅವರು ಕೂಡ ಭಾರತಕ್ಕೆ ತಲೆನೋವಾಗಿದ್ದಾರೆ. ಅಲ್ಲದೆ ಟೀಂ ಇಂಡಿಯಾದಲ್ಲಿ ಹೆಚ್ಚು ಸ್ಟಾರ್ ಆಟಗಾರರು ಇಲ್ಲದ ಕಾರಣ ಈ ಸರಣಿಯು ಟೀಂ ಇಂಡಿಯಾಗೆ ಅಗ್ನಿ ಪರೀಕ್ಷೆಯಂತಾಗಲಿದೆ ಎಂಬುದು ಸ್ಪಷ್ಟವಾಗಿದೆ.
Touchdown ??#INDvSA #BePartOfIt pic.twitter.com/kT67xxubwN
— Cricket South Africa (@OfficialCSA) June 2, 2022
ದಕ್ಷಿಣ ಆಫ್ರಿಕಾ ಟಿ20 ತಂಡ ಹೀಗಿದೆ:
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ತಬ್ರೇಝ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಯಾನ್ಸೆನ್.