IND vs SA: 2ನೇ ಟಿ20 ಪಂದ್ಯಕ್ಕೆ ಮಳೆ ಕಾಟ..! ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದ ಮಂಡಳಿ
IND Vs SA 2nd T20 Match Weather Forecast Report: ಹವಾಮಾನ ಮಾಹಿತಿ ವೆಬ್‌ಸೈಟ್ ಅಕ್ಯುವೆದರ್ ಮುನ್ಸೂಚನೆಯಂತೆ ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗಬಹುದು, ಉಳಿದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿಯಾಗಿದೆ.
ಅಕ್ಟೋಬರ್ 2 ರ ಭಾನುವಾರದಂದು ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವೆ T20 ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಈ ಪಂದ್ಯದ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ ಏಕೆಂದರೆ ಎರಡೂವರೆ ವರ್ಷಗಳ ನಂತರ ಮತ್ತೆ ಗುವಾಹಟಿಗೆ ಕ್ರಿಕೆಟ್ ಮರಳಿದೆ. ಹಿಂದಿನ ಜನವರಿ 2020 ರಲ್ಲಿ, ಟೀಂ ಇಂಡಿಯಾ (team india) ಇಲ್ಲಿ ಕೊನೆಯ ಬಾರಿಗೆ ಪಂದ್ಯವನ್ನಾಡಿತ್ತು. ಆದರೆ, ಆ ಪಂದ್ಯದಲ್ಲಿ ಏನಾಯಿತೋ ಅದೇ ಅಪಾಯ ಈ ಬಾರಿಯೂ ಕಾದಿದೆ. ಭಾನುವಾರ ನಡೆಯಲಿರುವ ಪಂದ್ಯದ ಮೇಲೆ ಕಣ್ಣಿಟ್ಟಿರುವ ಹವಾಮಾನದ ಬಗ್ಗೆ ಮಾತನಾಡಲಾಗುತ್ತಿದೆ.
ಕಳೆದ ಬಾರಿ ವಿಲನ್ ಆದ ಮಳೆ
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ಕೇವಲ 3 ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ, ಅದರಲ್ಲಿ ಒಂದು ಪಂದ್ಯವು ಮಳೆಯಿಂದಾಗಿ ಪ್ರಾರಂಭವಾಗಲಿಲ್ಲ. ಇದೀಗ ಭಾನುವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಆಕಾಶದಲ್ಲಿ ಮೋಡ ಕವಿದಿದ್ದು, ಎರಡೂವರೆ ವರ್ಷಗಳ ಹಿಂದಿನ ಚಿಂತೆಯಲ್ಲಿ ಆಯೋಜಕರು ಹಾಗೂ ಅಭಿಮಾನಿಗಳು ಇದ್ದಾರೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಹೀಗಾಗಿ ಅಭಿಮಾನಿಗಳು ಈ ಪಂದ್ಯದ ಮೇಲೆ ವರುಣನ ಅವಕೃಪೆ ಇಲ್ಲದಿರಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾರೆ.
ಭಾನುವಾರವೂ ತುಂತುರು ಮಳೆಯಾಗಲಿದೆ
ಗುವಾಹಟಿಯಲ್ಲಿ ಭಾನುವಾರ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಷ್ಟೇ ಅಲ್ಲ, ಸಂಜೆ ವೇಳೆಗೆ ಬಿರುಗಾಳಿ ಸಹಿತ ಕೆಲವೆಡೆ ಮಳೆಯಾಗುವ ಆತಂಕವೂ ಇದೆ. ಅದೇ ಸಮಯದಲ್ಲಿ, ಹವಾಮಾನ ಮಾಹಿತಿ ವೆಬ್‌ಸೈಟ್ ಅಕ್ಯುವೆದರ್ ಮುನ್ಸೂಚನೆಯಂತೆ ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗಬಹುದು, ಉಳಿದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿಯಾಗಿದೆ.
ಸಂಪೂರ್ಣ ಸಿದ್ಧತೆ ಮಾಡಿಕೊಂಡಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ
ಈ ಪಂದ್ಯ ಸಂಜೆ 7 ಗಂಟೆಯಿಂದ ಆರಂಭವಾಗಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸುತ್ತಮುತ್ತ ಮಳೆ ಸುರಿದರೆ ಪಂದ್ಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಆದರೂ ಮಳೆಯಿಂದ ಸಮಯ ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ US ನಿಂದ ಎರಡು ಹಗುರವಾದ ಪಿಚ್ ಕವರ್‌ಗಳನ್ನು ಖರೀದಿಸಿದೆ. ಯೂನಿಯನ್ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಯಾರಿ ಬಗ್ಗೆ ಮಾತನಾಡಿದ್ದು, “ಈ ಎರಡು ಆಮದು ಮಾಡಿದ ಕವರ್‌ಗಳು ಪಿಚ್‌ಗೆ ನೀರು ಅಥವಾ ತೇವಾಂಶವನ್ನು ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ ಎಂದಿದ್ದಾರೆ.
Published On - 10:16 pm, Sat, 1 October 22