IND vs SL: ಟಿ-20 ಯಲ್ಲಿ ಲಂಕಾ ವಿರುದ್ಧ ಭಾರತದ್ದೆ ಮೇಲುಗೈ; ಇಂದಿನ ಪಂದ್ಯದಲ್ಲಿ ಧವನ್ ಹುಡುಗರು ಕಮಾಲ್ ಮಾಡ್ತಾರ?
IND vs SL: ಭಾರತ ಮತ್ತು ಶ್ರೀಲಂಕಾ ನಡುವೆ ಈವರೆಗೆ 19 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಪೈಕಿ ಭಾರತ ತಂಡವು 13 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ತಂಡವು ಕೇವಲ ಐದು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ 20 ಸರಣಿ ಭಾನುವಾರ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಶಿಖರ್ ಧವನ್ ನೇತೃತ್ವದ ಭಾರತ ತಂಡ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ. ಯುವಕರಿಂದ ತುಂಬಿರುವ ಟೀಮ್ ಇಂಡಿಯಾ ಕೂಡ ಟಿ 20 ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಲು ಬಯಸುತ್ತಿದೆ. ಟಿ 20 ವಿಶ್ವಕಪ್‌ಗೆ ಮೊದಲು ಭಾರತಕ್ಕೆ ಇದು ಕೊನೆಯ ಟಿ 20 ಸರಣಿಯಾಗಲಿದೆ. ಆದ್ದರಿಂದ, ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ತಂಡದಲ್ಲಿ ಆಯ್ಕೆಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸುಕೊಳ್ಳುವುದು ಎಲ್ಲಾ ಆಟಗಾರರ ಪ್ರಯತ್ನವಾಗಿದೆ. ತ್ವರಿತ ಕ್ರಿಕೆಟ್‌ನ ಈ ಸ್ವರೂಪದಲ್ಲಿ ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾದಲ್ಲಿ ಪ್ರಾಬಲ್ಯ ಸಾಧಿಸಿದೆ. ಅದಕ್ಕೆ ಅಂಕಿಅಂಶಗಳು ಸಾಕ್ಷಿಯಾಗಿದೆ.
ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಭಾರತ ತಂಡ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಮಳೆಯಿಂದಾಗಿ ಪಂದ್ಯವನ್ನು ಕೇವಲ 47 ಓವರ್‌ಗಳಿಗೆ ಇಳಿಸಲಾಯಿತು. ಈಗ ಎಲ್ಲರ ಕಣ್ಣುಗಳು ಟಿ 20 ಸರಣಿಯ ಅನೇಕ ಆಟಗಾರರ ಪ್ರದರ್ಶನದ ಮೇಲೆ ಇರುತ್ತದೆ.
ಯಾರು ಮೇಲುಗೈ ಸಾಧಿಸಿದ್ದಾರೆ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಶ್ರೀಲಂಕಾದಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಈವರೆಗೆ 19 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಪೈಕಿ ಭಾರತ ತಂಡವು 13 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ತಂಡವು ಕೇವಲ ಐದು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟಿ 20 ಇತಿಹಾಸದಲ್ಲಿ ಶ್ರೀಲಂಕಾ ಇದುವರೆಗೆ ಭಾರತ ವಿರುದ್ಧದ ಒಂದು ಸರಣಿಯನ್ನು ಗೆದ್ದಿಲ್ಲ.
ಭಾರತ ವಿರುದ್ಧದ ಟಿ 20 ಸರಣಿಯನ್ನು ಶ್ರೀಲಂಕಾ ಗೆಲ್ಲಲು ಸಾಧ್ಯವಾಗಲಿಲ್ಲ ಈವರೆಗೆ ಉಭಯ ತಂಡಗಳ ನಡುವೆ ನಾಲ್ಕು ಟಿ 20 ಸರಣಿಗಳನ್ನು ಆಡಲಾಗಿದೆ. ಈ ಪೈಕಿ ಮೂರು ಸರಣಿಗಳನ್ನು ಭಾರತ ತಂಡ ವಶಪಡಿಸಿಕೊಂಡಿದ್ದು, ಒಂದು ಸರಣಿಯು ಡ್ರಾದಲ್ಲಿ ಕೊನೆಗೊಂಡಿದೆ. ಈ ರೀತಿಯಾಗಿ, ಟಿ 20 ಸರಣಿಯಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಕೈ ಖಾಲಿಯಾಗಿದೆ.
ಶಿಖರ್ ಧವನ್ ಈ ಸರಣಿಯಿಂದ ಟಿ 20 ಯಲ್ಲಿ ನಾಯಕತ್ವಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕೆ ನಾಯಕತ್ವ ವಹಿಸಿದ ಅತ್ಯಂತ ಹಳೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಧವನ್ 35 ವರ್ಷ 232 ದಿನಗಳಲ್ಲಿ ಭಾರತೀಯ ತಂಡದ ಉಸ್ತುವಾರಿ ವಹಿಸಲಿದ್ದಾರೆ. ಇಂದಿನ ಪಂದ್ಯದ ವೇಳೆ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಕ್ಯೂವೆದರ್ ಡಾಟ್ ಕಾಮ್ ಪ್ರಕಾರ, ಕೊಲಂಬೊದಲ್ಲಿ ಮೋಡ ಕವಿದ ವಾತಾವರಣ ಇರಲಿದೆ.