AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಹ್ಯಾಟ್ರಿಕ್ ನೋಬಾಲ್, ಒಂದೇ ಎಸೆತದಲ್ಲಿ 14 ರನ್! ಬೇಡದ ವಿಶ್ವ ದಾಖಲೆ ಬರೆದ ಅರ್ಷದೀಪ್ ಸಿಂಗ್

Arshdeep Singh no ball: ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕೇವಲ 22 ಪಂದ್ಯಗಳ ತನ್ನ ಕಿರು ವೃತ್ತಿಜೀವನದಲ್ಲಿ, ಅರ್ಷದೀಪ್ ನೋ-ಬಾಲ್ ವಿಷಯದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ವೇಗಿ ಈವರೆಗೆ 12 ನೋಬಾಲ್ ಎಸೆದಿದ್ದು ವಿಶ್ವ ದಾಖಲೆಯಾಗಿದೆ.

IND vs SL: ಹ್ಯಾಟ್ರಿಕ್ ನೋಬಾಲ್, ಒಂದೇ ಎಸೆತದಲ್ಲಿ 14 ರನ್! ಬೇಡದ ವಿಶ್ವ ದಾಖಲೆ ಬರೆದ ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್Image Credit source: insidesport
TV9 Web
| Updated By: ಪೃಥ್ವಿಶಂಕರ|

Updated on:Jan 06, 2023 | 10:29 AM

Share

ಪುಣೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (India Vs Sri Lanka) ಮರಳಿದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh), ಪಂದ್ಯದಲ್ಲಿ ತಮ್ಮ ಮೊದಲ ಓವರ್​ನಲ್ಲೇ ಹ್ಯಾಟ್ರಿಕ್ ಬಾರಿಸಿ ದಾಖಲೆ ಬರೆದಿದ್ದಾರೆ. ಆದರೆ ಇದರಲ್ಲಿ ಒಂದು ವ್ಯತ್ಯಾಸವೆಂದರೆ ಈ ಹ್ಯಾಟ್ರಿಕ್ ಬಂದಿದ್ದು ವಿಕೆಟ್‌ಗಳಿಂದಲ್ಲ, ಬದಲಿಗೆ ನೋ-ಬಾಲ್‌ಗಳಿಂದ. ಅದೇನೆಂದರೆ, ತನ್ನ ರನ್-ಅಪ್‌ನಲ್ಲಿ ಸತತ ಮೂರು ಬಾರಿ ಎಡವಿದ ಅರ್ಷದೀಪ್ ಹ್ಯಾಟ್ರಿಕ್ ನೋಬಾಲ್ ಎಸೆದಿದ್ದಲ್ಲದೆ ಹೊಸ ವರ್ಷವನ್ನು ಅತ್ಯಂತ ಕಳಪೆ ರೀತಿಯಲ್ಲಿ ಆರಂಭಿಸಿದ್ದಾರೆ.

ಜನವರಿ 5, ಗುರುವಾರದಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲ ಓವರ್ ಬೌಲಿಂಗ್ ಜವಬ್ದಾರಿ ಹೊತ್ತ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ಮೊದಲ ಓವರ್‌ನಲ್ಲಿ ಕೇವಲ 2 ರನ್ ನೀಡಿದರು. ಬಳಿಕ ಎರಡನೇ ಓವರ್ ಎಸೆಯುವ ಜವಬ್ದಾರಿಯನ್ನು ಹೊತ್ತ ಅರ್ಷದೀಪ್ ಸಿಂಗ್ ಇದೇ ಓವರ್​ನಲ್ಲಿ ಬೇಡದ ವಿಶ್ವ ದಾಖಲೆ ಬರೆದರು. ಅನಾರೋಗ್ಯದ ಕಾರಣ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗದ ಅರ್ಷದೀಪ್, ಒಂದು ತಿಂಗಳಿಗಿಂತ ಹೆಚ್ಚು ಸಮಯದ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದರು. ಆದರೆ ತಮ್ಮ ಮೊದಲ ಓವರ್​ನಲ್ಲಿಯೇ ಟೀಂ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್ ನೀಡಿದ ಅರ್ಷದೀಪ್ ಭಾರತದ ಪಾಲಿಗೆ ವಿಲನ್ ಆದರು.

Team India in 2023: 2023 ರಲ್ಲಿ ಟೀಂ ಇಂಡಿಯಾ ಫುಲ್ ಬ್ಯುಸಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಸತತ 3 ನೋಬಾಲ್‌ಗಳು

ಓವರ್‌ನ ಮೊದಲ ಐದು ಎಸೆತಗಳಲ್ಲಿ ಕೇವಲ 5 ರನ್ ನೀಡಿದ್ದ ಅರ್ಷದೀಪ್ ಓವರ್ ಅನ್ನು ಉತ್ತಮವಾಗಿ ಅಂತ್ಯಗೊಳಿಸುವಂತೆ ಕಾಣುತ್ತಿದ್ದರು. ಆದರೆ ಕೊನೆಯ ಎಸೆತದಲ್ಲಿ ಲಯ ಕಳೆದುಕೊಂಡ ಅರ್ಷದೀಪ್ ಸತತ 3 ನೋಬಾಲ್‌ಗಳನ್ನು ಎಸೆದರು. ಅದರ ಲಾಭವನ್ನು ಪಡೆದ ಕುಸಾಲ್ ಮೆಂಡಿಸ್ ಫ್ರೀಹಿಟ್‌ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು.

ಕೆಟ್ಟ ದಾಖಲೆ

ಒಟ್ಟಾರೆಯಾಗಿ, ಶ್ರೀಲಂಕಾ ಈ ಓವರ್‌ನಿಂದ 19 ರನ್‌ಗಳನ್ನು ಲೂಟಿ ಮಾಡಿತು, ಅದರಲ್ಲಿ ಒಂದು ಎಸೆತದಲ್ಲಿ 14 ರನ್ ಬಂದವು. ಆದರೆ, ಅರ್ಷದೀಪ್ ನೋ ಬಾಲ್ ಮಾಡಿದ್ದು ಇದೇ ಮೊದಲಲ್ಲ. ಅರ್ಷದೀಪ್ ತನ್ನ ಕಡಿಮೆ ವೃತ್ತಿಜೀವನದಲ್ಲಿ ಈ ವಿಷಯದಲ್ಲಿ ಬೇಡದ ದಾಖಲೆಯನ್ನು ನಿರ್ಮಿಸಿದ್ದಾರೆ. ಆಗಾಗ್ಗೆ ನೋ ಬಾಲ್‌ಗಳನ್ನು ಬೌಲ್ ಮಾಡುವ ಚಾಳಿಯನ್ನು ರೂಡಿ ಮಾಡಿಕೊಂಡಿರುವ ಅರ್ಷದೀಪ್, ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಹಾಂಕಾಂಗ್ ವಿರುದ್ಧ ಒಂದೇ ಓವರ್‌ನಲ್ಲಿ ಎರಡು ನೋಬಾಲ್‌ಗಳನ್ನು ಎಸೆದಿದ್ದರು.

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕೇವಲ 22 ಪಂದ್ಯಗಳ ತನ್ನ ಕಿರು ವೃತ್ತಿಜೀವನದಲ್ಲಿ, ಅರ್ಷದೀಪ್ ನೋ-ಬಾಲ್ ವಿಷಯದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ವೇಗಿ ಈವರೆಗೆ 12 ನೋಬಾಲ್ ಎಸೆದಿದ್ದು ವಿಶ್ವ ದಾಖಲೆಯಾಗಿದೆ.

ಭಾರತದ ಕಳಪೆ ಬೌಲಿಂಗ್

ಅರ್ಷದೀಪ್ ನಂತರ, ಶಿವಂ ಮಾವಿ ಕೂಡ ತಮ್ಮ ಮೊದಲ ಓವರ್‌ನಲ್ಲಿ ನೋ ಬಾಲ್ ಬೌಲ್ ಮಾಡಿದರು. ಅಂದರೆ, ಒಟ್ಟಾರೆ ಮೊದಲ 4 ಓವರ್‌ಗಳಲ್ಲಿ ಭಾರತದ ಬೌಲರ್‌ಗಳು 4 ನೋಬಾಲ್‌ಗಳನ್ನು ನೀಡಿದರು. ಇದರ ಲಾಭ ಪಡೆದ ಶ್ರೀಲಂಕಾ ಭರ್ಜರಿ ಆರಂಭ ಪಡೆಯಿತು. ಮೆಂಡಿಸ್ ಮತ್ತು ಪಾಥುಮ್ ನಿಸ್ಸಾಂಕ ಮೊದಲ ವಿಕೆಟ್‌ಗೆ ಕೇವಲ 54 ಎಸೆತಗಳಲ್ಲಿ 80 ರನ್‌ಗಳ ತ್ವರಿತ ಜೊತೆಯಾಟ ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:25 am, Fri, 6 January 23

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ