‘ಪಿಎಸ್ಎಲ್ ವೇಳಾಪಟ್ಟಿನೂ ನೀವೇ ರಿಲೀಸ್ ಮಾಡಿ’; ಜಯ್ ಶಾಗೆ ಪಾಕ್ ಮಂಡಳಿಯ ವ್ಯಂಗ್ಯ ಬೇಡಿಕೆ
ಈ ಬಾರಿಯ ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಒಟ್ಟು 6 ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಈ ಬಾರಿಯ ಪಂದ್ಯಾವಳಿ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ತವರಿನಲ್ಲೇ ಸತತ ಸೋಲುಗಳ ಮುಖಭಂಗ ಅನುಭವಿಸುತ್ತಿರುವ ಪಾಕ್ ಕ್ರಿಕೆಟ್ ತಂಡ (Pakistan vs England) ಹಾಗೂ ಮಂಡಳಿಯಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇದರ ಅಂಗವಾಗಿ ಮೊದಲು ಪಿಸಿಬಿ ಅಧ್ಯಕ್ಷರ ತಲೆದಂಡವಾಗಿತ್ತು. ಈ ಹಿಂದೆ ಮಂಡಳಿಯ ಅಧ್ಯಕ್ಷರಾಗಿದ್ದ ರಮೀಜ್ ರಾಜಾ (Ramiz Raja) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿ, ನಜಮ್ ಸೇಥಿ (Najam Sethi ) ಅವರಿಗೆ ಈ ಪಟ್ಟಕಟ್ಟಿತ್ತು. ಈಗ ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೇರಿರುವ ನಜಮ್ ಸೇಥಿ ಕೂಡ ಹಿಂದಿನ ಅಧ್ಯಕ್ಷರಂತೆ ಬಿಸಿಸಿಐಯನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಮುಂದುರೆಸಿದ್ದಾರೆ. ವಾಸ್ತವವಾಗಿ ನಿನ್ನೆ ಅಂದರೆ ಜ.5 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ (Jay Shah) ಎಸಿಸಿಯ 2023/24 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಆ ಬಳಿಕ ಟ್ವೀಟ್ ಮಾಡಿರುವ ಪಾಕ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಈ ಟ್ವೀಟ್ನಲ್ಲಿ ಇದು ಏಕಪಕ್ಷೀಯ ನಿರ್ಧಾರ ಎಂದು ಜಯ್ ಶಾರನ್ನು ದೂರಿದ್ದಾರೆ.
ಎಸಿಸಿ ನಿನ್ನೆ ಬಿಡುಗಡೆ ಮಾಡಿರವ 2 ವರ್ಷಗಳ ಕ್ರೀಡಾ ಕ್ಯಾಲೆಂಡರ್ನಲ್ಲಿ ಪುರುಷರ ಏಷ್ಯಾಕಪ್ ಸೇರಿದಂತೆ ಅಂಡರ್ 19 ಚಾಲೆಂಜರ್ ಕಪ್, ಅಂಡರ್ 19 ಪ್ರೀಮಿಯರ್ ಕಪ್ ಮತ್ತು ಅಂಡರ್ 19 ಏಷ್ಯಾಕಪ್ ನಂತಹ ಪ್ರಮುಖ ಪಂದ್ಯಾವಳಿಗಳ ವೇಳಾಪಟ್ಟಿಯ ಬಗ್ಗೆ ವಿವರ ನೀಡಲಾಗಿದೆ. ಆದರೆ ಎಸಿಸಿ ಅಧ್ಯಕ್ಷರಾದ ಜಯ್ ಶಾ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಈ ಕ್ರೀಡಾ ಕ್ಯಾಲೆಂಟರ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ನಜಮ್ ಸೇಥಿ ಆರೋಪಿಸಿದ್ದಾರೆ.
IND vs SL: ‘ಮಹಾಪರಾಧ, ಮಾಡಬಾರದ ತಪ್ಪು ಮಾಡಿದ್ದೇವೆ’! ಸೋಲಿನ ಬಳಿಕ ಸಿಟ್ಟಾದ ಹಾರ್ದಿಕ್ ಪಾಂಡ್ಯ
ನಜಮ್ ಸೇಥಿ ಟ್ವೀಟ್
ಈ ಬಗ್ಗೆ ಟ್ವೀಟ್ ಮಾಡಿರುವ ನಜಮ್ ಸೇಥಿ, ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಏಕಪಕ್ಷೀಯ ಕ್ಯಾಲೆಂಡರ್ ಮತ್ತು ರಚನೆಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಜೈ ಶಾ ಅವರಿಗೆ ಧನ್ಯವಾದಗಳು. ಪಾಕಿಸ್ತಾನ ಆಯೋಜನೆಯ ಹಕ್ಕನ್ನು ಪಡೆದಿರುವ 2023ರ ಏಷ್ಯಾಕಪ್ ಕ್ಯಾಲೆಂಡರ್ ಅನ್ನು ಸಹ ನೀವೇ ಬಿಡುಗಡೆ ಮಾಡಿದ್ದೀರಿ. ಹೀಗಾಗಿ ಇಷ್ಟೇ ಮಾಡಿರುವ ನೀವು ಇದರೊಂದಿಗೆ 2023ರಲ್ಲಿ ನಡೆಯುವ ಪಿಎಸ್ಎಲ್ ಕ್ಯಾಲೆಂಡರ್ ಅನ್ನು ಕೂಡ ನೀವೇ ಬಿಡುಗಡೆ ಮಾಡಿ’ ಎಂದು ಜಯ್ ಶಾ ವಿರುದ್ಧ ಕಿಡಿಕಾರಿದ್ದಾರೆ.
Thank you @JayShah for unilaterally presenting @ACCMedia1 structure & calendars 2023-24 especially relating to Asia Cup 2023 for which ?? is the event host. While you are at it, you might as well present structure & calendar of our PSL 2023! A swift response will be appreciated. https://t.co/UdW2GekAfR
— Najam Sethi (@najamsethi) January 5, 2023
ಈ ಬಾರಿಯ ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಒಟ್ಟು 6 ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಈ ಬಾರಿಯ ಪಂದ್ಯಾವಳಿ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಸಿಸಿ ಸಿದ್ಧಪಡಿಸಿರುವ ಸ್ವರೂಪದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಗ್ರೂಪ್ 1ರಲ್ಲಿ ಭಾರತ-ಪಾಕಿಸ್ತಾನ
ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ 1ರಲ್ಲಿ ಸ್ಥಾನ ಪಡೆದಿದ್ದರೆ, ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಈ ಎರಡು ತಂಡಗಳೊಂದಿಗೆ ಮೊದಲನೇ ಗುಂಪಿನಲ್ಲಿ ಸ್ಥಾನ ಪಡೆಯಲ್ಲಿದೆ. ಇನ್ನು ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಲೀಗ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು ನಂತರ, ಸೂಪರ್-4 ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಇದರರ್ಥ ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡದ ಪೈಕಿ, ಒಂದು ತಂಡದ ಪ್ರಯಾಣವು ಗುಂಪು ಹಂತದಲ್ಲಿಯೇ ಕೊನೆಗೊಳ್ಳಲಿದೆ. ಸೂಪರ್ 4 ಸುತ್ತಿನಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಆ ಬಳಿಕ ಫೈನಲ್ ಆಡುವ ಎರಡು ತಂಡಗಳನ್ನು ನಿರ್ಧರಿಸಲಾಗುತ್ತದೆ. ಅಂದರೆ ಏಷ್ಯಾಕಪ್ನಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Fri, 6 January 23