Rishabh Pant Health: ಪಂತ್‌ಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ! ಕ್ರಿಕೆಟ್ನಿಂದ ಬರೋಬ್ಬರಿ 9 ತಿಂಗಳು ದೂರ?
Rishabh Pant Health: ಸದ್ಯಕ್ಕೆ ರಿಷಬ್ ಅವರ ಮೊಣಕಾಲು ಮತ್ತು ಕಣಕಾಲುಗಳೆರಡಕ್ಕೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಈ ಕಾರಣದಿಂದಾಗಿ, ಅವರು ಸುಮಾರು 9 ತಿಂಗಳ ಕಾಲ ಹೊರಗೆ ಇರುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.
ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್ನ ಮ್ಯಾಕ್ಸ್ (Max Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಪಂತ್ (Rishabh Pant) ಅವರನ್ನು ನಿನ್ನೆ, ಅಂದರೆ ಜ.4ರಂದು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ಶುಕ್ರವಾರ ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ರಿಷಬ್ ಪಂತ್, ಅಂದಿನಿಂದ ಡೆಹ್ರಾಡೂನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರನ್ನು ಮುಂಬೈಗೆ ಶಿಫ್ಟ್ ಮಾಡಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಪಂತ್ ಅವರನ್ನು ಮಂಡಿ ಆಪರೇಷನ್ಗಾಗಿ ಲಂಡನ್‌ಗೆ (London) ಕಳುಹಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಪಂತ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 9 ತಿಂಗಳು ಬೇಕಾಗಬಹುದು ಎಂದು ವರದಿಯಾಗಿದೆ.
ರಸ್ತೆ ಅಪಘಾತದಲ್ಲಿ ಪಂತ್ ದೇಹದಲ್ಲಿ ಅನೇಕ ಗಾಯಗಳಿದ್ದವು. ಆದರೆ ಯಾವ ಇಂಜುರಿಯೂ ಅವರ ಜೀವಕ್ಕೆ ಅಥವಾ ಅವರ ವೃತ್ತಿಜೀವನಕ್ಕೆ ಅಪಾಯವನ್ನುಂಟುಮಾಡುವಷ್ಟು ಗಂಭೀರವಾಗಿರಲಿಲ್ಲ. ಆದರೆ ಪಂತ್‌ಗೆ ಅತ್ಯಂತ ಅಪಾಯಕಾರಿ ಗಾಯವೆಂದರೆ ಅದು ಮೊಣಕಾಲು ಇಂಜುರಿ. ಹೀಗಾಗಿ ಆ ಗಾಯದ ಮಟ್ಟವನ್ನು ಪರೀಕ್ಷಿಸಲು, ಬಿಸಿಸಿಐ ಅವರನ್ನು ವಿಶೇಷ ಏರ್ ಆಂಬ್ಯುಲೆನ್ಸ್ ಮೂಲಕ ಜನವರಿ 4 ರ ಬುಧವಾರ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಪಂತ್‌ಗೆ ಚಿಕಿತ್ಸೆ! ಡೆಹ್ರಾಡೂನ್ನಿಂದ ಏರ್ ಲಿಫ್ಟ್; ಮಾಹಿತಿ ನೀಡಿದ ಬಿಸಿಸಿಐ
ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ
ಈಗ ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್‌ಗೆ ಇಲ್ಲಿ ಎಂಆರ್‌ಐ ಸ್ಕ್ಯಾನ್‌ಗಳನ್ನು ಮಾಡಲಾಗುವುದು. ಬಳಿಕ ಪಂತ್‌ಗೆ ಆಗಿರುವ ಮೊಣಕಾಲು ಇಂಜುರಿ ತೀವ್ರತೆ ತಿಳಿಯಲಿದೆ. ಆ ಬಳಿಕ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಹೀಗಾಗಿ ಈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಪಂತ್‌ಗೆ ದೀರ್ಘಕಾಲ ಹಿಡಿಯುವುದರಿಂದ ಅವರು ಹಲವು ತಿಂಗಳು ಮೈದಾನಕ್ಕೆ ಮರಳಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಎರಡೂ ಮೊಣಕಾಲುಗಳಿಗೆ ಶಸ್ತ್ರಚಿಕಿತ್ಸೆ
ಎರಡೂ ಮೊಣಕಾಲುಗಳ ಶಸ್ತ್ರಚಿಕಿತ್ಸೆಯಿಂದಾಗಿ ಪಂತ್ 9 ತಿಂಗಳ ಕಾಲ ಕ್ರಿಕೆಟ್ನಿಂದ ಹೊರಗುಳಿಯುವ ನಿರೀಕ್ಷೆಯಿದೆ. ಒಮ್ಮೆ ಊತ ಕಡಿಮೆಯಾದ ನಂತರ, ಡಾ ಪಾರ್ದಿವಾಲಾ ಮತ್ತು ಅವರ ತಂಡವು ಮುಂದಿನ ಚಿಕಿತ್ಸೆಯ ಕೋರ್ಸ್ ಅನ್ನು ನಿರ್ಧರಿಸುತ್ತದೆ. ಸದ್ಯಕ್ಕೆ ರಿಷಬ್ ಅವರ ಮೊಣಕಾಲು ಮತ್ತು ಕಣಕಾಲುಗಳೆರಡಕ್ಕೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಈ ಕಾರಣದಿಂದಾಗಿ, ಅವರು ಸುಮಾರು 9 ತಿಂಗಳ ಕಾಲ ಹೊರಗೆ ಇರುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.
ವಿಶ್ವಕಪ್ ಆಡ್ತಾರಾ ಪಂತ್?
ಈ ಕಾರಣದಿಂದಾಗಿ ಪಂತ್, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಹೊರತುಪಡಿಸಿ, ಐಪಿಎಲ್ನಿಂದಲೂ ಹೊರಗುಳಿಯಲಿದ್ದಾರೆ. ಆದಾಗ್ಯೂ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆಗೆ ಪಂತ್ ಚೇತರಿಸಿಕೊಳ್ಳಲ್ಲಿ ಎಂದು ಭಾರತ ತಂಡ ಆಶಿಸುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Thu, 5 January 23