- Kannada News Photo gallery Cricket photos IND vs SL Sanju Samson ruled out of T20I series against Sri Lanka Jitesh Sharma called up
IND vs SL: ಸಂಜು ಬದಲು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿರುವ ಜಿತೇಶ್ ಶರ್ಮಾ ಯಾರು ಗೊತ್ತಾ?
IND vs SL: ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರುವ ಸಂಜು ಸ್ಯಾಮ್ಸನ್ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Updated on:Jan 05, 2023 | 10:56 AM

ಹೊಸ ವರ್ಷದಲ್ಲಿ, ಹೊಸ ಭರವಸೆಯೊಂದಿಗೆ ಹೊಸ ಯುಗಕ್ಕೆ ಕಾಲಿಡಲು ಪ್ರಯತ್ನಿಸುತ್ತಿರುವ ಭಾರತದ ಟಿ20 ಕ್ರಿಕೆಟ್ ತಂಡವು ಈಗ ಹೊಸ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಿದೆ. ಇದರ ಫಲವಾಗಿ ದೇಶೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಟೀಂ ಇಂಡಿಯಾದ ಕದ ತೆರೆಯುತ್ತಿದೆ. ಹೀಗೆ ದೇಶಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಜಿತೇಶ್ ಶರ್ಮಾ ಕೂಡ ಸೇರಿದ್ದಾರೆ. ಇದೀಗ ಗಾಯಗೊಂಡಿರುವ ಸಂಜ ಬದಲು ಜಿತೇಶ್ ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರುವ ಸಂಜು ಸ್ಯಾಮ್ಸನ್ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿರುವ ಪ್ರಕಾರ, ಇಂಜುರಿಗೊಂಡಿರುವ ಸ್ಯಾಮ್ಸನ್ ಮುಂಬೈನಲ್ಲಿಯೇ ಉಳಿದುಕೊಂಡಿದ್ದು, ಅಲ್ಲಿ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗುತ್ತದೆ. ಹೀಗಾಗಿ ಅವರ ಬದಲಿಗೆ ಜಿತೇಶ್ ತಂಡವನ್ನು ಸೇರಿಕೊಳ್ಳುತ್ತಾರೆ ಎಂದಿದೆ.

ದೇಶೀಯ ಕ್ರಿಕೆಟ್‌ನಲ್ಲಿ, ವಿದರ್ಭದ ವಿಕೆಟ್‌ಕೀಪರ್ ಜಿತೇಶ್ ಪ್ರಸ್ತುತ ಮುಂದಿನ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್‌ಗೆ ಬ್ಯಾಕ್ಅಪ್ ಆಟಗಾರನಾಗಲಿದ್ದಾರೆ. ಆದರೆ ಜಿತೇಶ್ಗೆ ಈ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಇವೆ. ಏಕೆಂದರೆ ಈಗಾಗಲೇ ತಂಡದಲ್ಲಿ ರಾಹುಲ್ ತ್ರಿಪಾಠಿ ಇದ್ದು, ಅವರಿಗೆ ಅವಕಾಶ ಸಿಗುವುದು ಖಚಿತವಾಗಿದೆ.

ಜಿತೇಶ್ ಶರ್ಮಾ ಕಳೆದ ಐಪಿಎಲ್ ಸೀಸನ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಪಂಜಾಬ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ ಜಿತೇಶ್ ಆರಂಭಿಕ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದರು.ಇಡೀ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿದ್ದ ಜಿತೇಶ್ 163ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಗಳಿಸಿದದ್ದರು.

ಮೆಗಾ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ಪಂಜಾಬ್ ಸೇರಿದ್ದ ಜಿತೇಶ್ ಅವರ ಒಟ್ಟಾರೆ ಟಿ20 ದಾಖಲೆಯೂ ಅದ್ಭುತವಾಗಿದೆ. ಈ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 71 ಟಿ20 ಇನ್ನಿಂಗ್ಸ್‌ಗಳಲ್ಲಿ 148 ಸ್ಟ್ರೈಕ್ ರೇಟ್‌ನಲ್ಲಿ 1787 ರನ್ ಗಳಿಸಿದ್ದಾರೆ. ಇದರೊಂದಿಗೆ 54 ಕ್ಯಾಚ್‌ಗಳು ಮತ್ತು 12 ಸ್ಟಂಪಿಂಗ್‌ಗಳನ್ನು ಸಹ ಮಾಡಿದ್ದಾರೆ.
Published On - 10:56 am, Thu, 5 January 23




