AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಅತ್ಯಂತ ಹೀನಾಯ ಸೋಲುಂಡ ಶ್ರೀಲಂಕಾ: ಆದರೂ 2017 ರ ದಾಖಲೆ ಮುರಿಯಲಾಗಲಿಲ್ಲ..!

IND vs SL: ಶ್ರೀಲಂಕಾ ತಂಡವನ್ನು ಬೃಹತ್ ಅಂತರದಿಂದ ಟೆಸ್ಟ್​ನಲ್ಲಿ ಸೋಲಿಸಿದ ಹಿರಿಮೆ ಭಾರತ ತಂಡಕ್ಕೆ ಸಲ್ಲುತ್ತದೆ. ಆದರೆ ಅದು ಈ ಬಾರಿಯಲ್ಲ. ಬದಲಾಗಿ 2017 ರಲ್ಲಿ ಟೀಮ್ ಇಂಡಿಯಾ ನಾಗ್ಪುರ್​ ಟೆಸ್ಟ್​ನಲ್ಲಿ ಶ್ರೀಲಂಕಾ ವಿರುದ್ದ ಭರ್ಜರಿ ಜಯ ಸಾಧಿಸಿತ್ತು.

IND vs SL: ಅತ್ಯಂತ ಹೀನಾಯ ಸೋಲುಂಡ ಶ್ರೀಲಂಕಾ: ಆದರೂ 2017 ರ ದಾಖಲೆ ಮುರಿಯಲಾಗಲಿಲ್ಲ..!
IND vs SL
TV9 Web
| Edited By: |

Updated on: Mar 06, 2022 | 6:24 PM

Share

ಭಾರತದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಅತ್ಯಂತ ಹೀನಾಯವಾಗಿ ಸೋತಿದೆ. ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ ನೀಡಿದ 574 ರನ್​ಗಳ ಟಾರ್ಗೆಟ್​ ಅನ್ನು ಬೆನ್ನತ್ತಿದ ಶ್ರೀಲಂಕಾ ಮೊದಲ ಇನಿಂಗ್ಸ್​ನಲ್ಲಿ ಕೇವಲ 174 ರನ್​ಗಳಿಗೆ ಸರ್ವಪತನ ಕಂಡಿತು. ಇತ್ತ ಫಾಲೋಆನ್​ ಪಡೆದ ಲಂಕಾ ಮತ್ತೆ 2ನೇ ಇನಿಂಗ್ಸ್ ಆರಂಭಿಸಿತು. ಈ ಬಾರಿ ಕೂಡ ಟೀಮ್ ಇಂಡಿಯಾ ಬೌಲರುಗಳ ಮುಂದೆ ಲಂಕಾ ಬ್ಯಾಟ್ಸ್​ಮನ್​ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಪರಿಣಾಮ ಮತ್ತೊಮ್ಮೆ 178 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 222 ರನ್​ಗಳ ಭರ್ಜರಿ ಜಯ ಸಾಧಿಸಿತು. ಆದರೆ ಇದು ಶ್ರೀಲಂಕಾ ತಂಡದ 2ನೇ ಅತ್ಯಂತ ಹೀನಾಯ ಸೋಲಾಗಿದೆ.

ಇತ್ತ ಶ್ರೀಲಂಕಾ ತಂಡವನ್ನು ಬೃಹತ್ ಅಂತರದಿಂದ ಟೆಸ್ಟ್​ನಲ್ಲಿ ಸೋಲಿಸಿದ ಹಿರಿಮೆ ಭಾರತ ತಂಡಕ್ಕೆ ಸಲ್ಲುತ್ತದೆ. ಆದರೆ ಅದು ಈ ಬಾರಿಯಲ್ಲ. ಬದಲಾಗಿ 2017 ರಲ್ಲಿ ಟೀಮ್ ಇಂಡಿಯಾ ನಾಗ್ಪುರ್​ ಟೆಸ್ಟ್​ನಲ್ಲಿ ಶ್ರೀಲಂಕಾ ವಿರುದ್ದ ಭರ್ಜರಿ ಜಯ ಸಾಧಿಸಿತ್ತು. ಅಂದು ನಾಯಕ ವಿರಾಟ್ ಕೊಹ್ಲಿ 213 ರನ್​ ಬಾರಿಸುವ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 610 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಈ ಬೃಹತ್ ಟಾರ್ಗೆಟ್​ ಬೆನ್ನತ್ತಿದ ಶ್ರೀಲಂಕಾ ಮೊದಲ ಇನಿಂಗ್ಸ್​ನಲ್ಲಿ 205 ಹಾಗೂ ಎರಡನೇ ಇನಿಂಗ್ಸ್​ನಲ್ಲಿ ಕೇವಲ 166 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 239 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಬೃಹತ್ ಅಂತರದ ಟೀಮ್ ಇಂಡಿಯಾದ ಗೆಲುವು ಶ್ರೀಲಂಕಾ ತಂಡದ ಅತ್ಯಂತ ಹೀನಾಯ ಸೋಲಾಗಿದೆ. ಈ ಸೋಲನ್ನು ಮೀರಿಸುವ ಅವಕಾಶ ಈ ಬಾರಿ ಹೊಂದಿದ್ದರೂ, 17 ರನ್​ಗಳನ್ನು ಹೆಚ್ಚುಗಳಿಸುವ ಮೂಲಕ ಶ್ರೀಲಂಕಾ 2017 ರ ಹೀನಾಯ ಸೋಲಿನ ದಾಖಲೆಯನ್ನೇ ಕಳಪೆ ದಾಖಲೆಯಾಗಿ ಮುಂದುವರೆಸಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IND vs SL: Biggest inngs defeats for Sri Lanka)

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ