ಟಿ20 ನಂತರ ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲೂ ಅಮೋಘ ಶುಭಾರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ( India and Sri Lanka in Mohali) ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ 3 ದಿನಗಳಲ್ಲಿ ಕೊನೆಗೊಂಡಿತು. ತವರು ನೆಲದಲ್ಲಿ ಬಹುತೇಕ ಅಜೇಯ ಎಂದು ಸಾಬೀತುಪಡಿಸಿದ ಭಾರತ ತಂಡದ ಮುಂದೆ ಶ್ರೀಲಂಕಾ ತಂಡವು ಒಂದೂವರೆ ದಿನವೂ ಉಳಿಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 222 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ರೋಹಿತ್ ಶರ್ಮಾ (Rohit Sharma) ಅವರ ಟೆಸ್ಟ್ ನಾಯಕತ್ವದ ಅವಧಿಯೂ ಅದ್ಧೂರಿಯಾಗಿ ಆರಂಭವಾಗಿದೆ. ಇದರೊಂದಿಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)ಗೆ 100ನೇ ಟೆಸ್ಟ್ ಪಂದ್ಯದ ಗೆಲುವಿನ ಉಡುಗೊರೆಯನ್ನೂ ನೀಡಿದೆ. ಶ್ರೀಲಂಕಾವನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಇನ್ನಿಲ್ಲದಂತೆ ಕಾಡಿದರು.
ಭಾರತದಲ್ಲಿ ಕಳೆದ ಕೆಲವು ಟೆಸ್ಟ್ ಪಂದ್ಯಗಳು ಕೇವಲ 3 ದಿನಗಳಲ್ಲಿ ಕೊನೆಗೊಂಡಿವೆ. ಪಂದ್ಯದ ಮೂರನೇ ದಿನದಂದು, ಭಾರತವು ಶ್ರೀಲಂಕಾವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಆಲ್ಔಟ್ ಮಾಡುವ ಮೂಲಕ ತನ್ನ ಕೆಲಸವನ್ನು ಬೇಗನೆ ಮುಗಿಸಿತು. ಭಾನುವಾರ ಶ್ರೀಲಂಕಾ ಪರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ನೇತೃತ್ವದ ಭಾರತೀಯ ಬೌಲರ್‌ಗಳು 16 ವಿಕೆಟ್‌ಗಳನ್ನು ಪಡೆದುಕೊಂಡರೆ, ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು 250 ರನ್ ಗಳಿಸಲು ಸಹ ಸಾಧ್ಯವಾಗಲಿಲ್ಲ. ಆದಾಗ್ಯೂ, ಎರಡೂ ಇನ್ನಿಂಗ್ಸ್‌ಗಳಲ್ಲಿ, ತಲಾ ಒಬ್ಬ ಬ್ಯಾಟ್ಸ್‌ಮನ್ ಏಕಾಂಗಿಯಾಗಿ ಹೋರಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಾತುಮ್ ನಿಸಂಕ ಅರ್ಧಶತಕ ಗಳಿಸಿದರೆ, ನಿರೋಶನ್ ಡಿಕ್ವೆಲ್ಲಾ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ದಾಟಿದರು.
ಲಂಕಾ ಇನ್ನಿಂಗ್ಸ್
ಮಾರ್ಚ್ 5 ರ ಶನಿವಾರದಂದು, ರವೀಂದ್ರ ಜಡೇಜಾ ತನ್ನ ಬ್ಯಾಟಿಂಗ್ ಮೂಲಕ ಶ್ರೀಲಂಕಾವನ್ನು ಇನ್ನಿಲ್ಲದಂತೆ ಕಾಡಿದರು. ನಂತರ ಭಾನುವಾರ ಅವರು ಮತ್ತೊಮ್ಮೆ ಶ್ರೀಲಂಕಾವನ್ನು ಬಲಿಪಶು ಮಾಡಿದರು. ಆದಾಗ್ಯೂ, ಪಾತುಮ್ ನಿಸಂಕ ಮತ್ತು ಚರಿತ್ ಅಸಲಂಕಾ ದಿನದಾಟವನ್ನು ಉತ್ತಮವಾಗಿ ಪ್ರಾರಂಭಿಸಿದ್ದರಿಂದ ಭಾರತಕ್ಕೆ ಮೊದಲ ಒಂದು ಗಂಟೆ ಯಾವುದೇ ವಿಕೆಟ್ ಪಡೆಯಲು ಅವಕಾಶ ನೀಡಲಿಲ್ಲ. ಇವರಿಬ್ಬರ ನಡುವೆ ಐದನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವಿತ್ತು.
ನಂತರ ಬುಮ್ರಾ ಅಸಲಂಕಾ ಅವರನ್ನು ಎಲ್‌ಬಿಡಬ್ಲ್ಯು ಔಟ್ ಮಾಡಿ ಶ್ರೀಲಂಕಾಕ್ಕೆ ದಿನದ ಮೊದಲ ಹೊಡೆತ ಮತ್ತು ಇನ್ನಿಂಗ್ಸ್‌ನ ಐದನೇ ಹೊಡೆತವನ್ನು ನೀಡಿದರು. ಇಲ್ಲಿಂದ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು. ಇದರ ನಂತರ, ಜಡೇಜಾ ಪ್ರಾಬಲ್ಯ ಸಾಧಿಸಿ ತಮ್ಮ ಹೆಸರಿನಲ್ಲಿ ಉಳಿದ 5 ವಿಕೆಟ್‌ಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಶ್ರೀಲಂಕಾವನ್ನು ಕೇವಲ 174 ರನ್‌ಗಳಿಗೆ ಆಲ್ಔಟ್ ಮಾಡಿದರು. ಜಡೇಜಾ ಕೇವಲ 41 ರನ್‌ಗಳಿಗೆ 5 ವಿಕೆಟ್ ಪಡೆದರು. ಶ್ರೀಲಂಕಾ ಪರ ಪಾತುಮ್ ನಿಸಂಕ ಮಾತ್ರ ಧೈರ್ಯ ತೋರಿ ಉತ್ತಮ ಅರ್ಧಶತಕ ಗಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ತಂಡ ಶ್ರೀಲಂಕಾಕ್ಕೆ ಫಾಲೋ-ಆನ್ ನೀಡಿತು. ನಂತರ ಮುಂದಿನ ಎರಡು ಸೆಷನ್ಗಳಲ್ಲಿ ಎರಡನೇ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸಿತು. ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲಿ ಲಹಿರು ತಿರಿಮನ್ನೆ ಮತ್ತು ಪಾತುಮ್ ನಿಸಂಕಾ ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆದರು. ನಂತರ ಜಡೇಜಾ ಮಧ್ಯಮ ಕ್ರಮಾಂಕವನ್ನು ಬಲಿಪಶು ಮಾಡಿದರು. ಶ್ರೀಲಂಕಾ ಪರ ಏಂಜೆಲೊ ಮ್ಯಾಥ್ಯೂಸ್ (28) ಮತ್ತು ಧನಂಜಯ ಡಿ ಸಿಲ್ವಾ (30) ಅವರನ್ನು ಜಡೇಜಾ ಪೆವಿಲಿಯನ್‌ಗೆ ಕಳುಹಿಸಿದರು.
ಮಿಂಚಿದ ಜಡೇಜಾ, ಅಶ್ವಿನ್
ಶ್ರೀಲಂಕಾದಿಂದ ಈ ಇನ್ನಿಂಗ್ಸ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಮಾತ್ರ ಕೊಂಚ ಪ್ರತಿರೋಧ ತೋರಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರೋಶನ್ ಡಿಕ್ವೆಲ್ಲಾ ಒಂದು ತುದಿಯಿಂದ ಇನ್ನಿಂಗ್ಸ್ ಅನ್ನು ಮುಂದುವರಿಸಿ ಭಾರತದ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಲೇ ಇದ್ದರು. 9 ವಿಕೆಟ್‌ಗಳ ಪತನದ ನಂತರ, ಗಾಯಗೊಂಡ ಬ್ಯಾಟ್ಸ್‌ಮನ್ ಲಹಿರು ಕುಮಾರ ಅವರ ಸಹಾಯದಿಂದ ಅವರು ಅಂತಿಮವಾಗಿ ತಮ್ಮ 19 ನೇ ಅರ್ಧಶತಕವನ್ನು ಗಳಿಸಿದರು. ಅಂತಿಮವಾಗಿ 51 ರನ್ ಗಳಿಸಿ ಅಜೇಯರಾಗಿ ಮರಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ 4, ಅಶ್ವಿನ್ 3 ಮತ್ತು ಮೊಹಮ್ಮದ್ ಶಮಿ 2, ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:IND vs SL: ಲಂಕಾ ವಿರುದ್ಧ ಜಡೇಜಾ ಶ್ರೇಷ್ಠ ಸಾಧನೆ! 60 ವರ್ಷಗಳಲ್ಲಿ ಈ ದಾಖಲೆ ಮಾಡಿದ ಮೊದಲ ಭಾರತೀಯ
Published On - 4:17 pm, Sun, 6 March 22