AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಲಂಕಾ ವಿರುದ್ಧ ಜಡೇಜಾ ಶ್ರೇಷ್ಠ ಸಾಧನೆ! 60 ವರ್ಷಗಳಲ್ಲಿ ಈ ದಾಖಲೆ ಮಾಡಿದ ಮೊದಲ ಭಾರತೀಯ

Ravindra Jadeja: ಚೆಂಡಿನ ಮೂಲಕ ತವರು ನೆಲದಲ್ಲಿ ಬಿಶನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಸರಿಗಟ್ಟಿದ ಜಡೇಜಾ, ಮೊಹಾಲಿಯಲ್ಲಿ ಕಪಿಲ್ ದೇವ್ ಅವರ ದಾಖಲೆಯನ್ನು ಬ್ಯಾಟ್ ಮೂಲಕ ಮುರಿದರು. ಅವರು ಈಗ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ.

IND vs SL: ಲಂಕಾ ವಿರುದ್ಧ ಜಡೇಜಾ ಶ್ರೇಷ್ಠ ಸಾಧನೆ! 60 ವರ್ಷಗಳಲ್ಲಿ ಈ ದಾಖಲೆ ಮಾಡಿದ ಮೊದಲ ಭಾರತೀಯ
ರವೀಂದ್ರ ಜಡೇಜಾ
TV9 Web
| Updated By: ಪೃಥ್ವಿಶಂಕರ|

Updated on:Mar 06, 2022 | 4:26 PM

Share

ರವೀಂದ್ರ ಜಡೇಜಾ (Ravindra Jadeja) ತಮ್ಮ ಅದ್ಭುತ ಪ್ರದರ್ಶನದಿಂದ ಶ್ರೀಲಂಕಾವನ್ನು ಮ್ಯಾಶ್ ಮಾಡಿದ್ದಾರೆ. ಮೊದಲು ಬ್ಯಾಟ್‌ನಿಂದ ಅಬ್ಬರಿಸಿ ನಂತರ ಬೌಲಿಂಗ್​ನಲ್ಲೂ ಲಂಕಾ ತಂಡವನ್ನು ಕಾಡಿದ್ದಾರೆ. ಈ ಪ್ರದರ್ಶನದ ಮೂಲಕ ಜಡೇಜಾ ಇದೀಗ ಕಳೆದ 60 ವರ್ಷಗಳಲ್ಲಿ ಶ್ರೀಲಂಕಾ ವಿರುದ್ಧ ಶ್ರೇಷ್ಠ ಸ್ಕ್ರಿಪ್ಟ್ ಬರೆದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಮೊಹಾಲಿ ಟೆಸ್ಟ್‌ (Mohali Test)ನ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ ಅವರ ಅಮೋಘ ಸಾಧನೆಯಿಂದಾಗಿ, ಶ್ರೀಲಂಕಾ ಫಾಲೋ-ಆನ್ ಆಡಬೇಕಾಯಿತು. ಅಂದರೆ ಭಾರತ ದೊಡ್ಡ ಗೆಲುವಿನತ್ತ ಸಾಗುತ್ತಿರುವಂತಿದೆ. ವಾಸ್ತವವಾಗಿ ರವೀಂದ್ರ ಜಡೇಜಾ ಮೊಹಾಲಿ ಟೆಸ್ಟ್‌ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಜಡೇಜಾ ಮೊದಲು ಬ್ಯಾಟಿಂಗ್​ನಲ್ಲಿ ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದರು. ನಂತರ ಚೆಂಡಿನ ಮೂಲಕ ವಿಧ್ವಂಸಕ ದಾಳಿ ನಡೆಸಿದರು. ಇದೇ ವೇಳೆ ಜಡೇಜಾ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಬಿಷನ್ ಸಿಂಗ್ ಬೇಡಿ ಅವರನ್ನು ಸರಿಗಟ್ಟಿದ ಜಡೇಜಾ ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್​ನಲ್ಲಿ 175 ರನ್ ಗಳಿಸಿದರು. ನಂತರ ಬೌಲಿಂಗ್​ನಲ್ಲಿ 41 ರನ್‌ಗಳಿಗೆ 5 ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಎರಡನೇ ಶತಕವಾಗಿದೆ. ಆದರೆ, ಚೆಂಡಿನೊಂದಿಗೆ 10 ನೇ ಬಾರಿಗೆ, ಅವರು 5 ವಿಕೆಟ್ ಪಡೆದ ಸಾಧನೆ ಮಾಡಿದರು. ಎಡಗೈ ಬೌಲರ್ ತವರು ನೆಲದಲ್ಲಿ 8ನೇ ಬಾರಿಗೆ 5 ವಿಕೆಟ್ ಕಬಳಿಸಿದ ಅದ್ಭುತ ಸಾಧನೆ ಮಾಡಿದರು. ಈ ವೇಳೆ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಜಡೇಜಾ ಸರಿಗಟ್ಟಿದ್ದಾರೆ.

60 ವರ್ಷಗಳ ನಂತರ ಈ ಪ್ರದರ್ಶನ 60 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಆಟಗಾರ ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿ, 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ ಜಡೇಜಾ. ಭಾರತೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ವಿನೂ ಮಂಕಡ್ 1952 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರು. ಅವರ ನಂತರ 1962 ರಲ್ಲಿ, ಪಾಲಿ ಉಮ್ರಿಗರ್ ಆ ಸಾಧನೆಯನ್ನು ಪುನರಾವರ್ತಿಸಿದ ಎರಡನೇ ಆಟಗಾರರಾದರು. ಇದೀಗ 60 ವರ್ಷಗಳ ನಂತರ ಜಡೇಜಾ ಮೂರನೇ ಆಟಗಾರನಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಚೆಂಡಿನ ಮೂಲಕ ತವರು ನೆಲದಲ್ಲಿ ಬಿಶನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಸರಿಗಟ್ಟಿದ ಜಡೇಜಾ, ಮೊಹಾಲಿಯಲ್ಲಿ ಕಪಿಲ್ ದೇವ್ ಅವರ ದಾಖಲೆಯನ್ನು ಬ್ಯಾಟ್ ಮೂಲಕ ಮುರಿದರು. ಅವರು ಈಗ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ 36.46 ಸರಾಸರಿ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಅವರ ಸರಾಸರಿ 24.50 ಆಗಿದೆ. ಮತ್ತು, ಈ ಎರಡೂ ಅಂಕಿಅಂಶಗಳು ಅವರನ್ನು ಶ್ರೇಷ್ಠ ಆಲ್‌ರೌಂಡರ್ ಆಗಿ ಗುರುತಿಸುವಂತೆ ಮಾಡಿದೆ.

ಇದನ್ನೂ ಓದಿ:IND vs SL: 4 ವರ್ಷಗಳ ನಂತರ ಟೆಸ್ಟ್‌ನಲ್ಲಿ ಶತಕ ಬಾರಿಸಿದ ರವೀಂದ್ರ ಜಡೇಜಾ! ಬೃಹತ್​ ಮೊತ್ತದತ್ತ ಭಾರತ

Published On - 12:31 pm, Sun, 6 March 22