IND vs SL: ಜಡೇಜಾ ಅಜೇಯ 175 ರನ್! ಲಂಕಾ 108/4; 2ನೇ ದಿನದಾಟಲ್ಲಿ ಭಾರತ ಮೇಲುಗೈ

IND vs SL: ಮೊಹಾಲಿ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತನ್ನ ಹಿಡಿತವನ್ನು ಬಲಪಡಿಸಿದೆ. ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 108 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತ ಈಗ 466 ರನ್‌ಗಳ ಮುನ್ನಡೆ ಸಾಧಿಸಿದ್ದು, ಟೀಂ ಇಂಡಿಯಾ ದೊಡ್ಡ ಅಂತರದಲ್ಲಿ ಪಂದ್ಯ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ.

IND vs SL: ಜಡೇಜಾ ಅಜೇಯ 175 ರನ್! ಲಂಕಾ 108/4; 2ನೇ ದಿನದಾಟಲ್ಲಿ ಭಾರತ ಮೇಲುಗೈ
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Mar 05, 2022 | 5:31 PM

ಮೊಹಾಲಿ ಟೆಸ್ಟ್‌ನಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ ತನ್ನ ಹಿಡಿತವನ್ನು ಬಲಪಡಿಸಿದೆ. ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 108 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತ ಈಗ 466 ರನ್‌ಗಳ ಮುನ್ನಡೆ ಸಾಧಿಸಿದ್ದು, ಟೀಂ ಇಂಡಿಯಾ ದೊಡ್ಡ ಅಂತರದಲ್ಲಿ ಪಂದ್ಯ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಶ್ರೀಲಂಕಾ ಪರ ಪಾತುಮ್ ನಿಸಂಕಾ (26) ಮತ್ತು ಚರಿತ್ ಅಸಲಂಕಾ (1) ಆಡುತ್ತಿದ್ದಾರೆ. ಭಾರತದ ಪರ ರವಿಚಂದ್ರನ್ ಅಶ್ವಿನ್ (Ravichandran Ashwin) ಎರಡು ಮತ್ತು ಜಸ್ಪ್ರೀತ್ ಬುಮ್ರಾ-ರವೀಂದ್ರ ಜಡೇಜಾ (Ravindra Jadeja) ತಲಾ ಒಂದು ವಿಕೆಟ್ ಪಡೆದರು. ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅಜೇಯ 175 ರನ್ ಗಳಿಸಿದ್ದರಿಂದ ಭಾರತ ಎಂಟು ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಜಡೇಜಾ (228 ಎಸೆತಗಳಲ್ಲಿ 175 ರನ್) ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಶ್ರೀಲಂಕಾದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

ಭಾರತದ ಇನ್ನಿಂಗ್ಸ್ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ (82 ಎಸೆತಗಳಲ್ಲಿ 61) ಏಳನೇ ವಿಕೆಟ್‌ಗೆ 130 ರನ್ ಸೇರಿಸಿದರು. ಇದು ಶ್ರೀಲಂಕಾ ತಂಡಕ್ಕೆ ಮರಳುವ ನಿರೀಕ್ಷೆಗೂ ಪೆಟ್ಟು ನೀಡಿತು. ಉಪಖಂಡದ ಪಿಚ್‌ಗಳಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ದಾಖಲೆಯನ್ನು ಉಳಿಸಿಕೊಂಡು ಅಶ್ವಿನ್ ತಮ್ಮ 12ನೇ ಅರ್ಧಶತಕವನ್ನು ಗಳಿಸಿದರು. ಇವರಿಬ್ಬರ ಅದ್ಭುತ ಪ್ರಯತ್ನದಿಂದ ಭಾರತ ಮೊದಲ ಸೆಷನ್‌ನಲ್ಲಿ 27 ಓವರ್‌ಗಳಲ್ಲಿ 111 ರನ್ ಸೇರಿಸಿತು. ಎರಡನೇ ಅವಧಿಯಲ್ಲಿ ಮೊಹಮ್ಮದ್ ಶಮಿ (34 ಎಸೆತಗಳಲ್ಲಿ 20 ರನ್) ಜಡೇಜಾಗೆ ಉತ್ತಮ ಬೆಂಬಲ ನೀಡಿದರು. ಇಬ್ಬರೂ ಒಂಬತ್ತನೇ ವಿಕೆಟ್‌ಗೆ 103 ರನ್‌ಗಳ ಮುರಿಯದ ಜೊತೆಯಾಟವನ್ನು ಹಂಚಿಕೊಂಡರು, ನಂತರ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಜಡೇಜಾ-ಅಶ್ವಿನ್ ಜೊತೆಯಾಟ ಜಡೇಜಾ ತಮ್ಮ ಇನ್ನಿಂಗ್ಸ್‌ನಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಶ್ರೀಲಂಕಾದ ದುರ್ಬಲ ದಾಳಿಯನ್ನು ಜಡೇಜಾ ಸರಿಯಾಗಿಯೆ ದಂಡಿಸಿದರು. ಶ್ರೀಲಂಕಾದ ನಾಯಕ ದಿಮುತ್ ಕರುಣರತ್ನೆ ರಕ್ಷಣಾತ್ಮಕ ಫೀಲ್ಡಿಂಗ್ ಅನ್ನು ಪ್ರದರ್ಶಿಸಿದರು, ಇದು ಅವರ ತಂಡವು ಎಷ್ಟು ಒತ್ತಡದಲ್ಲಿದೆ ಎಂಬುದನ್ನು ತೋರಿಸುತ್ತದೆ. ಇದರ ಪರಿಣಾಮ ಜಡೇಜಾ ಮತ್ತು ಅಶ್ವಿನ್ ಸುಲಭವಾಗಿ ಒಂದೆರಡು ರನ್ ಗಳಿಸಿ ಮಧ್ಯದಲ್ಲಿ ಬೌಂಡರಿಗಳನ್ನೂ ಬಾರಿಸಿದರು. ಸುರಂಗ ಲಕ್ಮಲ್ ಅವರ ಶಾರ್ಟ್ ಪಿಚ್ ಬಾಲ್ ಅಶ್ವಿನ್ ಅವರ ಗ್ಲೌಸ್‌ಗೆ ಮುತ್ತಿಕ್ಕಿ ವಿಕೆಟ್ ಕೀಪರ್ ನಿರೋಸನ್ ಡಿಕ್ವೆಲ್ಲಾ ಅವರ ಕೈಸೇರಿತು. ಅಶ್ವಿನ್ ಅವರ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳನ್ನು ಬಾರಿಸಿದರು.

ಆದರೆ ಇದು ಜಡೇಜಾ ಮೇಲೆ ಪರಿಣಾಮ ಬೀರಲಿಲ್ಲ. ಕವರ್ ಪ್ರದೇಶದಲ್ಲಿ ಲಸಿತ್ ಎಂಬುಲ್ದೇಣಿಯವರಿಂದ ರನ್ ಗಳಿಸಿ ಶತಕ ಪೂರೈಸಿದ ಅವರು ತಮ್ಮ ಪರಿಚಿತ ಶೈಲಿಯಲ್ಲಿ ಕತ್ತಿಯಂತೆ ಬ್ಯಾಟ್ ಬೀಸಿ ಸಂಭ್ರಮಿಸಿದರು. ಊಟದ ನಂತರ ಭಾರತ ಜಯಂತ್ ಯಾದವ್ (ಎರಡು) ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ:Women’s World Cup 2022: ಕೊನೆಯ ಓವರ್‌ನಲ್ಲಿ ಸೋತ ಇಂಗ್ಲೆಂಡ್! ಶುಭಾರಂಭ ಮಾಡಿದ ಆಸ್ಟ್ರೇಲಿಯಾ