Ravindra Jadeja: ರವೀಂದ್ರ ಜಡೇಜಾ ಅವರ ದ್ವಿಶತಕವನ್ನು ತಡೆದಿದ್ದು ಯಾರು..?

India vs Sri Lanka 1st Test: ರೋಹಿತ್ ಶರ್ಮಾ ಅವರ ಈ ನಿರ್ಧಾರ ಜೊತೆಗೆ ರಾಹುಲ್ ದ್ರಾವಿಡ್ ಅವರು ಟೀಕೆಗೆ ಗುರಿಯಾಗಲು ಕಾರಣ, 2004 ರ ಘಟನೆ.

Ravindra Jadeja: ರವೀಂದ್ರ ಜಡೇಜಾ ಅವರ ದ್ವಿಶತಕವನ್ನು ತಡೆದಿದ್ದು ಯಾರು..?
Ravindra Jadeja
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 05, 2022 | 4:45 PM

ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಟೆಸ್ಟ್ ಪಂದ್ಯದ 2ನೇ ದಿನದಾಟ…ಟೀಮ್ ಇಂಡಿಯಾ (Team India) ಸ್ಕೋರ್ 574…ರವೀಂದ್ರ ಜಡೇಜಾ (Ravindra Jadeja) ಅಜೇಯ 175 ರನ್…ಇನ್ನೊಂದು 5 ಅಥವಾ 6 ಓವರ್ ಆಡಿದ್ದರೆ ರವಿ ಜಡೇಜಾ ಚೊಚ್ಚಲ ದ್ವಿಶತಕ ಪೂರೈಸುತ್ತಿದ್ದರು. ಆದರೆ ತಂಡದ ಮೊತ್ತ 574 ರನ್ ಹಾಗೂ ಜಡೇಜಾ 175 ರನ್​ಗಳಿಸಿದ್ದ ವೇಳೆ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿತು. ಸಾಮಾನ್ಯವಾಗಿ ಡಿಕ್ಲೇರ್ ಘೋಷಿಸುವ ಮೊದಲು ಕ್ರೀಸ್​ನಲ್ಲಿರುವ ಆಟಗಾರನ ವೈಯುಕ್ತಿಕ ಮೊತ್ತವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಶತಕ ಅಥವಾ ದ್ವಿಶತಕದ ಅಸುಪಾಸಿನಲ್ಲಿದ್ದರೆ ಡಿಕ್ಲೇರ್ ಘೋಷಿಸುವ ಸೂಚನೆ ನೀಡಿ ಬೇಗನೆ ಶತಕ ಅಥವಾ ದ್ವಿಶತಕ ಪೂರೈಸುವಂತೆ ಸಂದೇಶ ರವಾನಿಸಲಾಗುತ್ತದೆ. ಆದರೆ ರವೀಂದ್ರ ಜಡೇಜಾ ವಿಷಯದಲ್ಲಿ ಏನಾಗಿದೆ ಎಂಬ ಚರ್ಚೆ ಶುರುವಾಗಿದೆ.

ಏಕೆಂದರೆ ಟೆಸ್ಟ್ ಕ್ರಿಕೆಟ್​ನ ಚೊಚ್ಚಲ ದ್ವಿಶತಕ ಬಾರಿಸುವ ಅವಕಾಶ ಹೊಂದಿದ್ದ, ಅದರಲ್ಲೂ 2ನೇ ದಿನದಾಟದಲ್ಲಿ ಬ್ಯಾಟ್ ಮಾಡುತ್ತಿದ್ದ ವೇಳೆ ಜಡೇಜಾ ಅವರಿಗೆ ಡಬಲ್ ಸೆಂಚುರಿ ಬಾರಿಸಲು ಏಕೆ ಅವಕಾಶ ನೀಡಲಾಗಿಲ್ಲ ಎಂಬುದು ಇದೀಗ ಜಡ್ಡು ಅಭಿಮಾನಿಗಳ ಪ್ರಶ್ನೆ. ಈ ಪ್ರಶ್ನೆ ಇದೀಗ ಆಕ್ರೋಶವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ, ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ದ ರವೀಂದ್ರ ಜಡೇಜಾ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಜಡೇಜಾಗೆ ದ್ವಿಶತಕ ಸಿಡಿಸುವ ಸುವರ್ಣಾವಕಾಶ ಒದಗಿ ಬಂದಿದ್ದರೂ, ಅದನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ ಎಂದು ಟೀಕಿಸುತ್ತಿದ್ದಾರೆ.

ಇಲ್ಲಿ ರವೀಂದ್ರ ಜಡೇಜಾ ಏಕೆ ದ್ವಿಶತಕ ಬಾರಿಸಲು ಅರ್ಹರು ಎಂಬ ಪ್ರಶ್ನೆಗೆ ಅವರ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸುವುದೇ ದೊಡ್ಡ ಸಾಧನೆ. ಸಾಮಾನ್ಯವಾಗಿ ಬೌಲರುಗಳು ಬೇಗನೆ ಔಟಾಗುವ ಕಾರಣ, ಈ ಹಂತದಲ್ಲಿ ಬ್ಯಾಟ್ಸ್​ಮನ್ ಎನಿಸಿಕೊಂಡಿರುವ ಜಡೇಜಾ ಅವರಂತಹ ಆಟಗಾರರು ಬಿರುಸಿನ ಬ್ಯಾಟಿಂಗ್ ಮೂಲಕ ರನ್​ಗತಿ ಹೆಚ್ಚಿಸುವತ್ತ ಒತ್ತು ನೀಡುತ್ತಾರೆ. ಇದರಿಂದ ವೈಯುಕ್ತಿಕ ಸಾಧನೆ ಮಾಡುವ ಅವಕಾಶ ಸಿಗುವುದು ಬಲು ಅಪರೂಪ. ಅಷ್ಟೇ ಅಲ್ಲದೆ ಜಡೇಜಾ ಟೆಸ್ಟ್​ ಕ್ರಿಕೆಟ್​ನಲ್ಲಿ ಇದುವರೆಗೆ ಬಾರಿಸಿದ್ದು ಕೇವಲ 1 ಶತಕ ಮಾತ್ರ. ಈ ಬಾರಿ ದ್ವಿಶತಕ ಸಿಡಿಸುವ ಅವಕಾಶ ಕೂಡ ಹೊಂದಿದ್ದರು. ಇದಾಗ್ಯೂ ನಾಯಕ ಡಿಕ್ಲೇರ್ ಘೋಷಿಸುವುದರೊಂದಿಗೆ, ಜಡೇಜಾ ಅವರ ಚೊಚ್ಚಲ ದ್ವಿಶತಕದ ಕನಸು ಕೂಡ ಕಮರಿತು.

ಇನ್ನು ರೋಹಿತ್ ಶರ್ಮಾ ಅವರ ಈ ನಿರ್ಧಾರ ಜೊತೆಗೆ ರಾಹುಲ್ ದ್ರಾವಿಡ್ ಅವರು ಟೀಕೆಗೆ ಗುರಿಯಾಗಲು ಕಾರಣ, 2004 ರ ಘಟನೆ. ಅಂದು ಟೀಮ್ ಇಂಡಿಯಾ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನ ವಿರುದ್ದ ಟೆಸ್ಟ್ ಪಂದ್ಯವಾಡಿತ್ತು. ಆ ವೇಳೆ ಸಚಿನ್ ತೆಂಡೂಲ್ಕರ್ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ 194 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ಅಂದು ಅದು ದೊಡ್ಡ ವಿವಾದವಾಗಿತ್ತು. ಇದೀಗ ಅಂದು ನಾಯಕರಾಗಿದ್ದ ದ್ರಾವಿಡ್ ಈಗ ಕೋಚ್ ಪಾತ್ರದಲ್ಲಿದ್ದಾರೆ. ಒಂದು ವೇಳೆ ‘ರವೀಂದ್ರ ಜಡೇಜಾ ಬದಲಿಗೆ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಕ್ರೀಸ್​ನಲ್ಲಿ ಇದ್ದಿದ್ದರೆ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಿದ್ದರೇ ? ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನೆಗಳೆನ್ನೆತ್ತಿದ್ದಾರೆ.

ಒಟ್ಟಿನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ದ್ವಿಶತಕ ಬಾರಿಸುವ ಉತ್ತಮ ಅವಕಾಶ ಹೊಂದಿದ್ದರೂ ರವೀಂದ್ರ ಜಡೇಜಾ ಅವರ ಚೊಚ್ಚಲ ಡಬಲ್ ಸೆಂಚುರಿಯನ್ನು ರೋಹಿತ್ ಶರ್ಮಾ ಡಿಕ್ಲೇರ್ ಮೂಲಕ ತಡೆದಿದ್ದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಇಲ್ಲಿ ತಂಡದ ಹಿತ ಮುಖ್ಯ ಎಂಬ ವಾದ ಮುಂದಿಡುವುದಾದರೆ, ಪಂದ್ಯವು 2ನೇ ದಿನದಾಟದಲ್ಲಿ ಇದೆ ಅಷ್ಟೇ. ಬೃಹತ್ ಮೊತ್ತ ಪೇರಿಸಿರುವ ಟೀಮ್ ಇಂಡಿಯಾಗೆ ಬೌಲಿಂಗ್ ಮಾಡಲು 3 ದಿನದಾಟವಿದೆ ಎಂಬ ವಾದ ಕೂಡ ಮುಂದಿಡಬಹುದು. ಹೀಗಾಗಿ ರವೀಂದ್ರ ಜಡೇಜಾ ಅವರು ದ್ವಿಶತಕ ಪೂರೈಸಲು ಅರ್ಹರಾಗಿದ್ದರು ಎಂದೇ ಹೇಳಬಹುದು.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IND vs SL: Rohit Sharma declares innings with Ravindra Jadeja 25 short of 200)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ