AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli-Rohit Sharma: ಕಿಂಗ್ ಕೊಹ್ಲಿ ಜೊತೆ ಹಿಟ್​ಮ್ಯಾನ್ ಬ್ರೊಮ್ಯಾನ್ಸ್​: ಇಲ್ಲಿದೆ ವಿಡಿಯೋ

Virat Kohli-Rohit Sharma's Bromance video: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 45 ರನ್​ಗಳಿಸಿದರೆ, ರೋಹಿತ್ ಶರ್ಮಾ ಕೇವಲ 29 ರನ್​ ಮಾತ್ರ ಗಳಿಸಿದ್ದರು. ಇದಾಗ್ಯೂ ರವೀಂದ್ರ ಜಡೇಜಾ ಅವರ ಅಜೇಯ 175 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 574 ರನ್​ಗಳಿಸಿ ಇನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿದೆ.

Virat Kohli-Rohit Sharma: ಕಿಂಗ್ ಕೊಹ್ಲಿ ಜೊತೆ ಹಿಟ್​ಮ್ಯಾನ್ ಬ್ರೊಮ್ಯಾನ್ಸ್​: ಇಲ್ಲಿದೆ ವಿಡಿಯೋ
Virat Kohli-Rohit Sharma
TV9 Web
| Updated By: ಝಾಹಿರ್ ಯೂಸುಫ್|

Updated on:Mar 05, 2022 | 5:34 PM

Share

ಒಬ್ಬರು ನಾಯಕ, ಮತ್ತೊಬ್ಬರು ಮಾಜಿ ನಾಯಕ…ಒಬ್ಬರು ಕಿಂಗ್ (Virat Kohli), ಮತ್ತೊಬ್ಬರು ಹಿಟ್​ಮ್ಯಾನ್ (Rohit Sharma)…ಹೀಗೆ ವಿಶ್ವದ ಎರಡು ಅತ್ಯುತ್ತಮ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ. ಇಲ್ಲಿ ಉತ್ತಮ ಅತ್ಯುತ್ತಮ ಪ್ರಶ್ನೆಗಳು ಮೂಡಿಬರುತ್ತಿದ್ದಂತೆ ಇಬ್ಬರ ನಡುವೆ ಮನಸ್ತಾಪಗಳಿವೆ, ವೈಮನಸ್ಯವಿದೆ ಎಂದು ಸುದ್ದಿಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ ಇಂತಹ ಸುದ್ದಿಗಳನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿರಾಕರಿಸುತ್ತಾ ಬಂದಿದ್ದರು. ಅದರಲ್ಲೂ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಕೊಹ್ಲಿ ಹೇಗಿರಲಿದ್ದಾರೆ ಎಂಬ ಪ್ರಶ್ನೆಗಳು ಮೂಡಿತ್ತು. ಆದರೀಗ ತಮ್ಮ ಜುಗಲ್​ಬಂಧಿಯನ್ನು ಇಬ್ಬರು ಸ್ಟಾರ್ ಕ್ರಿಕೆಟಿಗರು ವಿಶ್ವದ ತೋರಿಸುತ್ತಾ ಜೊತೆಯಾಗಿ ಸಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ.

ಮೊಹಾಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲು ಬ್ಯಾಟಿಂಗ್ ತೆಗೆದುಕೊಂಡ ಪರಿಣಾಮ ವಿರಾಟ್ ಕೊಹ್ಲಿಯನ್ನು ವಿಶೇಷ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮುನ್ನ ಸ್ವಾಗತಿಸಲು ಅವಕಾಶ ಇರಲಿಲ್ಲ. ಆದರೆ ಟೀಮ್ ಇಂಡಿಯಾ ಫೀಲ್ಡಿಂಗ್​ಗೆ ಇಳಿಯುತ್ತಿದ್ದಂತೆ ಹಿಟ್​ಮ್ಯಾನ್ ತಮ್ಮ ಪ್ಲ್ಯಾನ್ ಅನ್ನು ಬದಲಿಸಿದ್ದರು.

ಅದರಂತೆ ಟೀಮ್ ಇಂಡಿಯಾ ಆಟಗಾರರು ಕೂಡ ಮೈದಾನಕ್ಕಿಳಿದಿದ್ದರು. ಎಲ್ಲರಂತೆ ವಿರಾಟ್ ಕೊಹ್ಲಿ ಕೂಡ ಮೈದಾನಕ್ಕೆ ಬಂದಿದ್ದಾರೆ. ಆದರೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ಮೈದಾನಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ 100ನೇ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಆಟಗಾರರು ಎರಡು ಬದಿಯಲ್ಲಿ ನಿಂತು ಸ್ವಾಗತಿಸಿದ್ದಾರೆ.

ಇದೀಗ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಮನವಿ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆಟಗಾರರಿಬ್ಬರ ಬ್ರೊಮ್ಯಾನ್ಸ್​ (ಸಹೋದರತ್ವ) ಅನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವವರಿಗೆ ಮತ್ತೊಮ್ಮೆ ಕಿಂಗ್ ಕೊಹ್ಲಿ-ಹಿಟ್​ಮ್ಯಾನ್ ಉತ್ತರ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 45 ರನ್​ಗಳಿಸಿದರೆ, ರೋಹಿತ್ ಶರ್ಮಾ ಕೇವಲ 29 ರನ್​ ಮಾತ್ರ ಗಳಿಸಿದ್ದರು. ಇದಾಗ್ಯೂ ರವೀಂದ್ರ ಜಡೇಜಾ ಅವರ ಅಜೇಯ 175 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 574 ರನ್​ಗಳಿಸಿ ಇನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Virat Kohli-Rohit Sharma’s Bromance in mohali-watch viral video)

Published On - 5:27 pm, Sat, 5 March 22