IND vs PAK ODI: ಭಾರತದ ಮಾನ ಉಳಿಸಿದ ಪೂಜಾ-ಸ್ನೇಹ್ ಜೊತೆಯಾಟ: ಪಾಕಿಸ್ತಾನಕ್ಕೆ 245 ರನ್​ಗಳ ಟಾರ್ಗೆಟ್

IND vs PAK ODI: ಭಾರತದ ಮಾನ ಉಳಿಸಿದ ಪೂಜಾ-ಸ್ನೇಹ್ ಜೊತೆಯಾಟ: ಪಾಕಿಸ್ತಾನಕ್ಕೆ 245 ರನ್​ಗಳ ಟಾರ್ಗೆಟ್
Pooja Vastrakar and Sneh Rana IND vs PAK

India vs Pakistan, Women's World Cup 2022: ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಸಂಪೂರ್ಣ ವೈಫಲ್ಯದ ನಡುವೆಯೂ ಅರ್ಧಶತಕ ಸಿಡಿಸಿ ಶತಕದ ಜೊತೆಯಾಟ ಆಡಿದ ಸ್ನೇಹ್ ರಾಣ ಮತ್ತು ಪೂಜಾ ವಸ್ತ್ರಕರ್ ಭಾರತದ ಮಾನ ಉಳಿಸಿದರು. 50 ಓವರ್​ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿ ಪಾಕಿಸ್ತಾನಕ್ಕೆ ಸಾಧಾರಣ ಗುರಿ ನೀಡಿದೆ.

TV9kannada Web Team

| Edited By: Vinay Bhat

Mar 06, 2022 | 10:14 AM

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ( ICC Women’s World Cup 2022) ನಾಲ್ಕನೇ ಪಂದ್ಯದಲ್ಲಿಂದು ಭಾರತ ಹಾಗೂ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ (India womens vs Pakistan Womens) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಸಾಧಾರಣ ಟಾರ್ಗೆಟ್ ನೀಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಸಂಪೂರ್ಣ ವೈಫಲ್ಯದ ನಡುವೆಯೂ ಅರ್ಧಶತಕ ಸಿಡಿಸಿ ಶತಕದ ಜೊತೆಯಾಟ ಆಡಿದ ಸ್ನೇಹ್ ರಾಣ (Sneh Rana) ಮತ್ತು ಪೂಜಾ ವಸ್ತ್ರಕರ್ ಭಾರತದ ಮಾನ ಉಳಿಸಿದರು. 50 ಓವರ್​ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ್ದು ಸಾಧಾರಣ ಗುರಿ ನೀಡಿದೆ. ಭಾರತದ ಬೌಲಿಂಗ್ ಪಡೆ ಬಲಿಷ್ಠವಾಗಿದ್ದು ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ನೋಡಬೇಕಿದೆ.

ಮೌಂಟ್‌ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಪಾಕಿಸ್ತಾನ ಆರಂಭದಲ್ಲೇ ಆಘಾತ ಉಂಟುಮಾಡಿತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಜೊತೆ ಓಪನರ್ ಆಗಿ ಕಣಕ್ಕಿಳಿದ ಶಫಾಲಿ ವರ್ಮಾ ಪಂದ್ಯದ ಮೂರನೇ ಓವರ್​ನ ಡಯಾನ ಬೇಗ್ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು.

4 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮಂದಾನ ಹಾಗೂ ದೀಪ್ತಿ ಶರ್ಮಾ ಆಸರೆಯಾದರು. ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 92 ರನ್​ಗಳ ಕಾಣಿಕೆ ನೀಡಿತು. ಭರ್ಜರಿ ಫಾರ್ಮ್​ನಲ್ಲಿರುವ ಮಂದಾನ 75 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ನೊಂದಿಗೆ 52 ರನ್ ಗಳಿಸಿದರೆ, ದೀಪ್ತಿ 57 ಎಸೆತಗಳಲ್ಲಿ 40 ರನ್​ಗೆ ಔಟಾದರು. ಈ ಸಂದರ್ಭ ತಂಡಕ್ಕೆ ಆಧಾರವಾಗಬೇಕಿದ್ದ ಅನುಭವಿಗಳು ದಿಢೀರ್ ನಿರ್ಗಮಿಸಿದ್ದು ಭಾರತ ಪಾತಾಳಕ್ಕೆ ಕುಸಿಯಿತು. ನಾಯಕಿ ಮಿಥಾಲಿ ರಾಜ್ 9, ಹರ್ಮನ್​ಪ್ರೀತ್ ಕೌರ್ 5 ಹಾಗೂ ರಿಚ್ಚಾ ಘೋಷ್ ಕೇವಲ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

96 ರನ್​ಗೆ 2ನೇ ವಿಕೆಟ್ ಕಳೆದುಕೊಂಡಿದ್ದ ಭಾರತ  114 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ಈ ಸಂದರ್ಭ ಮಾನ ಉಳಿಸಿದ್ದು ಸ್ನೇಹ್ ರಾಣ ಹಾಗೂ ಪೂಜಾ ವಸ್ತ್ರಕರ್. ಇವರಿಬ್ಬರು ಹೆಚ್ಚು ಬಾಲ್​ಗಳನ್ನು ತಿನ್ನದೆ ಸಿಂಗ್, ಡಬಲ್ ಪಡೆದುಕೊಂಡು ಭಾರತದ ರನ್ ಗತಿಯನ್ನು ಹೆಚ್ಚಿಸಿದರು. ಅಂತಿಮ ಹಂತದವರೆಗೂ ಕ್ರೀಸ್​ನಲ್ಲೇ ಇದ್ದ ಇವರು ಬರೋಬ್ಬರಿ 122 ರನ್​ಗಳ ಜೊತೆಯಾಟ ಆಡಿದರು.

ಕೊನೇ ಹಂತದಲ್ಲಿ ಪೂಜಾ 59 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 67 ರನ್​ಗೆ ಔಟಾದರು. ಸ್ನೇಹ್ 48 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅಜೇಯ 53 ರನ್ ಸಿಡಿಸಿದರು. ಭಾರತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿದೆ. ಪಾಕ್ ಪರ ನಿದಾ ದರ್ ಹಾಗೂ ನಶ್ರಾ ಸಂಧು ತಲಾ 2 ವಿಕೆಟ್ ಕಿತ್ತರು.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಹರ್ಮನ್​ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.

ಪಾಕಿಸ್ತಾನ ಪ್ಲೇಯಿಂಗ್ XI: ಜವೇರಿಯ ಖಾನ್, ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈನಾ ಸೊಹಾಲಿ, ನಿದಾ ದರ್, ಅಲಿಯಾ ರಿಯಾಝ್, ಫಾತಿಮಾ ಸನಾ, ಸಿದ್ರಾ ನವಾಜ್ (ವಿಕೆಟ್ ಕೀಪರ್), ಡಯಾನ್ ಬೇಗ್, ನಶ್ರಾ ಸಂಧು, ಅನಮ್ ಅಮಿನ್.

Ravindra Jadeja: ಜಡೇಜಾ ದ್ವಿಶತಕದ ಹೊಸ್ತಿಲಲ್ಲಿ ಭಾರತ ಡಿಕ್ಲೇರ್ ಘೋಷಿಸಿದ್ದು ಯಾಕೆ ಗೊತ್ತೇ?

India vs Sri Lanka 1st Test, Day 3 Live Score

Follow us on

Most Read Stories

Click on your DTH Provider to Add TV9 Kannada