Ravindra Jadeja: ಜಡೇಜಾ ದ್ವಿಶತಕದ ಹೊಸ್ತಿಲಲ್ಲಿ ಭಾರತ ಡಿಕ್ಲೇರ್ ಘೋಷಿಸಿದ್ದು ಯಾಕೆ ಗೊತ್ತೇ?

IND vs SL 1st Test: ಜಡೇಜಾ ಅವರು ಅಮೋಘ ಶತಕ ಬಾರಿಸಿ ದ್ವಿಶತಕಕ್ಕೆ ಇನ್ನೇನು ಕೆಲವೇ ರನ್​ಗಳ ಅವಶ್ಯಕತೆಯಿದ್ದಾಗ ಭಾರತ ಇನಿಂಗ್ಸ್ ಡಿಕ್ಲೇರ್ ಘೋಷಿಸಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

Ravindra Jadeja: ಜಡೇಜಾ ದ್ವಿಶತಕದ ಹೊಸ್ತಿಲಲ್ಲಿ ಭಾರತ ಡಿಕ್ಲೇರ್ ಘೋಷಿಸಿದ್ದು ಯಾಕೆ ಗೊತ್ತೇ?
Jadeja and Rohit Sharma Declare
Follow us
| Updated By: Vinay Bhat

Updated on:Mar 06, 2022 | 9:25 AM

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Sri Lanka) ಬೊಂಬಾಟ್ ಪ್ರದರ್ಶನ ತೋರುತ್ತಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ​ 574 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಟೀಮ್ ಇಂಡಿಯಾ (Team India) ಇಷ್ಟು ದೊಡ್ಡ ಮೊತ್ತ ಕಲೆಹಾಕಲು ಪ್ರಮುಖ ಕಾರಣ ರವೀಂದ್ರ ಜಡೇಜಾ (Ravindra Jadeja). ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಭಾರತ ಪರ ಅಶ್ವಿನ್ ಜೊತೆಗೂಡಿ ಜಡ್ಡು ಏಳನೇ ವಿಕೆಟ್‌ಗೆ 130 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಬಳಿಕ 9ನೇ ವಿಕೆಟ್‌ಗೆ ಮೊಹಮ್ಮದ್‌ ಶಮಿ ಜೊತೆಗೂಡಿದ ಜಡೇಜಾ ಅವರಿಂದ ಅಜೇಯ 103 ರನ್‌ಗಳ ಜೊತೆಯಾಟವೂ ಮೂಡಿಬಂತು. ಡಿಕ್ಲೇರ್ ಘೋಷಿಸುವ ಮೊದಲು ಜಡೇಜಾ ಅವರು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು.

ಆದರೆ, ಜಡೇಜಾ ಅವರು ಅಮೋಘ ಶತಕ ಬಾರಿಸಿ ದ್ವಿಶತಕಕ್ಕೆ ಇನ್ನೇನು ಕೆಲವೇ ರನ್​ಗಳ ಅವಶ್ಯಕತೆಯಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಜಡೇಜಾ 20ರಿಂದ 25 ನಿಮಿಷ ಮೈದಾನದಲ್ಲಿದಿದ್ದರೆ ದ್ವಿಶತಕ ಸಿಡಿಸಬಹುದಿತ್ತು ಎಂದು ನಂಬಲಾಗಿತ್ತು. ದ್ವಿಶತಕ ಸಿಡಿಸುವ ಅವಕಾಶವನ್ನು ಜಡೇಜಾ ಅವರಿಂದ ಕಸಿದುಕೊಂಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದೀಗ ಈ ಎಲ್ಲ ಚರ್ಚೆಗಳಿಗೆ ಸ್ವತಃ ಜಡೇಜಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಲು ಏನು ಕಾರಣ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಎರಡನೇ ದಿನದಾಟ ಅಂತ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಡ್ಡು ರೋಹಿತ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ರಾಹುಲ್ ಅಥವಾ ರೋಹಿತ್​ರದ್ದು ಅಲ್ಲ, ಇನಿಂಗ್ಸ್ ಡಿಕ್ಲೇರ್ ಮಾಡುವಂತೆ ನಾನು ಸಂದೇಶ ಕಳುಹಿಸಿದ್ದೆ ಎಂದು ಹೇಳಿ ಟೀಕೆ ಮಾಡುತ್ತಿದ್ದವರು ಬಾಯಿ ಮುಚ್ಚಿಸಿದ್ದಾರೆ.

“ನಾನು 200 ರನ್ ಪೂರೈಸಿದ ನಂತರ ಇನ್ನಿಂಗ್ಸ್ ಡಿಕ್ಲೇರ್ ಮಾಡುವಂತೆ ಕುಲ್ದೀಪ್ ಯಾದವ್ ಮೂಲಕ ರೋಹಿತ್ ಶರ್ಮಾ ಸಂದೇಶ ಕಳುಹಿಸಿದ್ದರು. ಆದರೆ 200 ರನ್ ಗಳಿಸುವ ಸಲಹೆಯನ್ನು ನಾನು ವಿರೋಧಿಸಿದೆ. ಶ್ರೀಲಂಕಾ ಬ್ಯಾಟ್ಸ್​ಮನ್​ಗಳು ದಣಿದಿದ್ದಾರೆ. ಚಹಾ ವಿರಾಮದವರೆಗೆ ಅವರಿಗೆ ಬಿಡುವು ನೀಡುವುದು ಬೇಡ. ಸಿಕ್ಕ ಅವಕಾಶದಲ್ಲಿ ವಿಕೆಟ್ ಬೇಟೆ ನಡೆಸಬಹುದು ಎಂಬುದು ನನ್ನ ಆಲೋಚನೆಯಾಗಿತ್ತು,” ಎಂದು ಜಡೇಜಾ ಹೇಳಿದ್ದಾರೆ.

“ನಾವು ಡಿಕ್ಲೇರ್ ಘೋಷಿಸುವುದಕ್ಕಿಂತ ಮೊದಲು ನಾನು ಬ್ಯಾಟಿಂಗ್ ಮಾಡುತ್ತಿರುವಾಗ ಚೆಂಡು ಕೊಂಚ ಬೌನ್ಸ್ ಮತ್ತು ಟರ್ನ್ ಆಗಲು ಪ್ರಾರಂಭಿಸಿತು. ಇದು ಗಮನಕ್ಕೆ ಬಂದ ತಕ್ಷಣ ನಮ್ಮ ಆಟವನ್ನು ನಿಲ್ಲಿಸಿ ಇದೀಗ ಶ್ರೀಲಂಕಾ ಅವರನ್ನು ಬ್ಯಾಟಿಂಗ್​ಗೆ ಆಹ್ವಾನಿಸುವುದು ಉತ್ತಮ ಎಂಬ ಸಂದೇಶವನ್ನು ನಾನು ಕಳುಹಿಸಿದೆ. ಹೀಗಾಗಿ ನಾವು ಆದಷ್ಟು ಬೇಗ ಡಿಕ್ಲೇರ್ ಘೋಷಿಸಿ ಎದುರಾಳಿಯನ್ನು ಬ್ಯಾಟಿಂಗ್ ಮಾಡಿಸುವುದು ಉದ್ದೇಶವಾಗಿತ್ತು,” ಎಂದು ಹೇಳಿದ್ದಾರೆ.

ತನ್ನ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಜಡೇಜಾ, “ತುಂಬಾ ಸಂತಸವಾಗಿದೆ. ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಜೊತೆ ಆಟವಾಡಿದ್ದು ಉತ್ತಮವಾಗಿತ್ತು. ನಾನು ನಾನ್ ಸ್ಟ್ರೈಕರ್​ನಲ್ಲಿ ನಿಂತು ಪಂತ್ ಆಟವನ್ನು ಎಂಜಾಯ್ ಮಾಡುತ್ತಿದ್ದೆ. ಸಮಯವನ್ನು ತೆಗೆದುಕೊಂಡು ಪಂತ್ ಜೊತೆ ಉತ್ತಮ ಜೊತೆಯಾಟ ಆಡಿದೆ. ಅಶ್ವಿನ್ ಅವರ ಜೊತೆಕೂಡ ಅದೇ ಸೂತ್ರವನ್ನು ಅನುಸರಿಸಿದೆ. ಒಬ್ಬ ಮನಿಷ್ಯನಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ, ತಂಡದ ಸಹಾಯ ಬೇಕೇಬೇಕು. ನಾವು ವಿಕೆಟ್ ಟು ವಿಕೆಟ್ ಬಾಲ್ ಮಾಡಲು ಎದುರು ನೋಡುತ್ತಿದ್ದೇವೆ,” ಎಂದು ಹೇಳಿದರು.

IND vs SL 1st Test: ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಶ್ರೀಲಂಕಾ: ಕುತೂಹಲ ಕೆರಳಿಸಿದ ಮೂರನೇ ದಿನದಾಟ

India vs Sri Lanka 1st Test, Day 3 Live Score

Published On - 9:24 am, Sun, 6 March 22

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್