IND vs SL: 4 ವರ್ಷಗಳ ನಂತರ ಟೆಸ್ಟ್‌ನಲ್ಲಿ ಶತಕ ಬಾರಿಸಿದ ರವೀಂದ್ರ ಜಡೇಜಾ! ಬೃಹತ್​ ಮೊತ್ತದತ್ತ ಭಾರತ

| Updated By: ಪೃಥ್ವಿಶಂಕರ

Updated on: Mar 05, 2022 | 12:23 PM

Ravindra Jadeja: ಶತಕದ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಕೂಡ ಎರಡು ಶತಕಗಳ ಜೊತೆಯಾಟವಾಡಿದರು. ರಿಷಬ್ ಪಂತ್ ಜೊತೆಗೂಡಿ ಆರನೇ ವಿಕೆಟ್‌ಗೆ 118 ಎಸೆತಗಳಲ್ಲಿ 104 ರನ್ ಸೇರಿಸಿದರು. ನಂತರ ಅಶ್ವಿನ್ ಜೊತೆ 7ನೇ ವಿಕೆಟ್​ಗೆ 174 ಎಸೆತಗಳಲ್ಲಿ 130 ರನ್ ಜೊತೆಯಾಟವಾಡಿದರು.

IND vs SL: 4 ವರ್ಷಗಳ ನಂತರ ಟೆಸ್ಟ್‌ನಲ್ಲಿ ಶತಕ ಬಾರಿಸಿದ ರವೀಂದ್ರ ಜಡೇಜಾ! ಬೃಹತ್​ ಮೊತ್ತದತ್ತ ಭಾರತ
ರವೀಂದ್ರ ಜಡೇಜಾ
Follow us on

ಟೀಂ ಇಂಡಿಯಾದ ಸರ್​ಜೀ ಅಂದರೆ ರವೀಂದ್ರ ಜಡೇಜಾ (Ravindra Jadeja) ಮೊಹಾಲಿಯಲ್ಲಿ ಅಬ್ಬರಿಸಿದ್ದಾರೆ. 4 ವರ್ಷಗಳ ನಂತರ ಅವರ ಬ್ಯಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಕಂಡಿದೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಎರಡನೇ ಶತಕವಾಗಿದೆ. ಮೊಹಾಲಿ ಟೆಸ್ಟ್‌ (Mohali Test)ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದರು. ಜಡೇಜಾ ಅವರ ಬ್ಯಾಟಿಂಗ್‌ನಿಂದ ಶತಕ ಸಿಡಿಸಿದ ನಂತರ ಶ್ರೀಲಂಕಾ ಮೇಲೆ ಭಾರತ ದೊಡ್ಡ ಸ್ಕೋರ್‌ನ ಸವಾಲು ಒಡ್ಡಿದೆ. ಎಡಗೈ ಬ್ಯಾಟ್ಸ್‌ಮನ್ ಜಡೇಜಾ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ರಾಜ್‌ಕೋಟ್ ಟೆಸ್ಟ್‌ (Rajkot Test)ನಲ್ಲಿ 2018 ರಲ್ಲಿ ತಮ್ಮ ಮೊದಲ ಮತ್ತು ಕೊನೆಯ ಟೆಸ್ಟ್ ಶತಕವನ್ನು ಗಳಿಸಿದ್ದರು.

ಶ್ರೀಲಂಕಾ ವಿರುದ್ಧ ರವೀಂದ್ರ ಜಡೇಜಾ 160 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸಮಯದಲ್ಲಿ, ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳನ್ನು ಬಾರಿಸಿದರು. ಜಡೇಜಾ ಶ್ರೀಲಂಕಾದ ಸ್ಪಿನ್ನರ್ ಅಂಬುಲ್ಡೆನಿಯಾ ಅವರ ಎಸೆತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕಕ್ಕೆ ಸ್ಕ್ರಿಪ್ಟ್ ಬರೆದರು. ರವೀಂದ್ರ ಜಡೇಜಾ ಮೊಹಾಲಿ ಟೆಸ್ಟ್‌ನಲ್ಲಿ ಶತಕ ಪೂರೈಸಿದ್ದಲ್ಲದೆ, ಈ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ದೊಡ್ಡ ಸ್ಕೋರ್‌ನ ಸ್ಕ್ರಿಪ್ಟ್ ಅನ್ನು ಸಹ ಬರೆದಿದ್ದಾರೆ.

ಜಡೇಜಾ ಎರಡನೇ ಶತಕ ಮತ್ತು ಎರಡು ಶತಕದ ಜೊತೆಯಾಟ
ಶತಕದ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಕೂಡ ಎರಡು ಶತಕಗಳ ಜೊತೆಯಾಟವಾಡಿದರು. ರಿಷಬ್ ಪಂತ್ ಜೊತೆಗೂಡಿ ಆರನೇ ವಿಕೆಟ್‌ಗೆ 118 ಎಸೆತಗಳಲ್ಲಿ 104 ರನ್ ಸೇರಿಸಿದರು. ನಂತರ ಅಶ್ವಿನ್ ಜೊತೆ 7ನೇ ವಿಕೆಟ್​ಗೆ 174 ಎಸೆತಗಳಲ್ಲಿ 130 ರನ್ ಜೊತೆಯಾಟವಾಡಿದರು. ಮೊಹಾಲಿ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಅವರ ಶತಕ ಎರಡನೇ ದಿನದ ಆಟದ ಮೊದಲ ಸೆಷನ್‌ನಲ್ಲಿ ಕಂಡುಬಂದಿದೆ. ಈ ಶತಕ ಬಾರಿಸಿದ ಬಳಿಕ ತಮ್ಮದೇ ಶೈಲಿಯಲ್ಲಿ ಕತ್ತಿಯಂತೆ ಬ್ಯಾಟ್ ಬೀಸಿ ಸಂಭ್ರಮಿಸಿದ್ದು ಕಂಡುಬಂತು.

ಭಾರತ ಬೃಹತ್ ಮೊತ್ತದತ್ತ ದಾಪುಗಾಲು
ರವೀಂದ್ರ ಜಡೇಜಾ ಬ್ಯಾಟ್‌ನಿಂದ ಶತಕ ಸಿಡಿಸಿದ ಬೆನ್ನಲ್ಲೇ ಶ್ರೀಲಂಕಾ ಎದುರು ಭಾರತದ ಬೃಹತ್ ಸ್ಕೋರ್‌ನ ಮಹಾಗೋಡೆ ನಿರ್ಮಿಸಿದೆ. ಭಾರತ ತಂಡ ಸುಲಭವಾಗಿ 500 ರನ್‌ಗಳ ಗಡಿ ದಾಟುತ್ತಿದೆ. ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 356 ರನ್ ಗಳಿಸಿದ್ದ ಭಾರತ ಎರಡನೇ ದಿನ ಆಟ ಆರಂಭಿಸಿದೆ. ಎರಡನೇ ದಿನ ಜಡೇಜಾ ಮತ್ತು ಅಶ್ವಿನ್ ಮೊದಲ ಸೆಷನ್‌ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ 61 ರನ್ ಗಳಿಸಿ ಔಟಾದರು, ಇದು ಟೆಸ್ಟ್‌ನಲ್ಲಿ ಅವರ 12ನೇ ಅರ್ಧಶತಕವಾಗಿತ್ತು.

ಇದನ್ನೂ ಓದಿ:IND vs SL: ಧೋನಿ ತನ್ನ ವೃತ್ತಿಜೀವನದುದ್ದಕ್ಕೂ ಅನುಭವಿಸಿದ ನೋವಿಗೆ ಸಮ ಪಾಲುದಾರರಾದ ಪಂತ್..!