IND vs SL: ಭಾರತ-ಶ್ರೀಲಂಕಾ ಮುಖಾಮುಖಿ: ಯಾರು ಬಲಿಷ್ಠ..?
IND vs SL T20 Head to Head Records: ಕ 2016ರಲ್ಲಿ ಶ್ರೀಲಂಕಾ ತಂಡ ಮತ್ತೆ ಭಾರತ ಪ್ರವಾಸ ಕೈಗೊಂಡಿತ್ತು. ಆ ವೇಳೆ ಭಾರತವು 3 ಪಂದ್ಯಗಳ T20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ . ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಹಾಗೂ ಟಿ20 ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಮ್ ಇಂಡಿಯಾ ಇದೀಗ ಮತ್ತೊಂದು ಭರ್ಜರಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅತ್ತ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ದ 4-1 ಅಂತರದ ಹೀನಾಯ ಸೋಲಿನೊಂದಿಗೆ ಭಾರತದ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ವಿಶೇಷ ಎಂದರೆ ಶ್ರೀಲಂಕಾ ತಂಡವು ಇದುವರೆಗೆ ಭಾರತದಲ್ಲಿ ಟಿ20 ಸರಣಿ ಗೆದ್ದಿಲ್ಲ ಎಂಬುದು. ಹೀಗಾಗಿ ಈ ಬಾರಿ ಲಂಕಾ ಸರಣಿ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಶ್ರೀಲಂಕಾ ತಂಡ ಭಾರತದಲ್ಲಿ ಒಟ್ಟು 4 ಟಿ20 ಸರಣಿಗಳನ್ನು ಆಡಿದೆ. 2009ರಲ್ಲಿ ಶ್ರೀಲಂಕಾ ತಂಡ ಮೊದಲ ಬಾರಿಗೆ ಟಿ20 ಸರಣಿಗಾಗಿ ಭಾರತಕ್ಕೆ ಬಂದಿತ್ತು. ಎರಡು ಪಂದ್ಯಗಳ ಈ ಸರಣಿಯು, 1-1ರಲ್ಲಿ ಸಮಬಲಗೊಂಡಿತು. ಇದಾದ ಬಳಿಕ 2016ರಲ್ಲಿ ಶ್ರೀಲಂಕಾ ತಂಡ ಮತ್ತೆ ಭಾರತ ಪ್ರವಾಸ ಕೈಗೊಂಡಿತ್ತು. ಆ ವೇಳೆ ಭಾರತವು 3 ಪಂದ್ಯಗಳ T20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಇನ್ನು 2017ರಲ್ಲಿ ತವರಿನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿತ್ತು. 2020 ರಲ್ಲಿ ಟೀಮ್ ಇಂಡಿಯಾ 2-0 ಅಂತರದಲ್ಲಿ ಜಯಭೇರಿ ಬಾರಿಸಿದರೆ, ಒಂದು ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು. ಅಂದರೆ ತವರಿನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಒಟ್ಟು 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇದರಲ್ಲಿ 8 ಗೆಲುವು ಸಾಧಿಸಿದೆ. ಹೀಗಿರುವಾಗ ಶ್ರೀಲಂಕಾ ತವರಿನಲ್ಲಿ ಟೀಂ್ ಇಂಡಿಯಾವನ್ನು ಸೋಲಿಸುವುದು ಸುಲಭವಲ್ಲ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ.
IND vs SL T20 ಒಟ್ಟಾರೆ ದಾಖಲೆಗಳು:
ಒಟ್ಟು ಪಂದ್ಯಗಳ ಸಂಖ್ಯೆ: 22
ಭಾರತ ಗೆದ್ದ ಪಂದ್ಯಗಳು: 14
ಶ್ರೀಲಂಕಾ ಗೆದ್ದ ಪಂದ್ಯಗಳು: 7
ಭಾರತದಲ್ಲಿ ಆಡಿದ ಪಂದ್ಯಗಳು: 11 (IND 8, SL 2)
SL ವಿರುದ್ಧ IND ಸರಾಸರಿ ಸ್ಕೋರ್: 159
IND ವಿರುದ್ಧ SL ಸರಾಸರಿ ಸ್ಕೋರ್: 141
ಶ್ರೀಲಂಕಾ ವಿರುದ್ದ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸಮನ್: ರೋಹಿತ್ ಶರ್ಮಾ- 289 ರನ್
ಭಾರತದ ವಿರುದ್ದ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸಮನ್: ದಸುನ್ ಶನಕ- 149 ರನ್
ಶ್ರೀಲಂಕಾ ವಿರುದ್ದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್: ಯುಜ್ವೇಂದ್ರ ಚಾಹಲ್- 15 ವಿಕೆಟ್ಗಳು
ಭಾರತದ ವಿರುದ್ದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್: ದುಷ್ಮಂತ ಚಮೀರ- 14 ವಿಕೆಟ್ಗಳು
ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ:
ಫೆಬ್ರವರಿ 24 – ಮೊದಲ ಟಿ20, ಲಕ್ನೋ
ಫೆ. 26 – 2ನೇ ಟಿ20, ಧರ್ಮಶಾಲಾ
ಫೆ.27 – 3ನೇ ಟಿ20, ಧರ್ಮಶಾಲಾ
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:
ಮಾರ್ಚ್ 4-8 – ಮೊದಲ ಟೆಸ್ಟ್, ಮೊಹಾಲಿ
ಮಾರ್ಚ್ 12-16 – 2ನೇ ಟೆಸ್ಟ್, ಬೆಂಗಳೂರು (ಹಗಲು-ರಾತ್ರಿ)
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
ಇದನ್ನೂ ಓದಿ: Dewald Brevis: ಐಪಿಎಲ್ನಲ್ಲಿ ಹರಾಜಾದ ಬಳಿಕ ಬೇಬಿ ಎಬಿ ಫುಲ್ ಫ್ಲಾಪ್..!
(IND vs SL T20 Head to Head Records)