IND vs SL: ಕ್ರೀಡಾಂಗಣದಲ್ಲಿ ಕೊಹ್ಲಿಯ 100 ನೇ ಟೆಸ್ಟ್ ಮ್ಯಾಚ್​ ನೋಡಲು ಪ್ರೇಕ್ಷಕರಿಗಿಲ್ಲ ಅವಕಾಶ! ಬಿಸಿಸಿಐ ನಿರ್ಧಾರ

| Updated By: ಪೃಥ್ವಿಶಂಕರ

Updated on: Feb 26, 2022 | 5:06 PM

Virat Kohli: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ 100 ನೇ ಟೆಸ್ಟ್ ಪಂದ್ಯವಾಗಿದೆ. ಕೊಹ್ಲಿಯ ಈ ವಿಶೇಷ ಸಾಧನೆಗಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ, ಆದರೆ ಅದನ್ನು ಹತ್ತಿರದಿಂದ ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗುವ ಭರವಸೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಹಿನ್ನಡೆಯಾಗಿದೆ.

IND vs SL: ಕ್ರೀಡಾಂಗಣದಲ್ಲಿ ಕೊಹ್ಲಿಯ 100 ನೇ ಟೆಸ್ಟ್ ಮ್ಯಾಚ್​ ನೋಡಲು ಪ್ರೇಕ್ಷಕರಿಗಿಲ್ಲ ಅವಕಾಶ! ಬಿಸಿಸಿಐ ನಿರ್ಧಾರ
ಕೊಹ್ಲಿ
Follow us on

ಭಾರತ ಕ್ರಿಕೆಟ್ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ (India vs Sri Lanka) ನಿರತವಾಗಿದೆ. ಈ ಮೂರು ಪಂದ್ಯಗಳ ಸರಣಿಯ ನಂತರ, ಸಂಪೂರ್ಣ ಗಮನವು ಟೆಸ್ಟ್ ಸರಣಿಯ ಮೇಲೆ ಇರುತ್ತದೆ. ಉಭಯ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 4 ರಿಂದ ಆರಂಭವಾಗಲಿದೆ. ಈ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದ್ದು, ರೋಹಿತ್ ಶರ್ಮಾ (Rohit Sharma) ಅವರ ಟೆಸ್ಟ್ ನಾಯಕತ್ವದ ಮೊದಲ ಪಂದ್ಯವಾಗಲಿದೆ. ಆದರೆ ಈ ಸರಣಿಯ ಮೊದಲ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲಾಗುವುದು, ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್, ಇದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ 100 ನೇ ಟೆಸ್ಟ್ ಪಂದ್ಯವಾಗಿದೆ (Virat Kohli’s 100th Test Match). ಕೊಹ್ಲಿಯ ಈ ವಿಶೇಷ ಸಾಧನೆಗಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ, ಆದರೆ ಅದನ್ನು ಹತ್ತಿರದಿಂದ ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗುವ ಭರವಸೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಹಿನ್ನಡೆಯಾಗಿದೆ.

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಾಗುತ್ತಿದೆ. ಆದರೆ ಪ್ರೇಕ್ಷಕರಿಗೆ ಇನ್ನೂ ಮೈದಾನದೊಳಕ್ಕೆ ಪೂರ್ಣ ಪ್ರಮಾಣದ ಅವಕಾಶವಿಲ್ಲ. ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಪಂದ್ಯಗಳಲ್ಲಿ ಪ್ರೇಕ್ಷಕರ ಪ್ರವೇಶವಿದ್ದರೂ ಶ್ರೀಲಂಕಾ ಸರಣಿಯಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯುತ್ತಿದ್ದು, ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೂ ಅದೇ ಟ್ರೆಂಡ್ ಮುಂದುವರೆಯಲಿದೆ.

ಬಿಸಿಸಿಐ ಆದೇಶದ ಮೇರೆಗೆ ಪ್ರವೇಶ ನಿಷೇಧ

ಬಿಸಿಸಿಐ ಆದೇಶದ ಬಳಿಕ ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುವುದು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಸ್ಪಷ್ಟಪಡಿಸಿದೆ. ಕೊಹ್ಲಿ ಮತ್ತು ಟೀಂ ಇಂಡಿಯಾದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿರುವ ಈ ಮಾಹಿತಿಯನ್ನು ವಿವರಿಸಿದ ಪಿಸಿಎ ಖಜಾಂಚಿ ಆರ್‌ಪಿ ಸಿಂಗ್ಲಾ ಅವರು ಸುದ್ದಿ ಸಂಸ್ಥೆ ಪಿಟಿಐಗೆ, “ಹೌದು, ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಮಾರ್ಗಸೂಚಿಗಳ ಪ್ರಕಾರ ಟೆಸ್ಟ್ ಪಂದ್ಯಗಳಿಗೆ ಕರ್ತವ್ಯದಲ್ಲಿರುವವರನ್ನು ಹೊರತುಪಡಿಸಿ, ಸಾಮಾನ್ಯ ಪ್ರೇಕ್ಷಕರಿಗೆ ಅನುಮತಿಸಿಲ್ಲ ಎಂದು ಹೇಳಿಕೊಂಡಿದೆ.

ಈ ನಿರ್ಧಾರಕ್ಕೆ ಕಾರಣವೆಂದರೆ ಮೊಹಾಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳೇ ಕಾರಣವಾಗಿವೆ.ಮೊಹಾಲಿ ಮತ್ತು ಸುತ್ತಮುತ್ತ ಕೋವಿಡ್ -19 ಪ್ರಕರಣಗಳು ಮುಂಚೂಣಿಗೆ ಬರುತ್ತಿವೆ, ಆದ್ದರಿಂದ ನಾವೆಲ್ಲರೂ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವುದು ಉತ್ತಮ. ಸುಮಾರು ಮೂರು ವರ್ಷಗಳ ನಂತರ ಮೊಹಾಲಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಂಡಿತ ಎಂದು ಸಿಂಗ್ಲಾ ತಿಳಿಸಿದ್ದಾರೆ.

ಕೊಹ್ಲಿಗೆ ವಿಶೇಷ ಗೌರವ

ಕೊರೊನಾ ಪ್ರಕರಣಗಳ ಹೊರತಾಗಿ, ಹೆಚ್ಚಿನ ಭಾರತೀಯ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳಿಗೆ ಎರಡನೇ ಟೆಸ್ಟ್ ಮುಗಿದ ನಂತರ ‘ಬಬಲ್ ಟು ಬಬಲ್ ಟ್ರಾನ್ಸ್‌ಫರ್’ ಮೂಲಕ ಸೇರಿಕೊಳ್ಳುತ್ತಾರೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಕೊಹ್ಲಿಯ ಶ್ರೇಷ್ಠ ವೃತ್ತಿಜೀವನದ ಈ ಶ್ರೇಷ್ಠ ಸಾಧನೆಯ ಸಂದರ್ಭವನ್ನು ಆಚರಿಸಲು ಪಿಸಿಎ ಕ್ರೀಡಾಂಗಣದಾದ್ಯಂತ ದೊಡ್ಡ ಜಾಹೀರಾತು ಫಲಕಗಳನ್ನು ಹಾಕುತ್ತಿದೆ ಎಂದು ಸಿಂಗ್ಲಾ ಹೇಳಿದ್ದಾರೆ. ಜೊತೆಗೆ ನಮ್ಮ ಪಿಸಿಎ ಅಪೆಕ್ಸ್ ಕೌನ್ಸಿಲ್ ವಿರಾಟ್ ಅವರನ್ನು ಗೌರವಿಸಲು ನಿರ್ಧರಿಸಿದೆ. ಬಿಸಿಸಿಐ ಸೂಚನೆಯಂತೆ ಪಂದ್ಯದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಿನಿಂದ ಮೊಹಾಲಿಗೆ 100ನೇ ಟೆಸ್ಟ್

ಇದಕ್ಕೂ ಮುನ್ನ, ಕಳೆದ 15 ವರ್ಷಗಳಿಂದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾಗಿರುವ ಬೆಂಗಳೂರಿನಲ್ಲಿ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದರೆ ಈ ಅವಕಾಶ ಕೈತಪ್ಪಿತು. ಕೊರೊನಾ ಸೋಂಕು ಮತ್ತು ಬಯೋ ಬಬಲ್ ಅನ್ನು ಗಮನದಲ್ಲಿಟ್ಟುಕೊಂಡು, ಸರಣಿಯ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು, ನಂತರ ಮೊದಲ ಟೆಸ್ಟ್ ಪಂದ್ಯವನ್ನು ಮೊಹಾಲಿಗೆ ಮತ್ತು ಎರಡನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿಗೆ ನಿಯೋಜಿಸಲಾಯಿತು.

ಇದನ್ನೂ ಓದಿ:IND vs SL: ಧರ್ಮಶಾಲಾದಲ್ಲಿ ಅಂಕಿಅಂಶಗಳೇ ಭಾರತಕ್ಕೆ ವಿಲನ್; ಶ್ರೀಲಂಕಾಗೆ ಗೆಲುವಿನ ಅವಕಾಶ!

Published On - 4:59 pm, Sat, 26 February 22