ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ( India vs West Indies ODI) ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಡುವ ಇಲೆವೆನ್‌ನಲ್ಲಿ ಬದಲಾವಣೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ತಮ್ಮ ನಾಯಕ ಕೀರನ್ ಪೊಲಾರ್ಡ್ ಇಲ್ಲದೆ ಆಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಕೋಲಸ್ ಪೂರನ್ ನಾಯಕತ್ವ ವಹಿಸಿದ್ದಾರೆ. ಮತ್ತೊಂದೆಡೆ ಭಾರತ ಕೆಎಲ್ ರಾಹುಲ್ (KL Rahul) ಅವರನ್ನು ಸೇರಿಸಿಕೊಂಡಿದ್ದು, ಇಶಾನ್ ಕಿಶನ್ ಅವರನ್ನು ಕೈಬಿಟ್ಟಿದೆ. ಕಳೆದ ಪಂದ್ಯದಲ್ಲಿ ರೋಹಿತ್ ಜೊತೆ ಕಿಶನ್ ಓಪನಿಂಗ್ ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಅಚ್ಚರಿಯಂತೆ ಪಂತ್ ಓಪನರ್ ಆಗಿದ್ದಾರೆ. ಇವರ ಹೊರತಾಗಿ ಆಡುವ XI ನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದಿದ್ದು ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಕೆಎಲ್ ರಾಹುಲ್ ಕಳೆದ ಎರಡು ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶಿಖರ್ ಧವನ್ ಫಿಟ್ ಆಗಿದ್ದರೂ ಅವರನ್ನು ಆಯ್ಕೆ ಮಾಡುವಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಆತುರ ತೋರಿಲ್ಲ. ಮೂರನೇ ಏಕದಿನದಲ್ಲಿ ಅವರನ್ನು ಪ್ರಯೋಗಿಸಬಹುದು ಎಂದು ತೋರುತ್ತಿದೆ. ಅದೇ ಹೊತ್ತಿಗೆ ಶ್ರೇಯಸ್ ಅಯ್ಯರ್ ಕೂಡ ಈಗ ಫಿಟ್ ಆಗಿದ್ದಾರೆ.
ಹೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ
ಭಾರತ ಎರಡನೇ ಏಕದಿನದ ಆಡುವ XI ನಲ್ಲಿ ದೀಪಕ್ ಹೂಡಾ ಅವರನ್ನು ಉಳಿಸಿಕೊಂಡಿದೆ. ಮೊದಲ ಏಕದಿನ ಪಂದ್ಯದಿಂದಲೇ ಅವರು ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರ ಆಟವೂ ಚೆನ್ನಾಗಿತ್ತು. ಅಲ್ಲದೆ ಬೌಲ್ ಮಾಡಬಲ್ಲರು. ಬಹುಶಃ ಇದೇ ಕಾರಣಕ್ಕೆ ಇಶಾನ್ ನಿರ್ಗಮಿಸಲು ಮತ್ತು ದೀಪಕ್ ಹೂಡಾ ತಂಡದಲ್ಲಿ ಉಳಿಯಲು ಕಾರಣವಿರಬಹುದು. ಇನ್ನುಳಿದವರು ಮೊದಲ ಏಕದಿನ ಪಂದ್ಯದಂತೆಯೇ ಇದ್ದಾರೆ. ಪೇಸ್ ಬೌಲಿಂಗ್ ಜವಾಬ್ದಾರಿ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಮೇಲಿದೆ. ಅದೇ ಸಮಯದಲ್ಲಿ, ಸ್ಪಿನ್ ಜವಾಬ್ದಾರಿಯು ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಾಲ್ ಮೇಲಿರುತ್ತದೆ.
ವೆಸ್ಟ್ ಇಂಡೀಸ್ ತಂಡದಿಂದ ಪೊಲಾರ್ಡ್ ಔಟ್
ಅದೇ ಸಮಯದಲ್ಲಿ, ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುತ್ತಿಲ್ಲ. ಅವರಿಗೆ ಗಾಯವಾಗಿದ್ದು ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಓಡಿನ್ ಸ್ಮಿತ್ ಆಯ್ಕೆಯಾಗಿದ್ದಾರೆ. ಪೊಲಾರ್ಡ್ ಬದಲಿಗೆ ನಿಕೋಲಸ್ ಪೂರನ್ ನಾಯಕರಾಗಿದ್ದಾರೆ. ಟಾಸ್ ಗೆದ್ದ ಬಳಿಕ ಇಬ್ಬನಿಯ ಕಾರಣ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ ಎಂದು ಪೂರನ್ ಹೇಳಿದರು.
ಭಾರತದ ಆಡುವ XI ಇಂತಿದೆ-
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್ ಮತ್ತು ಪ್ರಸಿದ್ಧ್ ಕೃಷ್ಣ.
ವೆಸ್ಟ್ ಇಂಡೀಸ್ನ ಆಡುವ XI ಇಂತಿದೆ-
ಶೇ ಹೋಪ್, ಬ್ರೆಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶರ್ಮಾ ಬ್ರೂಕ್ಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಓಡಿನ್ ಸ್ಮಿತ್, ಫ್ಯಾಬಿಯನ್ ಅಲೆನ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್.