IPL: ಯುವರಾಜ್ ಸಿಂಗ್ ಖರೀದಿಗೆ ನಡೆದಿತ್ತು ಒಳಜಗಳ..!
Yuvraj Singh: ಐಪಿಎಲ್‌ನಲ್ಲಿ ಯುವರಾಜ್ ಸಿಂಗ್ ಒಟ್ಟು 132 ಪಂದ್ಯಗಳನ್ನು ಆಡಿದ್ದು, 2,750 ರನ್ ಗಳಿಸಿ 36 ವಿಕೆಟ್ ಪಡೆದಿದ್ದಾರೆ. ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ನೊಂದಿಗೆ IPL ಪಾದಾರ್ಪಣೆ ಮಾಡಿದ್ದರು.
ಐಪಿಎಲ್ 2022 ರ ಮೆಗಾ ಹರಾಜಿನ ಸಿದ್ಧತೆಗಳು ಭರದಿಂದ ಸಾಗಿವೆ . ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮೆಗಾ ಹರಾಜು ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ಒಟ್ಟು 590 ಆಟಗಾರರಿದ್ದು, ಇವರಲ್ಲಿ ಯಾರು ಬಿಕರಿಯಾಗಲಿದ್ದಾರೆ, ಯಾರು ಉಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಐಪಿಎಲ್ ಹರಾಜು ಯಾವಾಗಲೂ ಆಸಕ್ತಿದಾಯಕ ವಿಷಯ. ಏಕೆಂದರೆ ಹರಾಜಿನಲ್ಲಿ ಅನಿರೀಕ್ಷಿತವಾಗಿ ಕೆಲ ಆಟಗಾರರಿಗೆ ಕೋಟಿ ಮೊತ್ತ ಸಿಕ್ಕರೆ, ಇನ್ನು ಕೆಲ ಆಟಗಾರರು ಕಡಿಮೆ ಮೊತ್ತಕ್ಕೆ ಬಿಡ್ ಆಗಿ ಅಚ್ಚರಿ ಮೂಡಿಸುತ್ತಾರೆ. ಇಂತಹ ಅಚ್ಚರಿಗಳು ಹರಾಜು ನಡೆಸುವ ವ್ಯಕ್ತಿಗಳಿಗೂ ಇರುತ್ತೆ. ಅದರಲ್ಲೂ 2014 ರ ಹರಾಜಿನಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ ಅಂದು ಹರಾಜು ಆಯೋಜಿಸಿದ ರಿಚರ್ಡ್ ಮೆಡ್ಲಿ.
ಅದು 2014 ರ ಮೆಗಾ ಹರಾಜು. ಹರಾಜು ಪಟ್ಟಿಯಲ್ಲಿದ್ದ ಯುವರಾಜ್ ಸಿಂಗ್ಗೆ ಬಿಡ್ಡಿಂಗ್ ನಡೆಯುತ್ತಿತ್ತು. ಯುವಿ ಖರೀದಿಗಾಗಿ ಆರ್‌ಸಿಬಿ ಕಣ್ಣಿಟ್ಟಿತ್ತು. ಯುವರಾಜ್ ಸಿಂಗ್ ಖರೀದಿಗಾಗಿ ಆರ್‌ಸಿಬಿ 10 ಕೋಟಿ ರೂ.ವರೆಗೂ ಹರಾಜು ಕೂಗಿತು. ಆದರೆ ಈ ಬಿಡ್‌ಗೆ ಮೆಡ್ಲಿ ಅಂತಿಮ ಮುದ್ರೆ ಹಾಕಲು ಮುಂದಾದೆ. ನಾನು ಬಿಡ್ ಅಂತಿಮ ಎಂದು ಘೋಷಿಸಲು ಕೋಣೆಯ ಸುತ್ತಲೂ ನೋಡಿದೆ. ಯಾರಿಂದಲೂ ಯಾವುದೇ ಬಿಡ್ ಕಂಡುಬಂದಿಲ್ಲ. ಇನ್ನೇನು ಸುತ್ತಿಗೆಯ ಮೂಲಕ ಹರಾಜು ಫೈನಲ್ ಮಾಡಲು ಮುಂದಾಗುತ್ತಿದ್ದಂತೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಿಡ್ ಮಾಡಲು ಮುಂದಾಯಿತು. ಬಿಡ್ ಹೆಚ್ಚಾಗಿದ್ದರಿಂದ ಮೆಡ್ಲಿ KKR ಗೆ ಬಿಡ್ ಮಾಡಬೇಕಾಯಿತು. ಇದರಿಂದ ಆರ್‌ಸಿಬಿ ಮಾಲೀಕರಾಗಿದ್ದ ವಿಜಯ್ ಮಲ್ಯ ಕೋಪಗೊಂಡರು. ಹರಾಜು ಫೈನಲ್ ಮಾಡಲು ಸುತ್ತಿಗೆ ಮೂಲಕ ಘೋಷಿಸುವಾಗ ಮತ್ತೆ ಬಿಡ್ಡಿಂಗ್ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಗೊಂದಲ ಏರ್ಪಟ್ಟಿತ್ತು. ಅದಾದ ಬಳಿಕ ಹರಾಜನ್ನು ಮರುಪ್ರಾರಂಭಿಸಲಾಯಿತು. ಆದರೆ ಹರಾಜನ್ನು ಮರುಪ್ರಾರಂಭಿಸುವ ಮುನ್ನ ಈ ಆಟಗಾರ ನನ್ನವ ಎಂದು ವಿಜಯ್ ಮಲ್ಯ ಜೋರಾಗಿ ಕೂಗಿದ್ದರು. ಅದರಂತೆ ಯುವರಾಜ್ ಸಿಂಗ್ ಖರೀದಿಗಾಗಿ ಆರ್‌ಸಿಬಿ ಭರ್ಜರಿ ಪೈಪೋಟಿ ನಡೆಸಿದ ಅಂತಿಮವಾಗಿ 14 ಕೋಟಿಗೆ ಖರೀದಿಸಿತು.
ಯುವರಾಜ್ ಸಿಂಗ್ ಅವರ ವೃತ್ತಿಜೀವನ: ಐಪಿಎಲ್‌ನಲ್ಲಿ ಯುವರಾಜ್ ಸಿಂಗ್ ಒಟ್ಟು 132 ಪಂದ್ಯಗಳನ್ನು ಆಡಿದ್ದು, 2,750 ರನ್ ಗಳಿಸಿ 36 ವಿಕೆಟ್ ಪಡೆದಿದ್ದಾರೆ. ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ನೊಂದಿಗೆ IPL ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಅನೇಕ ಇತರ ಫ್ರಾಂಚೈಸಿಗಳ ಪರ ಕೂಡ ಆಡಿದರು. 2014 ರಲ್ಲಿ ಆರ್‌ಸಿಬಿಯಲ್ಲಿ 14 ಕೋಟಿಗೆ ಖರೀದಿಸಲ್ಪಟ್ಟ ಯುವರಾಜ್, ಆ ಸೀಸನ್ನಲ್ಲಿ 14 ಪಂದ್ಯಗಳಲ್ಲಿ 376 ರನ್ ಗಳಿಸಿದ್ದರು. ಇದಾದ ಬಳಿಕ 2015ರಲ್ಲಿ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ 16 ಕೋಟಿ ರೂ.ಗೆ ಖರೀದಿಸಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡ ಯುವಿ ಆ ಮೂಲಕ ಐಪಿಎಲ್ಗೆ ವಿದಾಯ ಹೇಳಿದ್ದರು.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(Ex-auctioneer Recalls IPL Bidding Controversy Over Yuvraj Singh)