ವೆಸ್ಟ್ ಇಂಡೀಸ್ ಸರಣಿಗಾಗಿ ಟಿ20 ತಂಡದಲ್ಲಿ ಕೆಎಲ್ ರಾಹುಲ್ (KL Rahul) ಬದಲಿಗೆ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samso) ಸ್ಥಾನ ಪಡೆದಿದ್ದಾರೆ. ರಾಹುಲ್ ಅವರನ್ನು ಈ ಹಿಂದೆ ತಂಡದಲ್ಲಿ ಹೆಸರಿಸಲಾಗಿತ್ತು. ಆದರೆ ಟಿ20ಐ ಸರಣಿಯಲ್ಲಿ ಅವರ ಭಾಗವಹಿಸುವಿಕೆಯು ಅವರ ಫಿಟ್‌ನೆಸ್ ಮೇಲೆ ಅವಲಂಬಿತವಾಗಿತ್ತು. ರಾಹುಲ್ ಕಳೆದ ವಾರ ಕೊರೊನಾ ಸೋಂಕಿಗೆ ಒಳಗಾಗಿದ್ದು, BCCI ವೈದ್ಯಕೀಯ ತಂಡವು ವಿಶ್ರಾಂತಿ ಪಡೆಯಲು ಸಲಹೆ ನೀಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ODI ಸರಣಿಯಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೊತೆಗೆ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು.
NEWS ? – Sanju Samson replaces KL Rahul in T20I squad.
ಇದನ್ನೂ ಓದಿMore details ? #WIvIND | #TeamIndia https://t.co/4LVD8rGTlE
— BCCI (@BCCI) July 29, 2022
5 ಟಿ20 ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೊಯಿ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸಂಜು ಟಿ20 ವೃತ್ತಿ ಬದುಕು
ಸ್ಯಾಮ್ಸನ್, 2015 ರಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ್ದು, ಅಂದಿನಿಂದ ಇದುವರೆಗೆ 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು 13 ಇನ್ನಿಂಗ್ಸ್‌ಗಳಿಂದ 19.30 ಸರಾಸರಿಯಲ್ಲಿ 251 ರನ್ ಗಳಿಸಿದ್ದಾರೆ. ಇತ್ತೀಚೆಗೆ ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಎರಡನೇ T20 ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಅರ್ಧಶತಕವನ್ನು ಬಾರಿಸಿದ್ದರು. ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ಜೊತೆಗೆ, ದೀಪಕ್ ಹೂಡಾ ಅವರ ಶತಕದೊಂದಿಗೆ ಭಾರತ ಈ ಪಂದ್ಯದಲ್ಲಿ 4 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.
ವೆಸ್ಟ್ ಇಂಡೀಸ್ ODI ಸರಣಿಯಲ್ಲಿ ಸ್ಯಾಮ್ಸನ್ ಅದೇ ಫಾರ್ಮ್ ಅನ್ನು ಪ್ರದರ್ಶಿಸಿದರು, ಆತಿಥೇಯರ ವಿರುದ್ಧ ಭಾರತ ಗೆದ್ದುಕೊಂಡ ಸರಣಿಯ ಎರಡನೇ ಪಂದ್ಯದಲ್ಲಿ ಸಂಜು 54 ರನ್ ಗಳಿಸಿದರು. ಈ ಮೂಲಕ ಸಂಜು ಏಕದಿನ ಕ್ರಿಕೆಟ್ನಲ್ಲೂ ತಮ್ಮ ಚೊಚ್ಚಲ ಅರ್ಧಶತಕ ಸಿಡಿಸಿದ್ದರು.
Published On - 5:39 pm, Fri, 29 July 22