Breaking News: 2025 ರ ಮಹಿಳಾ ವಿಶ್ವಕಪ್​ಗೆ ಭಾರತ ಆತಿಥ್ಯ ! ಈ ದೇಶಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್

ICC Women's World Cup: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2024 ಮತ್ತು 2027 ರ ನಡುವೆ ನಡೆಯುವ ನಾಲ್ಕು ಮಹಿಳಾ ವಿಶ್ವಕಪ್​ಗಳ ಬಗ್ಗೆ ಘೋಷಣೆ ಮಾಡಿದ್ದು, 2025 ರ ಮಹಿಳಾ ODI ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.

Breaking News: 2025 ರ ಮಹಿಳಾ ವಿಶ್ವಕಪ್​ಗೆ ಭಾರತ ಆತಿಥ್ಯ ! ಈ ದೇಶಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್
ಭಾರತೀಯ ಮಹಿಳಾ ಕ್ರಿಕೆಟ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jul 26, 2022 | 10:51 PM

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (International Cricket Council) 2024 ರಿಂದ 2027 ರ ನಡುವೆ ನಡೆಯುವ ನಾಲ್ಕು ಮಹಿಳಾ ವಿಶ್ವಕಪ್​ಗಳ ಬಗ್ಗೆ ಘೋಷಣೆ ಮಾಡಿದ್ದು, 2025 ರ ಮಹಿಳಾ ODI ವಿಶ್ವಕಪ್ (Women’s ODI World Cup) ಭಾರತದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ICC ಈ ಕಾರ್ಯಕ್ರಮವನ್ನು ಅನುಮೋದಿಸಿದೆ. ಇದರ ಅಡಿಯಲ್ಲಿ, ಎರಡು ಟಿ20 ವಿಶ್ವಕಪ್ (T20 World Cup), ಒಂದು ಏಕದಿನ ವಿಶ್ವಕಪ್ ಮತ್ತು ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ. ಮಹಿಳಾ ಚಾಂಪಿಯನ್ಸ್ ಟ್ರೋಫಿ ಟಿ20 ಮಾದರಿಯಲ್ಲಿ ನಡೆಯಲಿದ್ದು, 2027ರಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಐಸಿಸಿಯ ಇತ್ತೀಚಿನ ಪ್ರಕಟಣೆಯ ಪ್ರಕಾರ, ಭಾರತ ಉಪಖಂಡದಲ್ಲಿಯೇ ಮೂರು ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು. ಭಾರತದ ಮಟ್ಟಿಗೆ ಹೇಳುವುದಾದರೆ, BCCI 2025 ರಲ್ಲಿ ಮಹಿಳಾ ODI ವಿಶ್ವಕಪ್ ಅನ್ನು ಆಯೋಜಿಸುತ್ತದೆ.

ಇದನ್ನೂ ಓದಿ
Image
IND vs WI: ಟಿ20 ಸರಣಿಗೆ ಟ್ರೆನಿಡಾಡ್ ತಲುಪಿದ ರೋಹಿತ್ ಪಡೆ; ಕನ್ನಡಿಗ ರಾಹುಲ್ ಮಾತ್ರ ನಾಪತ್ತೆ!
Image
5 ಬೌಂಡರಿ, 9 ಸಿಕ್ಸರ್.. ಟಿ20 ಕ್ರಿಕೆಟ್​ನಲ್ಲಿ ದಾಖಲೆಯ ಶತಕ ಸಿಡಿಸಿದ 18ರ ಹರೆಯದ ಬ್ಯಾಟರ್! ಆದರೆ..?
Image
ಕೊನೆಯ ಓವರ್​ನಲ್ಲಿ 26 ರನ್ ಬಾರಿಸಿ ತಂಡಕ್ಕೆ ಅದ್ಭುತ ಗೆಲುವು ತಂದಿತ್ತ ನಂ.1 ಟಿ20 ಬೌಲರ್..! ವಿಡಿಯೋ ನೋಡಿ

9 ವರ್ಷಗಳ ನಂತರ ಭಾರತ ಆತಿಥ್ಯ ವಹಿಸುತ್ತಿದೆ

ಇದು ಭಾರತದಲ್ಲಿ ಐಸಿಸಿ ಮಹಿಳೆಯರ ವಿಭಾಗದ ಐದನೇ ಪಂದ್ಯಾವಳಿಯಾಗಿದೆ. ಭಾರತ ಇದುವರೆಗೆ 3 ಏಕದಿನ ವಿಶ್ವಕಪ್ ಮತ್ತು ಒಂದು ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ಇದರೊಂದಿಗೆ 9 ವರ್ಷಗಳ ಬಳಿಕ ಮಹಿಳೆಯರ ಐಸಿಸಿ ಟೂರ್ನಿ ಭಾರತಕ್ಕೆ ಮರಳಲಿದೆ. ಭಾರತ ಕೊನೆಯ ಬಾರಿಗೆ 2016 ರಲ್ಲಿ ಟಿ 20 ವಿಶ್ವಕಪ್ ಅನ್ನು ಆಯೋಜಿಸಿತ್ತು. ಅದೇ ಸಮಯದಲ್ಲಿ, ಕೊನೆಯ ಬಾರಿಗೆ 2013 ರಲ್ಲಿ ಭಾರತದಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ನಡೆದಿತ್ತು. ಐಸಿಸಿ ನಿರ್ಧರಿಸಿದ ವೇಳಾಪಟ್ಟಿಯ ಪ್ರಕಾರ, 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಇದರಲ್ಲಿ ಫೈನಲ್ ಸೇರಿದಂತೆ 31 ಪಂದ್ಯಗಳು ನಡೆಯಲಿವೆ.

ಬಾಂಗ್ಲಾದೇಶ-ಇಂಗ್ಲೆಂಡ್‌ನಲ್ಲಿ ಟಿ20 ವಿಶ್ವಕಪ್

ಇತರ ಜಾಗತಿಕ ಪಂದ್ಯಾವಳಿಗಳ ಕುರಿತು ಮಾತನಾಡುವುದಾದರೆ, 2024 ರ ಸೀಸನ್​ T20 ವಿಶ್ವಕಪ್‌ನಿಂದ ಪ್ರಾರಂಭವಾಗುತ್ತದೆ. ಈ ಟೂರ್ನಿ ಬಾಂಗ್ಲಾದೇಶದಲ್ಲಿ ನಡೆಯಲಿದ್ದು, 10 ತಂಡಗಳ ನಡುವೆ 23 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯಲಿದೆ. ಇದರ ನಂತರ 2025 ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ, ನಂತರ T20 ವಿಶ್ವಕಪ್ ನಡೆಯಲಿದೆ. ಈ ಬಾರಿ 2026ರ ಟಿ20 ವಿಶ್ವಕಪ್ ಇಂಗ್ಲೆಂಡ್​ನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ 12 ತಂಡಗಳ ನಡುವೆ 33 ಪಂದ್ಯಗಳು ನಡೆಯಲಿವೆ.

ಹೊಸ ಪಂದ್ಯಾವಳಿಯೊಂದಿಗೆ ಮುಕ್ತಾಯ

ಈ ವೀಲ್​ ಹೊಸ ಪಂದ್ಯಾವಳಿಯೊಂದಿಗೆ ಕೊನೆಗೊಳ್ಳುತ್ತದೆ. ICC 2027 ರಲ್ಲಿ ಮೊದಲ ಬಾರಿಗೆ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತದೆ. ಆದಾಗ್ಯೂ, ಪುರುಷರ ಚಾಂಪಿಯನ್ಸ್ ಟ್ರೋಫಿಗಿಂತ ಭಿನ್ನವಾಗಿ, ಈ ಪಂದ್ಯಾವಳಿಯನ್ನು T20 ಮಾದರಿಯಲ್ಲಿ ಆಡಲಾಗುತ್ತದೆ. ಇದರಲ್ಲಿ 6 ತಂಡಗಳ ನಡುವೆ 16 ಪಂದ್ಯಗಳನ್ನು ಆಡಲಾಗುತ್ತಿದ್ದು, ಈ ಪಂದ್ಯಾವಳಿಯು ಫೆಬ್ರವರಿ 2027 ರಲ್ಲಿ ನಡೆಯಲಿದೆ. ಆದಾಗ್ಯೂ, ಶ್ರೀಲಂಕಾ ಸ್ವತಃ ಪಂದ್ಯಾವಳಿಗೆ ಅರ್ಹತೆ ಪಡೆಯಲು ಸಾಧ್ಯವಾದರೆ ಮಾತ್ರ ಇದನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.

Published On - 10:19 pm, Tue, 26 July 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ