5 ಬೌಂಡರಿ, 9 ಸಿಕ್ಸರ್.. ಟಿ20 ಕ್ರಿಕೆಟ್​ನಲ್ಲಿ ದಾಖಲೆಯ ಶತಕ ಸಿಡಿಸಿದ 18ರ ಹರೆಯದ ಬ್ಯಾಟರ್! ಆದರೆ..?

ಗುಸ್ತಾವ್ ಸ್ವಿಟ್ಜರ್ಲೆಂಡ್ ವಿರುದ್ಧ 61 ಎಸೆತಗಳಲ್ಲಿ 109 ರನ್ ಗಳಿಸಿದರು, ಇದರಲ್ಲಿ ಅವರ ಬ್ಯಾಟ್ 9 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿತು. ಈ ವೇಳೆ ಗುಸ್ತಾವ್ ಅವರ ಸ್ಟ್ರೈಕ್ ರೇಟ್ 178 ಕ್ಕಿಂತ ಹೆಚ್ಚಿತ್ತು.

5 ಬೌಂಡರಿ, 9 ಸಿಕ್ಸರ್.. ಟಿ20 ಕ್ರಿಕೆಟ್​ನಲ್ಲಿ ದಾಖಲೆಯ ಶತಕ ಸಿಡಿಸಿದ 18ರ ಹರೆಯದ ಬ್ಯಾಟರ್! ಆದರೆ..?
ಗುಸ್ತಾವ್
TV9kannada Web Team

| Edited By: pruthvi Shankar

Jul 26, 2022 | 5:02 PM

ಕ್ರಿಕೆಟ್‌ನಲ್ಲಿ ಒಂದು ಮಾತಿದೆ. ಅದೆನೆಂದರೆ ದಾಖಲೆಗಳನ್ನು ಮಾಡಿದ ಕೂಡಲೇ ಮುರಿಯಬೇಕು. 18 ವರ್ಷದ ಫ್ರೆಂಚ್ ಬ್ಯಾಟ್ಸ್‌ಮನ್ ಗುಸ್ತಾವ್ ಮ್ಯಾಕನ್ ಈಗ ಈ ಮಾತು ನಿಜ ಎಂದು ಸಾಬೀತುಪಡಿಸಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್‌ ಹೆಸರಿನಲ್ಲಿ ಅತಿ ಕಿರಿಯ ಟಿ20 ಅಂತಾರಾಷ್ಟ್ರೀಯ (T20 International) ಶತಕದ ದಾಖಲೆ ನಿರ್ಮಾಣವಾಗಿದೆ. ಗುಸ್ತಾವ್ ಐಸಿಸಿ ಪುರುಷರ T20 ವಿಶ್ವಕಪ್ (T20 World Cup) ಉಪ-ಪ್ರಾದೇಶಿಕ ಯುರೋಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ಗುಸ್ತಾವ್ ಕೇವಲ 18 ವರ್ಷ, 280 ದಿನಗಳ ವಯಸ್ಸಿನಲ್ಲಿ ಟಿ20 ಶತಕ ಬಾರಿಸಿದ್ದಾರೆ.

ಜಜೈ ದಾಖಲೆ ಮುರಿದ ಗುಸ್ತಾವ್

ಈ ವಿಚಾರದಲ್ಲಿ ಫ್ರೆಂಚ್ ಬ್ಯಾಟ್ಸ್‌ಮನ್ ಗುಸ್ತಾವ್ ಅವರು ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ 20 ವರ್ಷ, 337 ದಿನಗಳಲ್ಲಿ ಶತಕ ಗಳಿಸಿದ್ದರು. ಜಜೈ 2019 ರಲ್ಲಿ ಈ ಸಾಧನೆ ಮಾಡಿದರು. ಆದರೆ, ಅವರ ದಾಖಲೆ 3 ವರ್ಷಗಳಲ್ಲಿ ಪುಡಿಪುಡಿಯಾಗಿದೆ. ಗುಸ್ತಾವ್ ಸ್ವಿಟ್ಜರ್ಲೆಂಡ್ ವಿರುದ್ಧ 61 ಎಸೆತಗಳಲ್ಲಿ 109 ರನ್ ಗಳಿಸಿದರು, ಇದರಲ್ಲಿ ಅವರ ಬ್ಯಾಟ್ 9 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿತು. ಈ ವೇಳೆ ಗುಸ್ತಾವ್ ಅವರ ಸ್ಟ್ರೈಕ್ ರೇಟ್ 178 ಕ್ಕಿಂತ ಹೆಚ್ಚಿತ್ತು. ಆದರೆ, ಅವರ ಶತಕದ ಹೊರತಾಗಿಯೂ ಫ್ರಾನ್ಸ್ ತಂಡ ಸೋಲನ್ನು ಎದುರಿಸಬೇಕಾಯಿತು.

View this post on Instagram

A post shared by ICC (@icc)

ಗುಸ್ತಾವ್ ಶತಕ, ಆದರೂ ಫ್ರಾನ್ಸ್ ತಂಡಕ್ಕೆ ಸೋಲು

ಗುಸ್ತಾವ್ ದಾಖಲೆಯ ಶತಕವನ್ನು ಗಳಿಸಿದರು ಆದರೆ ಅವರ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಗುಸ್ತಾವ್ ಶತಕದ ಹೊರತಾಗಿಯೂ ಫ್ರಾನ್ಸ್ ತಂಡ 20 ಓವರ್​ಗಳಲ್ಲಿ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತರವಾಗಿ ಸ್ವಿಟ್ಜರ್ಲೆಂಡ್ ಕೊನೆಯ ಎಸೆತದಲ್ಲಿ ಒಂದು ವಿಕೆಟ್‌ನಿಂದ ಜಯ ಸಾಧಿಸಿತು.

ಸ್ವಿಟ್ಜರ್ಲೆಂಡ್‌ಗೆ ರೋಚಕ ಗೆಲುವು

ಇದನ್ನೂ ಓದಿ

ಕೊನೆಯ ಓವರ್‌ನಲ್ಲಿ ಸ್ವಿಟ್ಜರ್ಲೆಂಡ್‌ಗೆ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಹೀಗಾಗಿ ಫ್ರೆಂಚ್ ತಂಡ ಪಂದ್ಯವನ್ನು ಸುಲಭವಾಗಿ ಗೆಲ್ಲುವಂತಿತ್ತು ಆದರೆ ಕೊನೆಯ ಮೂರು ಎಸೆತಗಳಲ್ಲಿ ಇಡೀ ಪಂದ್ಯದ ಪಲಿತಾಂಶವೇ ಬದಲಾಯಿತು. ಮೊದಲ ಮೂರು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದ ಸ್ವಿಸ್ ತಂಡದ ಬ್ಯಾಟ್ಸ್​ಮನ್ ಸಲೀಂ ನಾಲ್ಕನೇ ಎಸೆತದಲ್ಲಿ ಸಿಕ್ಸರ್, ಐದನೇ ಎಸೆತದಲ್ಲಿ ಡಬಲ್ ಹಾಗೂ ಆರನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಸ್ವಿಸ್ ತಂಡಕ್ಕೆ ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ಜವಬ್ದಾರಿಯನ್ನು ದಾಖಲೆಯ ಶತಕ ಸಿಡಿಸಿದ್ದ ಗುಸ್ತಾವ್ ಮೆಕಾನ್ ಹೊತ್ತಿದ್ದರು. ಆದರೆ ಬ್ಯಾಟಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಸ್ತಾವ್​ ಬೌಲಿಂಗ್​ನಲ್ಲಿ ತಂಡದ ಸೋಲನ್ನು ತಪ್ಪಿಸಲು ವಿಫಲರಾದರು. ಮೆಕಾನ್ ಅವರ ಕಳಪೆ ಬೌಲಿಂಗ್ ಅವರ ಶತಕದ ಅಬ್ಬರದ ಪ್ರದರ್ಶನವನ್ನು ಮರೆಮಾಚಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada