ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆಲ್ ರೌಂಡ್ ಆಟದ ಮುಂದೆ ವೆಸ್ಟ್ ಇಂಡೀಸ್ ತಂಡವು ಮುಗ್ಗರಿಸಿದೆ. ಅದರಂತೆ ಟೀಮ್ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಈ ಗೆಲುವಿಗೆ ಎಲ್ಲಾ ಆಟಗಾರರು ಕೊಡುಗೆ ನೀಡಿದ್ದಾರೆ. ಭಾರತದ ಸ್ಪಿನ್ನರ್‌ಗಳು ಚೆಂಡಿನೊಂದಿಗೆ ಕೊಡುಗೆ ನೀಡಿದರೆ, ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಆರಂಭವನ್ನು ಸೂರ್ಯಕುಮಾರ್ ಯಾದವ್ ಅಂತ್ಯಗೊಳಿಸಿದರು. ಸೂರ್ಯಕುಮಾರ್ ಯಾದವ್ – ದೀಪಕ್ ಹೂಡಾ ಜೊತೆಗೂಡಿ 5ನೇ ವಿಕೆಟ್‌ಗೆ 62 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ಆಡಿದರು.
ಈ ವೇಳೆ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡಂತೆ 34 ರನ್ ಬಾರಿಸಿದರು. ಈ ಇನ್ನಿಂಗ್ಸ್ನೊಂದಿಗೆ ಸೂರ್ಯಕುಮಾರ್ ಅವರ ಹೆಸರಿಗೆ ದಾಖಲೆಯೊಂದು ಸೇರ್ಪಡೆಯಾಗಿದೆ. ಇಂತಹ ಸಾಧನೆ ಮಾಡಿರುವುದು ಭಾರತದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಇದುವರೆಗೆ 5 ಪಂದ್ಯಗಳನ್ನಾಡಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ 5 ಇನ್ನಿಂಗ್ಸ್‌ಗಳಲ್ಲಿ 30 ಪ್ಲಸ್ ಗಳಿಸಿದ್ದಾರೆ. ಹೀಗೆ ಆಡಿದ ಮೊದಲ ಐದು ಇನಿಂಗ್ಸ್ನಲ್ಲಿ 30+ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಬರೆದಿದ್ದಾತೆ.
ಶ್ರೀಲಂಕಾ ವಿರುದ್ದದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಇದುವರೆಗೆ 5 ಇನ್ನಿಂಗ್ಸ್‌ಗಳಲ್ಲಿ 31*, 53, 40, 39 ಮತ್ತು 34* ರನ್ ಗಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಹಾಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ವಿಶ್ವದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಇದಕ್ಕೂ ಮುನ್ನ ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಫಖರ್ ಜಮಾನ್, ನೆದರ್‌ಲ್ಯಾಂಡ್‌ನ ರಿಯಾನ್ ಡಸ್ ಕೇಟ್ ಮತ್ತು ಆಸ್ಟ್ರೇಲಿಯಾದ ಟಾಮ್ ಕೂಪರ್ ಈ ದಾಖಲೆ ಬರೆದಿದ್ದರು. ಹಾಗೆಯೇ ಮೊದಲ ಐದು ಇನಿಂಗ್ಸ್ಗಳಲ್ಲಿ 30+ ರನ್ಗಳಿಸುವ ಮೂಲಕ ಸೂರ್ಯ ಕುಮಾರ್ ಯಾದವ್ ಭಾರತದ ಮಾಜಿ ಆರಂಭಿಕ ಆಟಗಾರ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನು ಮುರಿದಿದ್ದಾರೆ. ಸಿಧು ಸತತ 4 ಇನ್ನಿಂಗ್ಸ್‌ಗಳಲ್ಲಿ 30 ಪ್ಲಸ್ ರನ್ ಗಳಿಸಿದ್ದರು. ಇದೀಗ ಸೂರ್ಯಕುಮಾರ್ ಮೊದಲ 5 ಇನಿಂಗ್ಸ್ನಲ್ಲಿ 30+ ರನ್ ಬಾರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ: Yuzvendra Chahal: ವಿಕೆಟ್‌ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(IND vs WI: Suryakumar Yadav became the first Indian to score five 30+ scores first five ODI innings)