ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ವೈಟ್ವಾಷ್ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದ ಭಾರತ (IND vs WI T20) ಇದೀಗ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈಡನ್ ಗಾರ್ಡನ್ಸ್ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಬೌಲಿಂಗ್ನಲ್ಲಿ ರವಿ ಬಿಷ್ಟೋಯ್ ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ನೀಡಿದರು. ಬ್ಯಾಟಿಂಗ್ನಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಆಟವಾಡಿದರು. ಕೇವಲ 19 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ನೊಂದಿಗೆ 40 ರನ್ ಚಚ್ಚಿದರು. ಇವರ ಜೊತೆಯಿದ್ದ ಇಶಾನ್ ಕಿಶನ್ (Ishan Kishan) 42 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 35 ರನ್ ಗಳಿಸಿ ಮೊದಲ ವಿಕೆಟ್‌ಗೆ 64 ರನ್ಗಳ ಕಾಣಿಕೆ ನೀಡಿದರು.
ಆದರೆ, ಈ ಪಂದ್ಯದಲ್ಲಿ ಇಶಾನ್ ಕಿಶನ್ ಆಟ ನ್ಯಾಚುರಲ್ ಆಗಿ ಇರಲಿಲ್ಲ. ವಿಂಡೀಸ್ ಬೌಲರ್ಗಳನ್ನು ಎದುರಿಸಲು ಇವರು ಪರದಾಡದರು. ಸ್ಟ್ರೈಕ್ ರೊಟೇಟ್ ಮಾಡಲು ಕಷ್ಟಪಟ್ಟರು. ಇದೇ ಕಾರಣಕ್ಕೆ ನಾಯಕ ರೊಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಕಿಶನ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಶನ್ ಜೊತೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಕೆಲ ಟೆಕ್ನಿಕ್ ಹೇಳಿಕೊಟ್ಟಿದ್ದಾರೆ. ಸ್ಲೋ ವಿಕೆಟ್ ಇದ್ದ ಸಂದರ್ಭ ನೀವು ಆದಷ್ಟು ಸ್ಟ್ರೈಕ್ ರೊಟೇಟ್ ಮಾಡ್ತಾ ಇರಬೇಕು ಎಂದು ಕಿಶನ್ಗೆ ಹೇಳಿದ್ದಾರೆ.
HitMan Advice to Kishan ??#RohitSharma#INDvWI pic.twitter.com/IqSWmt0HYX
— ROHIT Trends TN⁴⁵ (@Ro_TNpage45) February 16, 2022
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲೂ ರೋಹಿತ್ ಕಿಶನ್ ಬಗ್ಗೆ ಮಾತನಾಡಿದರು. “ಸಾಕಷ್ಟು ಸಮಯದಿಂದ ನಾನು ಇಶಾನ್ ಕಿಶನ್ ಜೊತೆ ಚರ್ಚಿಸುತ್ತಿದ್ದೇನೆ. ಮುಂಬೈ ಇಂಡಿಯನ್ಸ್ನಲ್ಲಿರುವಾಗ ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ, ಅದು ಅವರ ಸ್ಥಾನವಲ್ಲ. ಆರಂಭಿಕನಾಗಿ ಅವರು ಯಶಸ್ಸು ಸಾಧಿಸುತ್ತಾರೆ. ಆಟಗಾರರು ಯಾವ ಸ್ಥಾನದಲ್ಲಿ ಆಡುತ್ತಾರೆ, ಅವರಿಗೆ ಯಾವ ಸ್ಥಾನ ಸೂಕ್ತ ಎಂಬುದನ್ನು ತಿಳಿಯುವುದು ಮುಖ್ಯ,” ಎಂದು ರೋಹಿತ್ ಹೇಳಿದರು.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಜೊತೆಗಿನ ಆರಂಭಿಕ ಸ್ಥಾನಕ್ಕೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಕೆಎಲ್ ರಾಹುಲ್ ಒಂದುಕಡೆಯಿದ್ದರೆ, ಅವರು ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಬೀಸಿ ಯಶಸ್ಸು ಕಂಡಿದ್ದಾರೆ. ಸದ್ಯ ಇಶಾನ್ ಕಿಶನ್ ಓಪನರ್ ಆಗಿ ಆಡುತ್ತಿದ್ದಾರೆ. ಆದರೆ, ಇವರ ಬ್ಯಾಟ್ನಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ಇತ್ತ ದೇಶೀ ಪ್ರತಿಭೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕಿಶನ್ ಮತ್ತೊಮ್ಮೆ ವೈಫಲ್ಯ ಕಂಡರೆ ಸ್ಥಾನ ಕಳೆದುಕೊಳ್ಳುವುದು ಖಚಿತ.
ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆರಿಬಿಯನ್ನರು ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯಿ (17ಕ್ಕೆ 2) ಮಾರಕ ದಾಳಿ ನಡುವೆಯೂ ನಿಕೋಲಸ್ ಪೂರನ್ (61 ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 157 ರನ್ ಗಳಿಸಿತು. ಬಳಿಕ ಭಾರತ ತಂಡ ನಾಯಕ ರೋಹಿತ್ ಶರ್ಮ (40 ರನ್, 19 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 162 ರನ್ ಬಾರಿಸಿ ಗೆಲುವು ನಗೆ ಬೀರಿತು.
Rohit Sharma: ರೋಚಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಹೊಗಳಿದ್ದು ಮಾತ್ರ ಈ ಒಬ್ಬ ಆಟಗಾರನನ್ನು
IND vs WI T20: ಟಿ20ಯಲ್ಲೂ ಭಾರತ ಶುಭಾರಂಭ: ರೋಹಿತ್ ನಾಯಕತ್ವದ ಗೆಲುವಿನ ಓಟ ಮುಂದುವರಿಕೆ