IND vs WI: ಮೊದಲು ತಂದೆ, ಈಗ ಮಗ; ಮೊದಲ ಟೆಸ್ಟ್​ನಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ..!

Virat Kohli: 12 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯಲ್ಲಿದ್ದಾರೆ.

IND vs WI: ಮೊದಲು ತಂದೆ, ಈಗ ಮಗ; ಮೊದಲ ಟೆಸ್ಟ್​ನಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ..!
ಸಚಿನ್- ಕೊಹ್ಲಿ, ಚಂದ್ರಪಾಲ್ ಹಾಗೂ ಅವರ ಮಗ
Follow us
ಪೃಥ್ವಿಶಂಕರ
|

Updated on:Jul 12, 2023 | 8:20 AM

ಡಬ್ಲ್ಯುಟಿಸಿ ಫೈನಲ್ (WTC Final) ಬಳಿಕ ಒಂದು ತಿಂಗಳ ವಿಶ್ರಾಂತಿಯಲ್ಲಿದ್ದ ಟೀಂ ಇಂಡಿಯಾ (Team India) ಇಂದಿನಿಂದ ಅಂದರೆ, ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ (India vs West Indies) ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆರಂಭಿಸಲಿದೆ. ಉಭಯ ದೇಶಗಳ ಮೊದಲ ಟೆಸ್ಟ್ ಪಂದ್ಯ ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆಯಲಿದೆ. ಬರೋಬ್ಬರಿ 12 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯಲ್ಲಿದ್ದಾರೆ. ಈ ದಾಖಲೆಯ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಈ ಹಿಂದೆ ನಿರ್ಮಿಸಿದ್ದ ದಾಖಲೆಯ ಪಟ್ಟಿಗೆ ತಾವು ಕೂಡ ಸೇರ್ಪಡೆಗೊಳ್ಳಲಿದ್ದಾರೆ.

ತಂದೆ ಮತ್ತು ಮಗನ ವಿರುದ್ಧ ಟೆಸ್ಟ್ ಆಡಿದ ಎರಡನೇ ಕ್ರಿಕೆಟಿಗ

12 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದಾಗ ವಿಂಡೀಸ್ ತಂಡದಲ್ಲಿ ಶಿವನಾರಾಯಣ್ ಚಂದ್ರಪಾಲ್ ಆಡಿದ್ದರು. ಟೀಂ ಇಂಡಿಯಾ ವಿರುದ್ಧದ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಶಿವನಾರಾಯಣ್ ಚಂದ್ರಪಾಲ್ ಎದುರು ಕಿಂಗ್ ಕೊಹ್ಲಿ ಪಂದ್ಯವನ್ನಾಡಿದ್ದರು. ಇದೀಗ ಅದೇ ಕೊಹ್ಲಿ ಬರೋಬ್ಬರಿ 12 ವರ್ಷಗಳ ನಂತರ ಶಿವನಾರಾಯಣ್ ಚಂದ್ರಪಾಲ್ ಅವರ ಮಗ ತೇಜ್​ನಾರಾಯಣ್ ಚಂದ್ರಪಾಲ್​ ವಿರುದ್ಧ ಆಡಲಿದ್ದಾರೆ. ಹೀಗಾಗಿ ಕೊಹ್ಲಿ, ತಂದೆ ಮತ್ತು ಮಗನ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡಿದ ಎರಡನೇ ಕ್ರಿಕೆಟಿಗ ಎಂಬ ದಾಖಲೆ ಬರೆಯಲ್ಲಿದ್ದಾರೆ.

IND vs WI: ಡೊಮಿನಿಕಾದಲ್ಲಿ ಟೀಂ ಇಂಡಿಯಾ; ಅಪರೂಪದ ಕ್ಷಣವನ್ನು ಸ್ಮರಿಸಿದ ಕಿಂಗ್ ಕೊಹ್ಲಿ

ಸಚಿನ್ ತೆಂಡೂಲ್ಕರ್​ ಹೆಸರಲ್ಲಿ ಈ ದಾಖಲೆ

ವಾಸ್ತವವಾಗಿ ವಿರಾಟ್ ಕೊಹ್ಲಿಗೂ ಮುನ್ನ ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಈ ವಿಶೇಷ ದಾಖಲೆ ಬರೆದಿದ್ದರು. ವಿರಾಟ್‌ಗಿಂತ ಮೊದಲು, ಸಚಿನ್ ಟೆಸ್ಟ್‌ನಲ್ಲಿ ತಂದೆ ಮತ್ತು ಮಗನ ವಿರುದ್ಧ ಆಡಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದರು. 1992 ರಲ್ಲಿ ಆಸ್ಟ್ರೇಲಿಯಾದ ಆಟಗಾರ ಜಿಯೋಫ್ ಮಾರ್ಷ್ ವಿರುದ್ಧ ಆಡಿದ್ದ ಸಚಿನ್, ಹತ್ತು ವರ್ಷಗಳ ನಂತರ ಅಂದರೆ 2011-12ರಲ್ಲಿ ಜಿಯೋಫ್ ಮಾರ್ಷ್ ಅವರ ಮಗ ಶಾನ್ ಮಾರ್ಷ್ ವಿರುದ್ಧ ಆಡಿದ್ದರು.

ತೇಜ್​ನಾರಾಯಣ್ ಟೆಸ್ಟ್ ವೃತ್ತಿ ಜೀವನ

27 ವರ್ಷದ ಎಡಗೈ ಬ್ಯಾಟ್ಸ್‌ಮನ್ ತೇಜ್​ನಾರಾಯಣ್ ಚಂದ್ರಪಾಲ್ ಈವರೆಗೆ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, ಆಡಿರುವ 11 ಇನ್ನಿಂಗ್ಸ್‌ಗಳಲ್ಲಿ 45.30 ಸರಾಸರಿಯಲ್ಲಿ ಒಟ್ಟು 453 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಟ ಅರ್ಧಶತಕ ಕೂಡ ಸೇರಿದೆ. ಆಡಿರುವ 6 ಟೆಸ್ಟ್‌ಗಳಲ್ಲಿ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿರುವ ತೇಜ್​ನಾರಾಯಣ್ ಚಂದ್ರಪಾಲ್ ಅವರ ಅತ್ಯಧಿಕರ ಸ್ಕೋರ್ 207 ರನ್ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:19 am, Wed, 12 July 23