MS Dhoni: ನನ್ನ ಪತ್ನಿಗೆ ತಮಿಳಿನ ಕೆಟ್ಟ ಪದಗಳು ಗೊತ್ತು ಎಂದ ಧೋನಿ..! ವಿಡಿಯೋ ನೋಡಿ
MS Dhoni: ‘ತಮಿಳಿನ ಒಂದೇ ಒಂದು ಕೆಟ್ಟ ಪದ ನನಗೆ ಗೊತ್ತಿಲ್ಲ. ಆದರೆ ನನ್ನ ಹೆಂಡತಿಗೆ ಗೊತ್ತು. ಆದರೆ ನನಗೆ ಬೇರೆ ಭಾಷೆಗಳಲ್ಲಿ ಕೆಟ್ಟ ಪದ ಗೊತ್ತಿದೆ ಎಂದು ಧೋನಿ ತಮಾಷದಾಯಕ ಉತ್ತರ ನೀಡಿದರು.
ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಆಳಿದ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ (MS Dhoni) ಇದೀಗ ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ. ಕ್ರಿಕೆಟ್ ಹೊರತಾಗಿ ಇತರ ಕ್ರೀಡೆಗಳಲ್ಲೂ ಹೆಚ್ಚಿನ ಆಸಕ್ತಿ ತೋರುವ ಧೋನಿಗೆ ಸಾವಯವ ಕೃಷಿಯ ಮೇಲೂ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಧೋನಿ 40 ಎಕರೆ ಕೃಷಿ ಭೂಮಿಯಲ್ಲಿ ನಾನಾ ತರಹದ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಇದೀಗ ಈ ಎಲ್ಲಾ ಕ್ಷೇತ್ರಗಳ ಹೊರತಾಗಿ ಸಿನಿಮಾ ಕ್ಷೇತ್ರಕ್ಕೂ ಕೈ ಹಾಕಿರುವ ಧೋನಿ, ಧೋನಿ ಎಂಟರ್ಟೇನ್ಮೆಂಟ್ (Dhoni Entertainment PVT LTD) ಸಂಸ್ಥೆಯಡಿಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಯ್ಡ್ (‘Lets Get Married)’ ಎಂಬ ತಮಿಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಫ್ಯಾಮಿಲಿ ಮನರಂಜನೆಯ ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದು, ಹರೀಶ್ ಕಲ್ಯಾಣ್ ಮತ್ತು ಇವಾನ ಅಭಿನಯಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುವ ಧೋನಿ, ಈ ಕಾರ್ಯಕ್ರಮದಲ್ಲಿ ಕೊಂಚ ಭಿನ್ನತೆ ತೋರಿದರು. ಅವುಗಳ ಒಂದಿಷ್ಟು ಝಲಕ್ ಇಲ್ಲಿದೆ.
ಹೊಸ ಅವತಾರದಲ್ಲಿ ಕೂಲ್ ಕ್ಯಾಪ್ಟನ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ವೃತ್ತಿ ಜೀವನದ ಆರಂಭದಲ್ಲಿ ಉದ್ದ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದ ಮಹೀ, ಆ ಬಳಿಕ ತನ್ನ ಕೇಶ ವಿನ್ಯಾಸವನ್ನು ಸಾಕಷ್ಟು ಬಾರಿ ಬದಲಿಸಿದ್ದಾರೆ. ಇದೀಗ ತನ್ನ ಲುಕ್ ಬದಲಿಸಿರುವ ಧೋನಿ, ವಿಭಿನ್ನ ರೀತಿಯಲ್ಲಿ ಕೂದಲು ಬಿಟ್ಟಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
MS Dhoni Birthday: 43 ಎಕರೆಯಲ್ಲಿ ಸಾವಯವ ಕೃಷಿ; ರೈತ ಧೋನಿಯ ವ್ಯವಸಾಯದ ಬದುಕು ಹೇಗಿದೆ ಗೊತ್ತಾ?
ನನ್ನ ಪತ್ನಿಗೆ ತಮಿಳಿನ ಕೆಟ್ಟ ಪದಗಳು ಗೊತ್ತು
ಇದೇ ಸಮಾರಂಭದಲ್ಲಿ ಮಾತನಾಡಿದ ಸಾಕ್ಷಿ ಧೋನಿ, ನನಗೆ ತಮಿಳಿನಲ್ಲಿರುವ ಕೆಲವು ಕೆಟ್ಟ ಪದಗಳು ಗೊತ್ತು ಎಂದರು. ಇದಕ್ಕೆ ಉತ್ತರಿಸಿದ ಧೋನಿ, ‘ತಮಿಳಿನ ಒಂದೇ ಒಂದು ಕೆಟ್ಟ ಪದ ನನಗೆ ಗೊತ್ತಿಲ್ಲ. ಆದರೆ ನನ್ನ ಹೆಂಡತಿಗೆ ಗೊತ್ತು. ಆದರೆ ನನಗೆ ಬೇರೆ ಭಾಷೆಗಳಲ್ಲಿ ಕೆಟ್ಟ ಪದ ಗೊತ್ತಿದೆ ಎಂದು ಧೋನಿ ತಮಾಷದಾಯಕ ಉತ್ತರ ನೀಡಿದರು.
Sakshi : “I know some bad words in Tamil”. MS Dhoni : “I didn’t teach any bad words to my wife”. ?❤️@MSDhoni @SaakshiSRawat #LGM pic.twitter.com/9UykXjgT7i
— DHONI Era™ ? (@TheDhoniEra) July 11, 2023
ನಟನಿಗೆ ತಂಡ ಸೇರಲು ಆಫರ್ ನೀಡಿದ ಧೋನಿ
ಈ ಅದ್ಧೂರಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮಿಳುನಾಡಿದ ಖ್ಯಾತ ಹಾಸ್ಯ ನಟ ಯೋಗಿ ಬಾಬು, ಐಪಿಎಲ್ನಲ್ಲಿ ಧೋನಿ ತಂಡವನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದರು. ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿದ ಧೋನಿ, ‘ಈಗಷ್ಟೆ ತಂಡದಿಂದ ರಾಯುಡು ನಿವೃತ್ತರಾಗಿದ್ದಾರೆ. ಹೀಗಾಗಿ ತಂಡದಲ್ಲಿ ಒಂದು ಸ್ಥಾನ ಖಾಲಿಯಾಗಿದೆ. ಈ ಬಗ್ಗೆ ಟೀಮ್ ಮ್ಯಾನೇಜ್ ಮೆಂಟ್ ಜೊತೆ ಮಾತನಾಡುತ್ತೇನೆ. ಬೇಕಿದ್ದರೆ ನೀವು ಆ ಜಾಗದಲ್ಲಿ ಆಡಬಹುದು’ ಎಂದು ಧೋನಿ ಹೇಳಿದ್ದಾರೆ.
Yogi Babu : I want to join CSK team
MS Dhoni : “Rayudu is retired. So, we do have a place in team. I’ll speak to the Management. But first please give call sheets for #LGM. Remember, They’ll bowl very fast to make the batter injured”?#MSDhoni #WhistlePodu pic.twitter.com/n98aMvcX89
— ♚ (@balltamperrer) July 11, 2023
ತಮಿಳುನಾಡು ನನ್ನನ್ನು ದತ್ತು ತೆಗೆದುಕೊಂಡಿದೆ
ಐಪಿಎಲ್ ಆರಂಭವಾದಾಗಿನಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದು, ತಂಡ ಐದು ಬಾರಿ ಐಪಿಎಲ್ ಗೆದ್ದಿದೆ. ತಮಿಳುನಾಡಿನ ಜನರು ಧೋನಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಕ್ರೀಡಾಂಗಣದ ಹೊರಗೆ ಮತ್ತು ಒಳಗೆ ಅನೇಕ ಬಾರಿ ನಾವು ನೋಡಿದ್ದೇವೆ. ಧೋನಿಗೂ ಕೂಡ ಇದು ಗೊತ್ತು. ಹೀಗಾಗಿ ತಮಿಳುನಾಡಿನ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ಧೋನಿ, ‘ಐಪಿಎಲ್ ಆರಂಭದಿಂದಲೂ ತಮಿಳುನಾಡು ನನ್ನನ್ನು ದತ್ತು ತೆಗೆದುಕೊಂಡಿದೆ’ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ