IND vs ZIM: ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮ್ಯಾಜಿಕ್; ಜಡ್ಡು ಸ್ಥಾನಕ್ಕೆ ಅಭಿಷೇಕ್ ಎಂಟ್ರಿ
Abhishek Sharma: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ, ಐಪಿಎಲ್ ಸ್ಟಾರ್ ಅಭಿಷೇಕ್ ಶರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಶನಿವಾರ ಹರಾರೆಯಲ್ಲಿ ನಡೆದ ನಾಲ್ಕನೇ ಟಿ20ಯಲ್ಲಿ ಜಿಂಬಾಬ್ವೆಯ ಆರಂಭಿಕ ಜೋಡಿಯನ್ನು ಮುರಿಯಲು ವಿಫಲವಾಗಿದ್ದ ಟೀಂ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟವರು ಅಭಿಷೇಕ್.
ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಿರುವಾಗ ಈ ಮೂವರು ಆಟಗಾರರಿಗೆ ಪರ್ಯಾಯವಾಗಿ ಯಾರು ಎಂಬ ಹಲವು ಪ್ರಶ್ನೆಗಳು ಎದ್ದಿವೆ. ಈಗಾಗಲೇ ಈ ಮೂವರ ಸ್ಥಾನಕ್ಕೆ ಹಲವು ಆಟಗಾರರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಏತನ್ಮಧ್ಯೆ, ಆಲ್ರೌಂಡರ್ ರವೀಂದ್ರ ಜಡೇಜಾ ಬದಲಿಗೆ ಪರ್ಯಾಯ ಆಟಗಾರ ಸಿಕ್ಕಿರುವ ಲಕ್ಷಣಗಳು ಗೋಚರಿಸುತ್ತಿವೆ. ವಾಸ್ತವವಾಗಿ, ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ, ಐಪಿಎಲ್ ಸ್ಟಾರ್ ಅಭಿಷೇಕ್ ಶರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಶನಿವಾರ ಹರಾರೆಯಲ್ಲಿ ನಡೆದ ನಾಲ್ಕನೇ ಟಿ20ಯಲ್ಲಿ ಜಿಂಬಾಬ್ವೆಯ ಆರಂಭಿಕ ಜೋಡಿಯನ್ನು ಮುರಿಯಲು ವಿಫಲವಾಗಿದ್ದ ಟೀಂ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟವರು ಅಭಿಷೇಕ್.
ಅಭಿಷೇಕ್ಗೆ ವಿಕೆಟ್
ಅಭಿಷೇಕ್ ಆರಂಭದಿಂದಲೂ ಬಹಳ ಎಚ್ಚರಿಕೆಯಿಂದ ಬೌಲಿಂಗ್ ಮಾಡಿದರು. ಇದನ್ನು ನೋಡಿದ ಅಭಿಮಾನಿಗಳಿಗೆ ಜಡೇಜಾ ನೆನಪಾದರು. ಅಭಿಷೇಕ್ ತಮ್ಮ ಮೊದಲ 3 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದರು. ಒಂಬತ್ತನೇ ಓವರ್‌ನಲ್ಲಿ ದಾಳಿಗಿಳಿದ ಅಭಿಷೇಕ್, ಜಿಂಬಾಬ್ವೆ ಆರಂಭಿಕ ಬ್ಯಾಟ್ಸ್‌ಮನ್ ತಡಿವಾನಾಶೆ ಮರುಮಣಿ ಅವರ ವಿಕೆಟ್ ಪಡೆದರು. ಈ ಪಂದ್ಯಕ್ಕೂ ಮೊದಲು ನಡೆದ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ ಅಭಿಷೇಕ್ಗೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. ಎರಡನೇ ಟಿ20ಯಲ್ಲಿ ಭರ್ಜರಿ ಶತಕ ಬಾರಿಸಿದ ಅಭಿಷೇಕ್ ಅವರ ಎರಡನೇ ದೊಡ್ಡ ಸಾಧನೆ ಇದಾಗಿದೆ.
First with the bat and now with the ball 🙌💙@IamAbhiSharma4 getting all bases covered ✅#SonySportsNetwork #ZIMvIND #TeamIndia pic.twitter.com/PmGR1vy2XK
— Sony Sports Network (@SonySportsNetwk) July 13, 2024
ಕ್ಯಾಚ್ ಕೈಬಿಟ್ಟ ರುತುರಾಜ್
ಇದೇ ಪಂದ್ಯದಲ್ಲಿ ಅಭಿಷೇಕ್ಗೆ ಎರಡನೇ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಅಭಿಷೇಕ್ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಕ್ಯಾಚ್ ಅನ್ನು ಕೈಬಿಟ್ಟರು. 11ನೇ ಓವರ್ ಬೌಲ್ ಮಾಡಿದ ಅಭಿಷೇಕ್ ಅವರ ಐದನೇ ಎಸೆತವನ್ನು ಬ್ರಿಯಾನ್ ಬೆನ್ನೆಟ್ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಮೇಲ್ಭಾಗದ ಅಂಚನ್ನು ತಾಗಿ ಕವರ್ ಕಡೆಗೆ ಹಾರಿಹೋಯಿತು. ಆದರೆ ಇಲ್ಲಿ ನಿಂತಿದ್ದ ಫೀಲ್ಡರ್ ರುತುರಾಜ್ ಗಾಯಕ್ವಾಡ್ ಅವರಿಗೆ ಸುಲಭವಾದ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಈ ಮೂಲಕ ಬ್ರೈನೆಟ್ ಔಟ್ ಆಗುವುದರಿಂದ ಪಾರಾದರು. ಆದರೆ, 14ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಆದರೆ ಅಭಿಷೇಕ್ ಶರ್ಮಾ ಸಿಕ್ಕಿರುವ ಚೊಚ್ಚಲ ಅವಕಾಶದಲ್ಲೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಆಯ್ಕೆ ಮಂಡಳಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಷೇಕ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿದರೆ ಅವರು ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಅವರ ಸ್ಥಾನವನ್ನು ಖಚಿತವಾಗಿ ತುಂಬಬಲ್ಲರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Sat, 13 July 24