IND vs ZIM: ಜಿಂಬಾಬ್ವೆ ನೆಲದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ? ಇದು ಅಂಕಿ ಅಂಶ ಹೇಳಿದ ಸತ್ಯ

IND vs ZIM: ಜಿಂಬಾಬ್ವೆ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ದುರ್ಬಲ ತಂಡಗಳ ಪಟ್ಟಿಯಲ್ಲಿದೆ. ಆದರೆ ಈ ತಂಡ ಇತ್ತೀಚೆಗೆ ಬಾಂಗ್ಲಾದೇಶವನ್ನು ಸೋಲಿಸಿದ್ದು, ಈ ತಂಡದ ಉತ್ಸಾಹ ಹೆಚ್ಚಲಿದೆ.

IND vs ZIM: ಜಿಂಬಾಬ್ವೆ ನೆಲದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ? ಇದು ಅಂಕಿ ಅಂಶ ಹೇಳಿದ ಸತ್ಯ
IND vs ZIM
Follow us
TV9 Web
| Updated By: ಪೃಥ್ವಿಶಂಕರ

Updated on: Aug 12, 2022 | 4:55 PM

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್‌ನಲ್ಲಿ ಭಾರತ ತಂಡ ತನ್ನ ಶಕ್ತಿ ಪ್ರದರ್ಶಿಸಿದ್ದು, ಎರಡು ಸರಣಿಗಳನ್ನು ಗೆದ್ದುಕೊಂಡಿದೆ. ಮೊದಲು ಭಾರತ ಏಕದಿನ ಸರಣಿಯಲ್ಲಿ (ODI series) ವಿಂಡೀಸ್ ತಂಡವನ್ನು ಸೋಲಿಸಿದರೆ, ಬಳಿಕ ಟಿ 20 ಸರಣಿಯಲ್ಲಿಯೂ ವಿಂಡೀಸ್​ಗೆ ವಿಜಯ ಒಲಿಯಲ್ಲಿಲ್ಲ. ಇದೀಗ ಟೀಂ ಇಂಡಿಯಾ (Team India) ಜಿಂಬಾಬ್ವೆ ಪ್ರವಾಸ ಕೈಗೊಂಡು ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಈ ಸರಣಿಯಲ್ಲಿ ಭಾರತದ ಹಲವು ಯುವ ತಾರೆಗಳಿಗೆ ಅವಕಾಶ ನೀಡಲಾಗಿದೆ. ಫಿಟ್ ಆಗಿರುವ ಕೆಎಲ್ ರಾಹುಲ್ (KL Rahul) ಮೇಲೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ. ಹೀಗಾಗಿ ಜಿಂಬಾಬ್ವೆ ಎದುರು ಭಾರತದ ಅಂಕಿಅಂಶಗಳು ಏನು ಹೇಳುತ್ತವೆ ಎಂಬುದನ್ನು ಈ ಸರಣಿ ಆರಂಭಕ್ಕೂ ಮೊದಲು ತಿಳಿಯುವುದು ಮುಖ್ಯವಾಗಿದೆ.

ಜಿಂಬಾಬ್ವೆ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ದುರ್ಬಲ ತಂಡಗಳ ಪಟ್ಟಿಯಲ್ಲಿದೆ. ಆದರೆ ಈ ತಂಡ ಇತ್ತೀಚೆಗೆ ಬಾಂಗ್ಲಾದೇಶವನ್ನು ಸೋಲಿಸಿದ್ದು, ಈ ತಂಡದ ಉತ್ಸಾಹ ಹೆಚ್ಚಲಿದೆ. ಈ ಗೆಲುವಿನಿಂದ ಆತ್ಮವಿಶ್ವಾಸದಲ್ಲಿರುವ ಜಿಂಬಾಬ್ವೆ ಯುವ ತಾರೆಗಳಿಂದ ಕಂಗೊಳಿಸುತ್ತಿರುವ ಭಾರತ ತಂಡವನ್ನು ಸೋಲಿಸಲು ಪ್ರಯತ್ನಿಸಲಿದೆ. ಈ ಸರಣಿಗಾಗಿ ಭಾರತ ತನ್ನ ಹಲವು ಅನುಭವಿಗಳಿಗೆ ವಿಶ್ರಾಂತಿ ನೀಡಿದೆ.

ಇದನ್ನೂ ಓದಿ
Image
IND vs ZIM: ಟೀಂ ಇಂಡಿಯಾ ನಾಯಕತ್ವದಲ್ಲಿ ಬದಲಾವಣೆ; ಶಿಖರ್ ಧವನ್ ಬದಲು ಕನ್ನಡಿಗನಿಗೆ ನಾಯಕತ್ವ
Image
Har Ghar Tiramga Anthem: ಹರ್ ಘರ್ ತಿರಂಗಾ ಸ್ಫೂರ್ತಿ ಗೀತೆಯಲ್ಲಿ ಕನ್ನಡ ಕಲರವ; ಮನೆ ಮನೆಗೂ ತ್ರಿವರ್ಣ ಎಂದ ರಾಹುಲ್
Image
ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ರಾಹುಲ್ ಬದಲು ಹಾರ್ದಿಕ್​ಗೆ ಉಪನಾಯಕತ್ವ ಪಟ್ಟ!

ಅಂಕಿಅಂಶಗಳು ಏನು ಹೇಳುತ್ತವೆ?

ಭಾರತ ಮೊದಲ ಬಾರಿಗೆ 1992-92ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಭಾರತ ಒಂದು ಪಂದ್ಯವನ್ನು ಆಡಿದ್ದು 1-0 ಅಂತರದಲ್ಲಿ ಗೆದ್ದಿತ್ತು. ಇದಾದ ಬಳಿಕ 1996-97ರಲ್ಲಿ ಜಿಂಬಾಬ್ವೆಗೆ ತೆರಳಿದ ಭಾರತ ಈ ಬಾರಿಯೂ 1-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಭಾರತ 1998-99ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಜಿಂಬಾಬ್ವೆ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಉಳಿದ ಎರಡು ಏಕದಿನ ಪಂದ್ಯಗಳನ್ನು ಭಾರತ ಗೆದ್ದು ಮೂರು ಪಂದ್ಯಗಳ ODI ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.

ಇದಾದ ಬಳಿಕ ಭಾರತ 2013ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಬಾರಿ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು ಆಡಿದ್ದು, 5-0 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2015 ಮತ್ತು 2016 ರಲ್ಲಿ, ಭಾರತವು ಮತ್ತೊಮ್ಮೆ ಜಿಂಬಾಬ್ವೆ ನೆಲದಲ್ಲಿ ಮೂರು ಪಂದ್ಯಗಳ ODI ಸರಣಿಯನ್ನು ಆಡಿ ಎರಡೂ ಪ್ರವಾಸಗಳಲ್ಲೂ 3-0 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಜಿಂಬಾಬ್ವೆ ತನ್ನ ತವರಿನಲ್ಲಿ ಭಾರತ ವಿರುದ್ಧ ಇದುವರೆಗೆ ಏಕದಿನ ಸರಣಿಯನ್ನು ಗೆದ್ದಿಲ್ಲ.

ಮತ್ತೊಂದೆಡೆ, ನಾವು ಎರಡು ತಂಡಗಳ ನಡುವಿನ ಒಟ್ಟಾರೆ ಮುಖಾಮುಖಿ ಅಂಕಿಅಂಶಗಳ ಬಗ್ಗೆ ಮಾತನಾಡಿದರೆ, ಎರಡೂ ತಂಡಗಳು ಒಟ್ಟು 63 ಏಕದಿನ ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಭಾರತ 51 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಎರಡು ಪಂದ್ಯಗಳು ಟೈ ಆಗಿವೆ. ಜೊತೆಗೆ ಜಿಂಬಾಬ್ವೆ 10 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಟ್ಟಾರೆ ಅಂಕಿ-ಅಂಶದಲ್ಲಿ ಭಾರತದ ಮೇಲುಗೈ ಎದ್ದು ಕಾಣಿಸುತ್ತದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ