Independence Day 2022: ಆಗಸ್ಟ್ 15 ರಂದು 6 ಪಂದ್ಯವಾಡಿದ್ದ ಭಾರತ: ಗೆದ್ದಿದ್ದು ಯಾರು?

| Updated By: ಝಾಹಿರ್ ಯೂಸುಫ್

Updated on: Aug 15, 2022 | 12:56 PM

Independence Day 2022: 2021 ರ ಆಗಸ್ಟ್ 12 ರಿಂದ 16ರವರೆಗೆ ಲಾರ್ಡ್ಸ್​​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಗಳಿಸಿತ್ತು.

Independence Day 2022: ಆಗಸ್ಟ್ 15 ರಂದು 6 ಪಂದ್ಯವಾಡಿದ್ದ ಭಾರತ: ಗೆದ್ದಿದ್ದು ಯಾರು?
Team India
Follow us on

ಆಗಸ್ಟ್ 15…ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಇಂದಿಗೆ 75 ವರ್ಷಗಳು. ಇಡೀ ದೇಶವೇ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಕಳೆದ 75 ವರ್ಷಗಳಲ್ಲಿ ಭಾರತವು ಕ್ರೀಡೆಯಲ್ಲಿ ಸಾಧಿಸಿದ ಪ್ರಗತಿ ಒಂದು ತೂಕವಾದರೆ, ಕ್ರಿಕೆಟ್​ನಲ್ಲಿ ಮೆರೆದ ಪಾರುಪತ್ಯ ಮತ್ತೊಂದು ತೂಕ ಎಂದೇ ಹೇಳಬಹುದು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ದಿನಾಂಕದಂದು ಟೀಮ್ ಇಂಡಿಯಾ ಪಂದ್ಯವನ್ನಾಡಿದ್ದು ಅತೀ ವಿರಳ. ಅಂದರೆ ಆಗಸ್ಟ್ 15 ರಂದು ಇದುವರೆಗೆ ಕೇವಲ 6 ಪಂದ್ಯಗಳನ್ನು ಮಾತ್ರ ಆಡಿದೆ. ಆ ಪಂದ್ಯಗಳ ಫಲಿತಾಂಶ ಏನಾಗಿತ್ತು ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ…

ಭಾರತ vs ಇಂಗ್ಲೆಂಡ್ ಟೆಸ್ಟ್​ ಪಂದ್ಯ:

  • ಸ್ವಾತಂತ್ರ್ಯದ ನಂತರ ಭಾರತ ತಂಡವು ಆಗಸ್ಟ್ 15 ರಂದು ಮೊದಲ ಪಂದ್ಯವಾಡಿದ್ದು ಇಂಗ್ಲೆಂಡ್ ವಿರುದ್ದ ಎಂಬುದು ವಿಶೇಷ. 1952 ರಲ್ಲಿ ಓವಲ್​ ಮೈದಾನದಲ್ಲಿ ಆಗಸ್ಟ್​ 14 ರಿಂದ 19ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ಗಳಿಗೆ ಆಲೌಟ್ ಆಯಿತು. ಇದಾಗ್ಯೂ ಮಳೆಯ ಅಡ್ಡಿಯ ಕಾರಣ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.

ಭಾರತ vs ಶ್ರೀಲಂಕಾ ಟೆಸ್ಟ್:

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
  • 49 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ ತಂಡ ಮತ್ತೆ ಆಗಸ್ಟ್​ 15 ರಂದು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದು 2001 ರಲ್ಲಿ. ಶ್ರೀಲಂಕಾ ವಿರುದ್ದ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 187 ರನ್‌ಗಳಿಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಸನತ್ ಜಯಸೂರ್ಯ ಅವರ ಶತಕದ ನೆರವಿನಿಂದ ಲಂಕಾ 362 ರನ್ ಗಳಿಸಿತು. ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟ್ ಆಗಿ ನಿರಾಸೆ ಮೂಡಿಸಿತು. ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಕೇವಲ 6 ರನ್‌ಗಳ ಗುರಿ ಪಡೆದ ಶ್ರೀಲಂಕಾ 10 ವಿಕೆಟ್‌ಗಳಿಂದ ಜಯ ಸಾಧಿಸಿತು. ಇದು ಆಗಸ್ಟ್ 15 ರಂದು ಪಂದ್ಯವಾಡಿದ ಭಾರತ ಕಂಡ ಮೊದಲ ಸೋಲಾಗಿತ್ತು.

ಭಾರತ vs ಇಂಗ್ಲೆಂಡ್ ಟೆಸ್ಟ್:

  • 2014 ರಲ್ಲಿ ಭಾರತ ಹಾಗೂ ಇಂಗ್ಲೆಂಡ್​ ಓವಲ್ ಮೈದಾನದಲ್ಲಿ ಮುಖಾಮುಖಿಯಾಗಿತ್ತು. ಆಗಸ್ಟ್​ 15 ರಿಂದ ಶುರುವಾಗಿದ್ದ ಈ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 486 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 94 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್ ಹಾಗೂ 244 ರನ್​ಗಳ ಹೀನಾಯ ಸೋಲನುಭವಿಸಿತು.

ಭಾರತ v ಶ್ರೀಲಂಕಾ:

  • 2015 ರಲ್ಲಿ ಗಾಲೆ ಟೆಸ್ಟ್‌ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 375 ರನ್ ಗಳಿಸಿತ್ತು. ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 367 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿತು. ಇದಾಗ್ಯೂ ಮೊದಲ ಇನಿಂಗ್ಸ್ ಮುನ್ನಡೆ ಹೊಂದಿದ್ದ ಭಾರತ ತಂಡಕ್ಕೆ 176 ರನ್‌ಗಳ ಸುಲಭ ಗುರಿ ಲಭಿಸಿದೆ. ಆದರೆ ಶ್ರೀಲಂಕಾ ಬೌಲಿಂಗ್​ಗೆ ಕೇವಲ 112 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಮತ್ತೊಮ್ಮೆ ಸೋಲನುಭವಿಸಿತು.

ಭಾರತ vs ವೆಸ್ಟ್ ಇಂಡೀಸ್:

  • 2019, ಆಗಸ್ಟ್ 15 ರಂದು ಭಾರತ ತಂಡವು ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಿತ್ತು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ನಡೆದ ಈ ಪಂದ್ಯವು ಮಳೆಯ ಕಾರಣ 35 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಅದರಂತೆ ವೆಸ್ಟ್ ಇಂಡೀಸ್ 35 ಓವರ್‌ಗಳಲ್ಲಿ 240 ರನ್ ಗಳಿಸಿತು. ಭಾರತಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 255 ರನ್ ಗಳ ಗುರಿ ನೀಡಲಾಯಿತು. ನಾಯಕ ವಿರಾಟ್ ಅವರ ಶತಕದ ನೆರವಿನಿಂದ ಭಾರತ ಚೊಚ್ಚಲ ಬಾರಿಗೆ ಆಗಸ್ಟ್ 15 ರಂದು ಜಯ ಸಾಧಿಸಿತು.

ಭಾರತ vs ಇಂಗ್ಲೆಂಡ್:

  • 2021 ರ ಆಗಸ್ಟ್ 12 ರಿಂದ 16ರವರೆಗೆ ಲಾರ್ಡ್ಸ್​​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಗಳಿಸಿತ್ತು. ಉತ್ತರವಾಗಿ ಇಂಗ್ಲೆಂಡ್ 391 ರನ್ ಕಲೆಹಾಕಿತು. ಇನ್ನು ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 298 ರನ್​ಗಳಿಸುವ ಮೂಲಕ ಇಂಗ್ಲೆಂಡ್‌ಗೆ 272 ರನ್ ಗುರಿ ನೀಡಿತು. ಅಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವನ್ನು ಕೇವಲ 120 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡವು ಭರ್ಜರಿ ಗೆಲುವು ದಾಖಲಿಸಿದ್ದು ಇತಿಹಾಸ.

 

 

 

Published On - 12:54 pm, Mon, 15 August 22