Umesh Yadav: ಉಮೇಶ್ ಯಾದವ್ ಬೆಂಕಿ ಬೌಲಿಂಗ್: ಎದುರಾಳಿಗಳಿಗೆ ನಡುಕ ಶುರು..!
Royal london one day cup: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಉಮೇಶ್ ಯಾದವ್ ರಾಯಲ್ ಲಂಡನ್ ಕಪ್ನಲ್ಲಿ ಬೆಂಕಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದಾರೆ.
ಇಂಗ್ಲೆಂಡ್ ಒಂದೆಡೆ ದಿ ಹಂಡ್ರೆಡ್ ಲೀಗ್ (The Hundred) ನಡೆಯುತ್ತಿದ್ದರೆ, ಮತ್ತೊಂದೆಡೆ ರಾಯಲ್ ಲಂಡನ್ ಒನ್ ಡೇ ಕಪ್ (Royal London One Day Cup) ನಡೆಯುತ್ತಿದೆ. ಈ ಎರಡೂ ಟೂರ್ನಿಗಳಲ್ಲೂ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ರಾಯಲ್ ಲಂಡನ್ ಕಪ್ನಲ್ಲಿ ಟೀಮ್ ಇಂಡಿಯಾ (Team India) ಆಟಗಾರರಾದ ಉಮೇಶ್ ಯಾದವ್ (Umesh Yadav), ಕೃನಾಲ್ ಪಾಂಡ್ಯ, ಚೇತೇಶ್ವರ ಪೂಜಾರ ಕಾಣಿಸಿಕೊಂಡಿದ್ದಾರೆ. ಒಂದೆಡೆ ಪೂಜಾರ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದರೆ, ಮತ್ತೊಂದೆಡೆ ಉಮೇಶ್ ಯಾದವ್ ಬೆಂಕಿ ಬೌಲಿಂಗ್ ಮೂಲಕ ಬ್ಯಾಟ್ಸ್ಮನ್ಗಳನ್ನು ಕಾಡುತ್ತಿರುವುದು ವಿಶೇಷ.
ಕಳೆದ ತಿಂಗಳು ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಉಮೇಶ್ ಯಾದವ್ ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್ನ ಕೌಂಟಿ ಕ್ಲಬ್ ಮಿಡ್ಲ್ ಸೆಕ್ಸ್ ಪರ ಸಹಿ ಮಾಡಿ ಮೈದಾನಕ್ಕಿಳಿದಿದ್ದರು. ಅಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಬೌಲರ್ನನ್ನು ಆ ಬಳಿಕ ರಾಯಲ್ ಲಂಡನ್ ಒನ್ ಡೇ ಕಪ್ಗೂ ಆಯ್ಕೆ ಮಾಡಲಾಗಿತ್ತು. ಇದೀಗ ಸಿಕ್ಕ ಅವಕಾಶದಲ್ಲಿ ಉಮೇಶ್ ಯಾದವ್ ಬ್ಯಾಟ್ಸ್ಮನ್ಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದಾರೆ.
ಏಕೆಂದರೆ ಇಡೀ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಉಮೇಶ್ ಯಾದವ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮಿಡ್ಲ್‌ಸೆಕ್ಸ್ ಪರ ಆಡುತ್ತಿರುವ ಟೀಮ್ ಇಂಡಿಯಾ ವೇಗಿ ಇದುವರೆಗೆ 5 ಪಂದ್ಯಗಳಲ್ಲಿ ಬರೋಬ್ಬರಿ 15 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರಲ್ಲಿ ಒಂದು ಬಾರಿ 5 ವಿಕೆಟ್‌ಗಳನ್ನು ಕೂಡ ಕಬಳಿಸಿದ್ದರು ಎಂಬುದು ವಿಶೇಷ.
? | UMESH WITH OUR FIRST WICKET!@y_umesh with another wicket for Middlesex as Eskinazi takes a simple catch at slip! ?
Watch Here ⬇️ | #OneMiddlesex pic.twitter.com/JbYsGYuXwo
— Middlesex Cricket (@Middlesex_CCC) August 14, 2022
ಉಮೇಶ್ ಯಾದವ್ ಅವರ ಈ ಪ್ರಚಂಡ ಪ್ರದರ್ಶನದಿಂದಾಗಿ ಇದೀಗ ಮಿಡ್ಲ್‌ಸೆಕ್ಸ್ ತಂಡವು 5 ಪಂದ್ಯಗಳಲ್ಲಿ 4 ರಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಮಿಡ್ಲ್‌ಸೆಕ್ಸ್ ಸೋತ ಪಂದ್ಯದಲ್ಲಿ ಉಮೇಶ್ ಯಾದವ್ ಕೇವಲ 1 ವಿಕೆಟ್ ಪಡೆದಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಮಿಡ್ಲ್‌ಸೆಕ್ಸ್ ಗೆಲುವಿನಲ್ಲಿ ಟೀಮ್ ಇಂಡಿಯಾ ವೇಗಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹೀಗಾಗಿಯೇ ಇದೀಗ ಮಿಡ್ಲ್‌ಸೆಕ್ಸ್ ತಂಡದ ಎದುರಾಳಿಗಳಿಗೆ ಉಮೇಶ್ ಯಾದವ್ ಅವರನ್ನು ಎದುರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
? | YADAV STRIKES!! Watch @y_umesh pick up the first two wickets of the match! ?
Watch Here ⬇️ | #OneMiddlesex pic.twitter.com/zT04ZsAx8c
— Middlesex Cricket (@Middlesex_CCC) August 12, 2022
ಹೀಗೆ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಉಮೇಶ್ ಯಾದವ್ ರಾಯಲ್ ಲಂಡನ್ ಕಪ್ನಲ್ಲಿ ಬೆಂಕಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದಾರೆ. ಅಲ್ಲದೆ ತಮ್ಮ ಹಳೆಯ ಲಯವನ್ನು ಮರಳಿ ಪಡೆಯುವ ಮೂಲಕ ಮತ್ತೊಮ್ಮೆ ಭಾರತ ಏಕದಿನ ತಂಡದ ಕದತಟ್ಟುವ ವಿಶ್ವಾಸದಲ್ಲಿದ್ದಾರೆ.