AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BGT ಸರಣಿಗೂ ಮುನ್ನ ಭಾರತ ಎ ಮತ್ತು ಟೀಮ್ ಇಂಡಿಯಾ ನಡುವೆ ಅಭ್ಯಾಸ ಪಂದ್ಯ

Border - Gavaskar Trophy: 1996-97 ರಿಂದ ಶುರುವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ 16 ಸರಣಿಗಳನ್ನು ಆಡಿದೆ. ಈ ವೇಳೆ ಭಾರತ ತಂಡವು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ. ಇನ್ನು ಒಂದೇ ಒಂದು ಸರಣಿಯು ಡ್ರಾನಲ್ಲಿ ಅಂತ್ಯ ಕಂಡಿದೆ.

BGT ಸರಣಿಗೂ ಮುನ್ನ ಭಾರತ ಎ ಮತ್ತು ಟೀಮ್ ಇಂಡಿಯಾ ನಡುವೆ ಅಭ್ಯಾಸ ಪಂದ್ಯ
Team India
ಝಾಹಿರ್ ಯೂಸುಫ್
|

Updated on: May 28, 2024 | 7:26 AM

Share

ಅಕ್ಟೋಬರ್ ಮತ್ತು ನವೆಂಬರ್ ನಡುವೆ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ವಿಶೇಷ ಎಂದರೆ ಬಾರ್ಡರ್ – ಗಾವಸ್ಕರ್ ಟ್ರೋಫಿ (BGT) ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಎ 2 ಪಂದ್ಯಗಳನ್ನಾಡಿದೆ. ಅಕ್ಟೋಬರ್ 31 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಮುಖಾಮುಖಿಯಾಗಲಿದ್ದು, 4 ದಿನದಾಟಗಳ 2 ಟೆಸ್ಟ್​ ಪಂದ್ಯಗಳನ್ನಾಡಲಿದ್ದಾರೆ. ಅಲ್ಲದೆ ಈ ಮ್ಯಾಚ್​ಗಳ ಬಳಿಕ ಆಸ್ಟ್ರೇಲಿಯಾದಲ್ಲೇ ಭಾರತ ಎ ತಂಡ ಟೀಮ್ ಇಂಡಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

  • ಭಾರತ A vs ಆಸ್ಟ್ರೇಲಿಯಾ A: ಪಂದ್ಯ 1 (ಅಕ್ಟೋಬರ್ 31 ರಿಂದ ನವೆಂಬರ್ 3)
  • ಭಾರತ A vs ಆಸ್ಟ್ರೇಲಿಯಾ A: ಪಂದ್ಯ 2 (ನವೆಂಬರ್ 7 ರಿಂದ ನವೆಂಬರ್ 10)
  • ಭಾರತ vs ಭಾರತ A: ಅಭ್ಯಾಸ ಪಂದ್ಯ (ನವೆಂಬರ್ 15 ರಿಂದ ನವೆಂಬರ್ 17)

ಬಾರ್ಡರ್ ಗವಾಸ್ಕರ್ ಟ್ರೋಫಿ ಯಾವಾಗ ಶುರು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಈ ಹಿಂದೆ BGT ಸರಣಿಯಲ್ಲಿ 3 ಹಾಗೂ 4 ಪಂದ್ಯಗಳನ್ನಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಯೋಜಿಸುತ್ತಿರುವುದು ವಿಶೇಷ.

ಈ ಸರಣಿಯ ಮೊದಲ ಪಂದ್ಯವು ಪರ್ತ್​ನಲ್ಲಿ ನಡೆದರೆ, 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ 2ನೇ ಪಂದ್ಯವು ಡೇ ನೈಟ್ ಪಂದ್ಯವಾಗಿದೆ. ಈ ಅಹರ್ನಿಶಿ ಪಂದ್ಯವನ್ನು ಪಿಂಕ್ ಬಾಲ್​ನಲ್ಲಿ ಆಡಲಾಗುತ್ತದೆ.

ಇದನ್ನೂ ಓದಿ: IPL 2024: ಐಪಿಎಲ್​ ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚು ಹಣ ಪಡೆದ ಸ್ಟಾರ್ಕ್, ಕಮಿನ್ಸ್

ಇನ್ನು ಮೂರನೇ ಪಂದ್ಯಕ್ಕೆ ಗಾಬ್ಬಾ ಮೈದಾನ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್​ನಲ್ಲಿ ನಡೆಯಲಿದೆ. ಅಂದರೆ ನಾಲ್ಕನೇ ಪಂದ್ಯವು ಬಾಕ್ಸಿಂಗ್ ಟೆಸ್ಟ್​. ಕ್ರಿಸ್​ಮಸ್ ಹಬ್ಬದ ಮರುದಿನ ನಡೆಯುವ ಪಂದ್ಯವನ್ನು ಬಾಕ್ಸಿಂಗ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 3, 2025 ರಿಂದ ಶುರುವಾಗಲಿದೆ.

ಭಾರತ vs ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಸ್ಥಳ
ಮೊದಲ ಟೆಸ್ಟ್ ನವೆಂಬರ್ 22 ರಿಂದ 26, 2024 ಪರ್ತ್​ ಸ್ಟೇಡಿಯಂ, ಪರ್ತ್​
ಎರಡನೇ ಟೆಸ್ಟ್​ (ಪಿಂಕ್ ಬಾಲ್) ಡಿಸೆಂಬರ್ 6 ರಿಂದ 10, 2024 ಅಡಿಲೇಡ್ ಓವಲ್ ಸ್ಟೇಡಿಯಂ, ಅಡಿಲೇಡ್
ಮೂರನೇ ಟೆಸ್ಟ್​​ ಡಿಸೆಂಬರ್ 14 ರಿಂದ 18, 2024 ದಿ ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್​ (ಬಾಕ್ಸಿಂಗ್ ಡೇ) ಡಿಸೆಂಬರ್ 26 ರಿಂದ 30, 2024 ಎಂಸಿಜಿ ಸ್ಟೇಡಿಯಂ, ಮೆಲ್ಬೋರ್ನ್​
ಐದನೇ ಟೆಸ್ಟ್​ ಜನವರಿ 3 ರಿಂದ 7, 2025 ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು