AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳು ಆರಾಧ್ಯಾ ಜೊತೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ

ಕಾನ್ 2026 ಚಲನಚಿತ್ರೋತ್ಸವದಲ್ಲಿ ಭಾರತದ ತಾರೆಯರ ಮೆರುಗು. ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯಾ ಜೊತೆ ಆಗಮಿಸಿ ಗಮನ ಸೆಳೆದರೆ, ಕರ್ನಾಟಕದ ದಿಶಾ ಮದನ್ 80 ವರ್ಷ ಹಳೆಯ ರೇಷ್ಮೆ ಸೀರೆಯನ್ನು ಮರುಬಳಕೆ ಮಾಡಿ ತಯಾರಿಸಿದ ಗೌನ್ ಧರಿಸಿ ಸುಸ್ಥಿರ ಫ್ಯಾಷನ್ ಪ್ರದರ್ಶಿಸಿದರು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಗಳು ಆರಾಧ್ಯಾ ಜೊತೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ
ಆರಾಧ್ಯಾ-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 22, 2026 | 7:59 AM

Share

ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಕಾನ್ ಚಲನಚಿತ್ರೋತ್ಸವ 2026’ (Cannes) ಫ್ರಾನ್ಸ್‌ನ ಕರಾವಳಿ ನಗರವಾದ ಕಾನ್‌ನಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ. ಮೇ 12 ರಂದು ಆರಂಭವಾಗಿರುವ ಈ 79ನೇ ಆವೃತ್ತಿಯ ಸಿನಿಮೋತ್ಸವವು ಮೇ 23ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತದ ಸಿನಿಮಾ ತಾರೆಯರು ಮತ್ತು ಫ್ಯಾಷನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಪರವಾಗಿ ಹಲವು ಪ್ರಮುಖ ಸೆಲೆಬ್ರಿಟಿಗಳು ಈ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

ಇದೀಗ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯಾ ಬಚ್ಚನ್ ಅವರೊಂದಿಗೆ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸಲು ಮುಂಬೈ ವಿಮಾನ ನಿಲ್ದಾಣದಿಂದ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಾಯಿ-ಮಗಳ ಜೋಡಿ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿದ್ದು, ಇವರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕಳೆದ 24 ವರ್ಷಗಳಿಂದ ಕಾನ್ ಉತ್ಸವದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಐಶ್ವರ್ಯಾ ರೈ, ಈ ಬಾರಿಯೂ ಬ್ರ್ಯಾಂಡ್ ರಾಯಭಾರಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

ಮತ್ತೊಂದೆಡೆ, ಈ ಬಾರಿಯ ಕಾನ್ ಸಿನಿಮೋತ್ಸವದಲ್ಲಿ ಕರ್ನಾಟಕದ ಹೆಮ್ಮೆಯ ನಟಿ ದಿಶಾ ಮದನ್ ಎರಡನೇ ಬಾರಿಗೆ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಸುಸ್ಥಿರ ಫ್ಯಾಷನ್ ಅನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದ ದಿಶಾ, ಸುಮಾರು 80 ವರ್ಷ ಹಳೆಯದಾದ ಎರಡು ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಮರುಬಳಕೆ ಮಾಡಿ ಸಿದ್ಧಪಡಿಸಿದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಬೆಂಗಳೂರಿನ ‘ನಿಹಾರಿಕಾ ವಿವೇಕ್’ ವಿನ್ಯಾಸಗೊಳಿಸಿದ ಈ ಉಡುಪಿನಲ್ಲಿ ಕರ್ನಾಟಕದ ಕಲೆ ಹಾಗೂ ಬಂಜಾರ ಕಸೂತಿ ಕೆಲಸವಿದ್ದು, ಐದು ಜನ ಮಹಿಳಾ ಕುಶಲಕರ್ಮಿಗಳು ಸುಮಾರು 2500 ಗಂಟೆಗಳ ಕಾಲ ಶ್ರಮಿಸಿ ಇದನ್ನು ಸಿದ್ಧಪಡಿಸಿದ್ದಾರೆ.

ಐಶ್ವರ್ಯಾ ರೈ, ಆಲಿಯಾ ಭಟ್, ಕರಣ್ ಜೋಹರ್, ಅದಿತಿ ರಾವ್ ಹೈದರಿ ಅವರಂತಹ ದಿಗ್ಗಜರ ಜೊತೆಗೆ ಕನ್ನಡಿಗಿ ದಿಶಾ ಮದನ್ ಕೂಡ ಕಾನ್ ಉತ್ಸವದಲ್ಲಿ ಭಾರತೀಯ ಕಲೆ ಮತ್ತು ಪ್ರಾದೇಶಿಕ ಸಿನಿಮಾದ ಹೆಮ್ಮೆಯನ್ನು ಎತ್ತಿ ಹಿಡಿಯುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More