AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs AUS A: ಆಸೀಸ್ ವಿರುದ್ಧ 412 ರನ್ ಬೆನ್ನಟ್ಟಿ ಗೆದ್ದ ಭಾರತಕ್ಕೆ ಟೆಸ್ಟ್ ಸರಣಿ

IND A vs AUS A: ಲಕ್ನೋದಲ್ಲಿ ನಡೆದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡ ಆಸ್ಟ್ರೇಲಿಯಾ ಎ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸರಣಿ ಗೆದ್ದುಕೊಂಡಿತು. ಕೆಎಲ್ ರಾಹುಲ್ (176*) ಮತ್ತು ಸಾಯಿ ಸುದರ್ಶನ್ (100) ಅವರ ಭರ್ಜರಿ ಶತಕಗಳು, ಹಾಗೂ ಮಾನವ್ ಸುತಾರ್ ಅವರ 8 ವಿಕೆಟ್‌ಗಳ ಪ್ರದರ್ಶನದಿಂದ ಭಾರತ 412 ರನ್‌ಗಳ ಬೃಹತ್ ಗುರಿ ಯಶಸ್ವಿಯಾಗಿ ಬೆನ್ನಟ್ಟಿತು.

IND A vs AUS A: ಆಸೀಸ್ ವಿರುದ್ಧ 412 ರನ್ ಬೆನ್ನಟ್ಟಿ ಗೆದ್ದ ಭಾರತಕ್ಕೆ ಟೆಸ್ಟ್ ಸರಣಿ
Ind A Vs Aus A
ಪೃಥ್ವಿಶಂಕರ
|

Updated on: Sep 26, 2025 | 3:16 PM

Share

ಲಕ್ನೋದಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ, ಆಸ್ಟ್ರೇಲಿಯಾ ಎ ( India A vs Australia A) ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ಕೆಎಲ್ ರಾಹುಲ್ (KL Rahul), ಸಾಯಿ ಸುದರ್ಶನ್ ಶತಕದ ಇನ್ನಿಂಗ್ಸ್ ಆಡಿದರು. ಕೆಎಲ್ ರಾಹುಲ್ ಅಜೇಯ 176 ರನ್ ಗಳಿಸಿದರೆ, ಸಾಯಿ ಸುದರ್ಶನ್ 172 ಎಸೆತಗಳಲ್ಲಿ 100 ರನ್ ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಧ್ರುವ್ ಜುರೆಲ್ ಕೂಡ 56 ರನ್​ಗಳ ಕಾಣಿಕೆ ನೀಡಿದರು.

ಆಸ್ಟ್ರೇಲಿಯಾ ನೀಡಿದ 412 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಷ್ಟು ದೊಡ್ಡ ಗುರಿ ಬೆನ್ನಟ್ಟಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಮಾತ್ರವಲ್ಲದೆ, ಸ್ಪಿನ್ನರ್ ಮಾನವ್ ಸುತಾರ್ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ 8 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿದ್ದ ಮಾನವ್ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದರು.

ಟೆಸ್ಟ್ ಪಂದ್ಯದ ಸಾರಾಂಶ ಹೀಗಿದೆ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 420 ರನ್ ಗಳಿಸಿತು. ತಂಡದ ಪರ ನಾಯಕ ಮೆಕ್‌ಸ್ವೀನಿ 74 ಮತ್ತು ಜ್ಯಾಕ್ ಎಡ್ವರ್ಡ್ಸ್ 88 ರನ್ ಗಳಿಸಿದರು. ಮರ್ಫಿ ಕೂಡ 76 ರನ್ ಕಲೆಹಾಕಿದರು. ಇದಕ್ಕೆ ಉತ್ತರವಾಗಿ, ಭಾರತ ಎ ತಂಡವು ಕೇವಲ 194 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಸಾಯಿ ಸುದರ್ಶನ್ 75 ರನ್ ಗಳಿಸಿದರೆ, ಬೇರೆ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಎ ತಂಡವು ಗಮನಾರ್ಹ ಪುನರಾಗಮನ ಮಾಡಿತು. ಗುರ್ನೂರ್ ಬ್ರಾರ್, ಮಾನವ್ ಸುತಾರ್, ಸಿರಾ ಮತ್ತು ಯಶ್ ಠಾಕೂರ್ ಅದ್ಭುತ ಬೌಲಿಂಗ್ ಮಾಡಿ ಆಸ್ಟ್ರೇಲಿಯಾವನ್ನು 185 ರನ್‌ಗಳಿಗೆ ಸೀಮಿತಗೊಳಿಸಿದರು. ಭಾರತಕ್ಕೆ ಬೃಹತ್ ಗುರಿ ಅಗತ್ಯವಿದ್ದರೂ, ಅದನ್ನು ಸಾಧಿಸುವುದು ಅಸಾಧ್ಯವೆಂದು ತೋರುತ್ತಿತ್ತು. ಆದರೆ ರಾಹುಲ್, ಸುದರ್ಶನ್ ಮತ್ತು ಜುರೆಲ್ ಈ ಕೆಲಸವನ್ನು ಸುಲಭಗೊಳಿಸಿದರು. ಈ ಗೆಲುವಿನೊಂದಿಗೆ, ಭಾರತ ಎ ತಂಡವು ಅನಧಿಕೃತ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.

ಟೆಸ್ಟ್ ಕ್ರಿಕೆಟ್ ಆಡದಿರಲು ನಿರ್ಧರಿಸಿದ ಶ್ರೇಯಸ್ ಅಯ್ಯರ್; ಕಾರಣ ಕೂಡ ಬಹಿರಂಗ

ಟೀಂ ಇಂಡಿಯಾಗೆ ಸಿಹಿ ಸುದ್ದಿ

ಭಾರತ ಎ ತಂಡದ ಗೆಲುವು ಭಾರತ ತಂಡಕ್ಕೂ ಒಳ್ಳೆಯ ಸುದ್ದಿ, ಏಕೆಂದರೆ ಕೆಎಲ್ ರಾಹುಲ್, ಸಾಯಿ ಸುದರ್ಶನ್ ಮತ್ತು ಧ್ರುವ್ ಜುರೆಲ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಭಾಗವಾಗಿದ್ದಾರೆ. ಮೂವರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಮ್ಮ ರನ್ ಸ್ಕೋರಿಂಗ್ ಫಾರ್ಮ್ ಅನ್ನು ಮುಂದುವರಿಸುವ ನಿರೀಕ್ಷೆಯಿದೆ.